ಫ್ಯಾಕ್ಟ್‌ಚೆಕ್: Pathaan ಸಿನಿಮಾ ಸೋತರೆ ತಮ್ಮ ಮನೆಯನ್ನು ಮಾರಟ ಮಾಡುವುದಾಗಿ ಶಾರುಖ್ ಹೇಳಿದ್ದು ನಿಜವೇ?

Pathaan ಸಿನಿಮಾ ಫ್ಲಾಪ್ ಆದಲ್ಲಿ ತಮ್ಮ ಮನೆಯನ್ನು ಮಾರಾಟ ಮಾಡುವುದಾಗಿ ಶಾರುಖ್ ಖಾನ್ ಘೋಷಿಸಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಕಾಶ್ ಅಹಿರ್, ಎಂಬ ಗುಜರಾತ್‌ನ ಹಿಂದೂ ಯುವ ವಾಹಿನಿಯ ಮಾಜಿ ಅಧ್ಯಕ್ಷ   ಹಂಚಿಕೊಂಡಿದ್ದಾರೆ.

“ಶಾರುಖ್ ಖಾನ್ ಭಾವನಾತ್ಮಕ ಮನವಿ ಮಾಡಿದ್ದಾರೆ! Pathaan ಚಿತ್ರ ವಿಫಲವಾದರೆ, ತನ್ನ ಮನೆ ಮಾರಾಟ ಮಾಡುತ್ತೇನೆ ಎಂದಿದ್ದಾರೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಅವರ ಮನೆಯನ್ನು ಮಾರಾಟ ಮಾಡಲು ಸಹಾಯ ಮಾಡೋಣ “ಪಠಾಣ್ ಬಹಿಷ್ಕರಿಸಿ ” ಎಂಬ ಪೋಸ್ಟ್‌ಅನ್ನು ಟ್ವೀಟ್ ಮಾಡಿದ್ದಾರೆ.

ವೈರಲ್ ಟ್ವೀಟ್ 1.8K ಯಷ್ಟು ರೀಟ್ವೀಟ್‌ಗಳು ಮತ್ತು 8.6K ಲೈಕ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೆ, ಕಾಮೆಂಟ್ ವಿಭಾಗದಲ್ಲಿ ಶಾರುಖ್ ಮತ್ತು ಅವರ ಮುಂಬರುವ ಚಿತ್ರ ಪಠಾಣ್ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಶಾರುಖ್ ಖಾನ್ ಅವರು ಅಂತಹ ಹೇಳಿಕೆ ನೀಡಿದ್ದಾರೆ ಎಂದು ಯಾವ ಮಾಹಿತಿಯು ಲಭ್ಯವಾಗಿಲ್ಲ. ಇದಲ್ಲದೆ, ಶಾರುಖ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಹ್ಯಾಂಡಲ್‌ಗಳನ್ನು ಸರ್ಚ್ ಮಾಡಲಾಗಿದೆ. ಆದರೆ ಶಾರುಖ್ ಖಾನ್ ಅವರ ಅಂತಹ ಯಾವುದೇ ಹೇಳಿಕೆ ನಮಗೆ ಕಂಡುಬಂದಿಲ್ಲ.

ಶಾರುಖ್ ತಮ್ಮ ಮುಂಬರುವ ಚಿತ್ರ ಪಠಾಣ್‌ನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಹಿಷ್ಕಾರದ ಟ್ರೆಂಡ್ ನಿಂದಾಗಿ Pathaanಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೆಗೆಟಿವಿಟಿ ವ್ಯಕ್ತವಾಗುತ್ತಿದೆ. ಆದರೆ, ಪಠಾಣ್ ಫ್ಲಾಪ್ ಆದರೆ ತಮ್ಮ ಮನೆಯನ್ನು ಮಾರಾಟ ಮಾಡುವುದಾಗಿ ಶಾರುಖ್ ಖಾನ್ ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: DFRAC

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 2019 ಹಳೆಯ ಫೋಟೋ ಹಂಚಿ ಕೋಮು ಪ್ರಚೋದನೆಗೆ ಮುಂದಾದ ನ್ಯೂಸ್‌24


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights