ಏ.15ಕ್ಕೆ ಏನಿರುತ್ತೆ? ಏನಿರಲ್ಲ? : ಏನಿದು ಹಸಿರು, ಹಳದಿ, ಕೆಂಪು ವಲಯಗಳ ಪಟ್ಟಿ?
ಏಪ್ರಿಲ್ 15ಕ್ಕೆ ಏನಿರುತ್ತೆ? ಏನಿರಲ್ಲಿ? ಈ ಪ್ರಶ್ನೆ 130 ಕೋಟಿ ಜನರನ್ನು ಕಾಡುತ್ತಿದೆ. ಏಪ್ರಿಲ್ 14 ಕ್ಕಕ್ಕೆ ಲಾಕ್ ಡೌನ್ ಅಂತ್ಯಗೊಳ್ಳುತ್ತಾ? ಅಥವಾ ಮುಂದುವರೆಯುತ್ತಾ? ಹೀಗೋಮದು ಯಕ್ಷ ಪ್ರಶ್ನೆ ಕೊರೊನಾ ಭೀತಿಗೆ ಮನೆಯಲ್ಲೇ ಕುಳಿತ ಸಾವಿರಾರು ಜನರನ್ನು ಕಾಡುತ್ತಿದೆ.
ರಾಜ್ಯ ಸರ್ಕಾರ ರಾಜ್ಯದಲ್ಲಿ ಲಾಕ್ ಡೌನ್ ಇದ್ದರು ಒಂದೊಂದು ವ್ಯಾಪಾರಕ್ಕೆ ರಿಲೀಫ್ ಕೊಟ್ಟಿದೆ. ಹಾಗಾದ್ರೆ ಏಪ್ರಿಲ್ 15 ಕ್ಕೆ ಏನಿರುತ್ತೆ? ಏನಿರಲ್ಲ? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

130 ಕೋಟಿ ಜನರಿಗೆ ಸಾವಿರಾರು ಪ್ರಶ್ನೆಗಳು ಕಾಡುತ್ತಿವೆ. ಒಬ್ಬರಿಗೆ ಮಕ್ಕಳ ಪರೀಕ್ಷೆ ಚಿಂತೆಯಾದರೆ ಇನ್ನೊಬ್ಬರಿಗೆ ಅಡ್ಮೀಷನ್ ಇತ್ತಲ್ವಾ ಅನ್ನೋ ಚಿಂತೆ. ಮತ್ತೆ ಕೆಲವರಿಗೆ ಕುಡಿಯೋ ಚಿಂತೆ, ಇನ್ನೂ ಕೆಲವರಿಗೆ ಪಾನಿಪೂರಿ ತಿನ್ನೋ ಚಿಂತೆ. ಹೀಗೆ ಅದೆಷ್ಟೋ ಜನ ಚಿಂತೆಗೀಡಾಗಿದ್ದಾರೆ. ಆದರೆ ಇದಕ್ಕೆ ಉತ್ತರ ಸದ್ಯ ಕೊಡುವುದು ಕಷ್ಟ. ಯಾಕಂದ್ರೆ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಲಾಕ್ ಡೌನ್ ರಾಜ್ಯದಲ್ಲಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುತ್ತದೆ ಅನ್ನೋದೇ ಕಷ್ಟ. ಹಾಗಾದ್ರೆ ಹೀಗೆ ಲಾಕ್ ಡೌನ್ ಮುಂದುವರೆದರೆ ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗುತ್ತಾಯಿದೆ. ಹೀಗಾಗಿ ಸರ್ಕಾರಕ್ಕೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಜೊತೆಗೆ ಕೊರೊನಾ ಸೋಂಕು ಹರಡುವುದನ್ನ ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಹಾಗಾದ್ರೆ ರಾಜ್ಯ ಸರ್ಕಾರ ಮುಂದೇನು ಮಾಡುತ್ತೆ?

ಬೇಕರಿಗಳು ಓಪನ್ :-
ಏ.14ಕ್ಕೆ ಏಕಾಏಕಿ ಲಾಕ್ ಡೌನ್ ತೆರವುಗೊಳಿಸುವ ಬದಲಿಗೆ ಸದ್ಯ ಬೇಕರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಸಂಪೂರ್ಣ ಮುಂಜಾಗೃತೆಯಿಂದ ಬೇಕರಿ ವಸ್ತುಗಳನ್ನು ತಯಾರಿಸಬೇಕು. ತಯಾರಿಕೆಗೂ ಕಡಿಮೆ ಜನರನ್ನು ಬಳಸಬೇಕು. ಜೊತೆಗೆ ಆರೋಗ್ಯ ಇಲಾಖೆಯಿಂದ ಆಹಾರ ದೃಢಪಡಬೇಕು. ಹೀಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.
ಮದ್ಯನೂ ಸಿಗುತ್ತಾ..?
ಹಾಗಾದ್ರೆ ಮದ್ಯನೂ ಸಿಗುತ್ತಾ..? ಅನ್ನೋ ಪ್ರಶ್ನೆ ಸದ್ಯ ಎದುರಾಗಿದೆ. ಮದ್ಯವ್ಯಸನಿಗಳು ಲಾಕ್ ಡೌನ್ ನಿಂದ ಮದ್ಯ ಸಿಗದೇ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವಾರದಲ್ಲಿ ಒಂದು ದಿನ ಮದ್ಯ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಸಿಎಂಗೆ ಅಬಕಾರಿ ಇಲಾಖೆ ಸಲಹೆ ಕೊಟ್ಟಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ಅಬಕಾರಿಯಿಂದ ಬರುತ್ತಿರುವುದರಿಂದ ಏಪ್ರಿಲ್ 14 ರ ನಂತರ ಮದ್ಯದಂಗಡಿ ತೆರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶಾಲಾ-ಕಾಲೇಜುಗಳು ಓಪನ್ ಆಗುತ್ತಾ?
ಇನ್ನೂ ಶೈಕ್ಷೇಣಿಕ ವಿಚಾರಕ್ಕೆ ಬಂದರೆ ಲಾಕ್ ಡೌನ್ ನಿಂದ ಎಲ್ಲಾ ಶಾಲಾ –ಕಾಲೇಜುಗಳು ಬಂದ್ ಆಗಿವೆ. ಇನ್ನೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡಿಲ್ಲ. ರಾಜ್ಯದ ಹೆಚ್ಚಿನ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಯಾವಾಗ? ಫಲಿತಾಂಶ ಯಾವಾಗ ಅನ್ನೋ ಚಿಂತೆ ಎದುರಾಗಿದೆ. ಆದರೆ ಇದಕ್ಕೆಲ್ಲಾ ತೆರೆ ಎಳಿದ ಸಚಿವ ಸುರೇಶ್ ಕುಮಾರ್ , ಶಾಲಾ ಕಾಲೇಜುಗಳು ತೆರೆಯುವ ಬಗ್ಗೆ ಪರೀಕ್ಷೆ ಗಳನ್ನು ನಡೆಸುವ ಬಗ್ಗೆ ಏಪ್ರಿಲ್ 14ಕ್ಕೆ ತೀರ್ಮಾನಿಸಲಾಗುದು ಎಂದು ಹೇಳಿದ್ದಾರೆ.

ಹೋಟೆಲ್ ಗಳಿಗೆ ಓಪನ್ ಭಾಗ್ಯ ಇದಿಯಾ?
ರಾಜ್ಯದಲ್ಲಿ ಲಾಕ್ ಡೌನ್ ಪೂರ್ಣಗೊಳ್ಳಲು ಇನ್ನೂ ಒಂದು ವಾರ ಬಾಕಿ ಇದೆ. ಅದಾಗಲೇ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಏಪ್ರಿಲ್ 14 ರ ನಂತರ ಹೇಟೆಲ್ ಗಳಿಗೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ರಾಜ್ಯದ ಎಲ್ಲಾ ಹೋಟೆಲ್ ಗಳನ್ನ ತೆರೆಯಲು ಅವಕಾಶ ನೀಡದೆ ಶೆ.25 ರಷ್ಟು ಹೋಟೆಲ್ ಗಳಿಗೆ ಸಮಯ ನಿಗಧಿ ಮಾಡಿ ಹಂತ ಹಂತವಾಗಿ ಹೋಟೆಲ್ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎನ್ನಲಾಗುತ್ತಿದೆ.

ಸಾರಿಗೆ ವ್ಯವಸ್ಥೆ ಇರುತ್ತಾ..?
ಏ.14ಕ್ಕಏಕಾಏಕಿ ಜನ ಮನೆ ಬಿಟ್ಟು ಹೊರಬಂದರೆ ಅದರಲ್ಲೂ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡಿದಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಕೆ ಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲ್ವೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಒಂದು ವೇಳೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾದರೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಒಂದು ಬಸ್ ಅಥವಾ ಮೆಟ್ರೋ ಗೆ ಇಂತಿಷ್ಟು ಜನರಂತೆ ಅಂತರ ಕಾಯ್ದುಗೊಳ್ಳುವ ಷರತ್ತು ವಿಧಿಸುವ ಸಾಧ್ಯತೆ ಇದೆ.

ಕಂಪನಿಗಳು ತೆರೆಯುತ್ತಾ?
ಕಾರ್ಖಾನೆಗಳಲ್ಲಿ ನೌಕರರು ಹೆಚ್ಚಾಗಿರುತ್ತಾರೆ. ಒಂದೇ ಕಡೆಗೆ ಹೋಗಿರುತ್ತಾರೆ. ಕಂಪನಿಯಲ್ಲಿ ಹೆಚ್ಚಾಗಿ ನೌಕರರನ್ನು ಸಂಪೂರ್ಣವಾಗಿ 3 ದಿನ ಬಳಸಿಕೊಂಡು ನಂತರ 3 ದಿನ ರಜೆ ಘೋಷಿಸುವ ಚಿಂತನೆ ನಡೆದಿದೆ. ಒಂದು ವೇಳೆ ಏ.14ರ ಹೊತ್ತಿಗೆ ಕೊರೊನಾ 3ನೇ ಹಂತಕ್ಕೆ ತಲುಪಿದರೆ ಬಹುತೇಕ ಐಟಿ-ಬಿಟಿ ಕಂಪನಿಗಳು ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ. ಕೊರೊನಾ ತಡೆಗೆ ಸ್ವಯಿಚ್ಚೆಯಿಂದ ಕಂಪನಿಗಳು ಮುಂದೆ ಬಂದು ಸರ್ಕಾರದ ಜೊತೆಗೆ ಕೈ ಜೋಡಿಸಿವೆ.

ಕೊರೊನಾ ಜೊತೆಗೆ ಆರ್ಥಿಕ ಸಂಕಷ್ಟ :-
ಕೊರೊನಾ ತಡೆಗೇನೋ ಬಹುತೇಕ ಜನ ಕೈ ಜೋಡಿಸಿದ್ದಾರೆ. ಆದರೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಉಲ್ಬಣಗೊಳ್ಳಲಿದೆ. ಹಾಗಂತ ಲಾಕ್ ಡೌನ್ ತೆರವಾದರೆ ಕೊರೊನಾ ಸೋಂಕು ಹರಡುವುದು ಖಚಿತ. ಹೀಗಾಗಿ ಎರಡನ್ನೂ ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇದರಿಂದ ಕೈಕಟ್ಟಿಕುಳಿತುಕೊಳ್ಳದ ರಾಜ್ಯದ ಸರ್ಕಾರ ಕೊರೊನಾ ತಡೆಗೆ ಯುದ್ಧವನ್ನೇ ಸಾರಿದೆ.

ಒಂದು ಕಡೆ ಲಾಕ್ ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತೆ. ಮತ್ತೊಂದು ಕಡೆ ಲಾಕ್ ಡೌನ್ ಮುಂದುವರೆಯದೇ ಇದ್ದರೆ ಸೋಂಕು ಹರಡುವ ವೇಗ ಹೆಚ್ಚಾಗುತ್ತದೆ. ಹೀಗಾಗಿ ಲಾಕ್ ಡೌನ್ ನನ್ನು ಹಂತ ಹಂತವಾಗಿ ಕಡಿಮೆ ಮಾಡಲು ನಿರ್ಧಿರಿಸಲಾಗಿದೆ. ಹಾಗಾದ್ರೆ ಲಾಕ್ ಡೌನ್ ತೆರವಾದರೆ ಯಾವೆಲ್ಲಾ ಪ್ರದೇಶಗಳಿಗೆ ಲಾಭವಾಗಲಿದೆ? ಯಾವೆಲ್ಲ ಪ್ರದೇಶಗಳಿಗೆ ತೊಂದರೆಯಾಗಲಿದೆ? ಇದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ರಾಜ್ಯದಲ್ಲಿ ನಿಜಾಮುದ್ದೀನ ನಂಜು-ನಂಜನಗೂಡಿನ ನಂಜು ಹೆಚ್ಚಾಗಿದೆ. ಕೊರೊನಾ ವೈರಸ್ ಮೊದಲು ಸೈಲೆಂಟ್ ಆಮೇಲೆ ವೈಲೆಂಟ್ ಆಗುತ್ತದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಅಂತ ಮೈ ಮರೆಯೋ ಹಾಗಿಲ್ಲ. ಹಾಗಾದ್ರೆ ಕೇಂದ್ರ ಸರ್ಕಾರದ ನಿಲುವೇನು ಅನ್ನೋದರ ಮಾಹಿತಿ ಇಲ್ಲಿದೆ.

ಹಸಿರು, ಹಳದಿ, ಕೆಂಪು, ವಲಯಗಳ ನಿರ್ಮಾಣ :-
ಕೇಂದ್ರ ಸರ್ಕಾರದೊಂದಿಗಿನ ಸಭೆ ಬಳಿಕ ರಾಜ್ಯ ಸರ್ಕಾರ ಕೊರೊನಾ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಅದುವೇ ರಾಜ್ಯದಲ್ಲಿ ಹಸಿರು, ಹಳದಿ, ಕೆಂಪು, ವಲಯಗಳನ್ನು ನಿರ್ಮಾಣ ಮಾಡುವುದು. ಏನಿದು ವಲಯಗಳು ಹಸಿರು, ಹಳದಿ, ಕೆಂಪು ಅಂದರೆ. ರಾಜ್ಯದಲ್ಲಿ ಕೊರೊನಾ ಸೋಂಕು ಇಲ್ಲದೇ ಇರುವ ಜಿಲ್ಲೆಗಳಿಗೆ ಹಸಿರು ವಲಯ ಎಂದು, ಕನಿಷ್ಟ ತೊಂದರೆ ಇರುವ ಪ್ರದೇಶಗಳನ್ನು ಹಳದಿ ವಲಯ ಎಂದು ಜೊತೆಗೆ ಗರಿಷ್ಠ ಸೋಂಕಿತರಿರುವ ಪ್ರದೇಶಗಳನ್ನು ಕೆಂಪು ವಲಯಗಳೆಂದು ವಿಂಗಡಣೆ ಮಾಡಲಾಗುತ್ತದೆ. ಆ ಮೂಲಕ ಪ್ರದೇಶವಾರು ಜಾಗೃತಿ ವಹಿಸಲಾಗುತ್ತದೆ. ಕೆಂಪು ವಲಯದ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳನ್ನು ಲಾಕ್ ಡೌನ್ ನಿಂದ ಮುಕ್ತಗೊಳಿಸಬಹುದು ಎನ್ನಲಾಗುತ್ತಿದೆ.

ಕೇಂದ್ರದಿಂದ ರಾಜ್ಯಕ್ಕೆ 1,536 ಕೋಟಿ ಅನುದಾನ:-
ಈ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಿಎಸ್ ಟಿ ನಷ್ಟಕ್ಕೆ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1,536 ಕೋಟಿ ಅನುದಾನ ಕೊಟ್ಟಿದೆ. ವೈದ್ಯರ ಹಿತದೃಷ್ಟಿಯಿಂದ 10 ಲಕ್ಷ ಪಿಪಿ ಕಿಟ್ ಖದೀಸಲು ತೀರ್ಮಾನಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ನೌಕರರ ಸಂಬಳ ಕಟ್ ಮಾಡಲಾಗುವುದು. ಕೆಂಪು ವಲಯವನ್ನು ಹಸಿರು ವಲಯವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದಕ್ಕೆ ಇನ್ನೂ ಸಮಯ ಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಏ.14 ಅಂತ್ಯದವರೆಗೂ ಲಾಕ್ ಡೌನ್ ಸಡಿಲಗೊಳಿಸುವ ಕೀಲಿ ಕೈ ಜನಸಾಮಾನ್ಯರ ಕೈಯಲ್ಲಿದೆ. ಮನೆ ಬಿಟ್ಟು ಹೊರಬಾರದೆ ಸೋಂಕು ಹರಡುವುದನ್ನ ತಡೆಗಟ್ಟಿದ್ದರೆ ಮುಂದೆ ಒಳ್ಳೆ ದಿನಗಳು ನಿಮ್ಮದಾಗಬಹುದು. ಹೀಗಾಗಿ ನಿಯಮಗಳನ್ನು ಪಾಲಿಸಿ ಕೊರೊನಾ ತಡೆಗಟ್ಟುವಲ್ಲಿ ಸಹಕರಿಸಿ ಸೇಫಾಗಿರಿ.

