10ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್-ರೇಪ್ : ಮನೆಗೆ ತೆರಳಿ ಬಾಲಕಿ ಆತ್ಮಹತ್ಯೆ!

ಟ್ಯೂಷನ್ನಿಂದ ಹಿಂತಿರುಗುತ್ತಿರುವಾಗ ಹುಡುಗಿಯನ್ನಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೀರತ್ ನಲ್ಲಿ ಟ್ಯೂಷನ್ ತರಗತಿಯಿಂದ ಹಿಂದಿರುಗುವಾಗ 10 ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿದ ನಾಲ್ವರ ಗ್ಯಂಗ್ ಸಾಮೂಹಿಕ ಅತ್ಯಾಚಾರ ಎಸಗಿದೆ. ಅತ್ಯಾಚಾರದ ಬಳಿಕ ಮನೆಗೆ ಮರಳಿದ ಬಾಲಕಿ ಈ ಘಟನೆಯ ಬಗ್ಗೆ ತನ್ನ ಹೆತ್ತವರಿಗೆ ತಿಳಿಸಿದ್ದಾಳೆ. ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ತಕ್ಷಣ ಆಕೆಯ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆಯ ಸಮಯದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗುವಲ್ಲಿ ನಾಲ್ವರು ಯುವಕರು ಭಾಗಿಯಾಗಿದ್ದಾರೆ. ಬಾಲಕಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರ ಇಬ್ಬರನ್ನು ಬಂಧಿಸಲು ಮ್ಯಾನ್‌ಹಂಟ್ ಪ್ರಾರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೇಶವ್ ಕುಮಾರ್ ತಿಳಿಸಿದ್ದಾರೆ.

ಬಾಲಕಿ ತನ್ನ ಡತ್ ನೋಟ್ ನಲ್ಲಿ ಪಕ್ಕದ ಹಳ್ಳಿಯ ಲಖನ್ ಮತ್ತು ವಿಕಾಸ್ ಸೇರಿದಂತೆ ನಾಲ್ವರನ್ನು ಹೆಸರಿಸಿದ್ದಾಳೆ. ಪೊಲೀಸರು ಇವರನ್ನು ಹುಡುಕುತ್ತಿರುವಾಗ ಲಖನ್ ಮತ್ತು ವಿಕಾಸ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights