ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ : ಕಾಂಗ್ರೆಸ್ ಸ್ಥಿತಿ ಬಗ್ಗೆ ಸುರೇಶ್ ಕುಮಾರ್ ವ್ಯಂಗ್ಯ

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ ಬಗ್ಗೆ ಬಾಗಲಕೋಟೆ ಒಂಟಗೋಡಿ ಗ್ರಾಮದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾಂಗ್ರೆಸ್ ಸ್ಥಿತಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಉತ್ತಮ ಆಡಳಿತ ಕೊಟ್ಟಾಗ ಎಂತಹ ಫಲಿತಾಂಶ ಬರುತ್ತೆ ಅನ್ನೋಕೆ ಮಹಾ, ಹರ್ಯಾಣ ಫಲಿತಾಂಶ ಕಾರಣ. ಚುನಾವಣೆ ಪ್ರಚಾರಕ್ಕೂ ಹೋಗದೇ ದೇಶದ ಹಳೆ ಪಕ್ಷ ಬಂದು ನಿಂತಿದೆ ಕಾಂಗ್ರೆಸ್ ಸ್ಥಿತಿ ಬಗ್ಗೆ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಪ್ರಾಯಶಃ ಇದೊಂದು ವೇಕ್ ಅಪ್ ಕಾಲ್ ಇದ್ದಂತೆ. ಕಾಂಗ್ರೆಸ್ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೇಶದಲ್ಲಿ ಒಳ್ಳೆ ವಿಪಕ್ಷ ಇರಬೇಕು ಅನ್ನೋದು ನಮ್ಮ ಬಯಕೆ. ರಾಜ್ಯ, ದೇಶದಲ್ಲಿ ಒಳ್ಳೆ ವಿಪಕ್ಷ ಇರಬೇಕು. ಆ ಬಯಕೆ ಈಡೇರಿಸೋದು ಆ ಪಕ್ಷಕ್ಕೆ ಬಿಟ್ಟಿದ್ದು. ಇದು ಬಹಳ ಒಳ್ಳೆ ನಡೆ, ದೇಶಕ್ಕೆ ಒಳ್ಳೆ ಸಂದೇಶ. ಒಳ್ಳೆ ಆಡಳಿತ ಕೊಟ್ಟೋವ್ರಿಗೆ ಮುಂದೆವರೆಸ್ತಾರೆ ಅನ್ನೋಕೆ ಉದಾಹರಣೆ.

ಪಠ್ಯದಿಂದ ಟಿಪ್ಪು ತಗೆಯೋಕೆ ಅಪ್ಪಚ್ಚು ರಂಜನ್ ಪತ್ರ ವಿಚಾರವಾಗಿ ಮಾತನಾಡಿದ ಸುರೇಶ್ ಕುಮಾರ್  ಪತ್ರ ಬರೆಯೋ ಹಕ್ಕು ಎಲ್ಲರಿಗೂ ಇದೆ. ಆ ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ನಾನು ಕೂಡಾ ಕಳೆದ ಏಳು ದಿನಗಳಿಂದ ಪ್ರವಾಸದಲ್ಲಿದ್ದೇನೆ. ಪತ್ರ ಬಂದಾಗ ಕ್ರಮಕೈಗೊಳ್ತೇವೆ. ಮುಂದಿನ ಹೆಜ್ಜೆ ನಿರ್ಧಾರ ಮಾಡುತ್ತೇವೆ. ಪರೋಕ್ಷವಾಗಿ ಪಠ್ಯದಿಂದ ಟಿಪ್ಪು ಕೈಬಿಡುವ ಸುಳಿವು ಸಿಕ್ಕಿದೆ ಎಂದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights