ಇಹಲೋಕ ತ್ಯಜಿಸಿದ ಭಾರತೀಯ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್​ರಾಜ್

ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್‌ರಾಜ್ ಅಮೆರಿಕದ ನ್ಯೂ ಜರ್ಸಿಯಲ್ಲಿ ಸೋಮವಾರ ನಿಧನರಾಗಿದ್ದಾರೆ.

90 ವರ್ಷದ ಪಂಡಿತ್ ಜಸ್‌ರಾಜ್ ಅವರು ಸುಮಾರು 80 ವರ್ಷಗಳ ಕಾಲ ಸಂಗೀತ ವೃತ್ತಿಜೀವನ ನಡೆಸಿದ್ದಾರೆ. ಅವರು ನಿನ್ನೆ ಇಹಲೋಹ ತ್ಯಜಿಸಿದ್ದಾರೆ.

ಹರಿಯಾಣದ ಹಿಸ್ಸಾರ್ ಪ್ರದೇಶದ  ಜಸ್​ರಾಜ್ ಅವರು 14 ನೇ ವಯಸ್ಸಿನಲ್ಲಿ ಗಾಯಕರಾಗಿ ತರಬೇತಿಯನ್ನು ಪ್ರಾರಂಭಿಸಿದರು. ಅಪ್ರತಿಮ ಗಾಯಕರಾಗಿದ್ದ ಅವರಿಗೆ ಪದ್ಮಶ್ರೀ(1975 ), ಪದ್ಮಭೂಷಣ(1990 ) ಹಾಗೂ ಪದ್ಮವಿಭೂಷಣ(2000 ), ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1987), .1997-98 ರಲ್ಲಿ ಕಾಳಿದಾಸ ಸಮ್ಮಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಜಸ್‌ರಾಜ್‌ ಅವರು ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ತಾಯಿಗೆ ವೈದ್ಯರು ನೀಡಿದ್ದ ಔಷಧಿಗಾಗಿ ಖರೀದಿಸಲು ಹಣವಿಲ್ಲದೆ ಮೆಡಿಕಲ್‌ ಸ್ಟೋರ್‌ನ ಮಾಲೀಕನಲ್ಲಿ ಗೋಗರೆದು ಇದ್ದ ಸ್ವಲ್ಪ ಹಣ ಕೊಟ್ಟು, ಸಾಲ ಮಾಡಿ ಔಷಧಿ ಪಡೆದು ತಾಯಿಗೆ ಚಿಕಿತ್ಸೆ ಕೊಡಿಸಿದ್ದರು. ಇವರ ಹಾಡು ಕೇಳಿದ ವೈದ್ಯ ಅಂದಿನ 2 ರೂಪಾಯಿಗೆ ಇಂಜೆಕ್ಷನ್ ಕೊಟ್ಟಿದ್ದರು.

ತಾಯಿ ದಿನನಿತ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಲು ಪರದಾಡುತ್ತಿದ್ದ ಜಸ್‌ರಾಜ್‌ ಅವರಿಗೆ ಸಿಕ್ಕಿದ್ದು ‘ಈ ದಿನ ಸಂಜೆ ಆಲ್ ಇಂಡಿಯಾ ರೆಡಿಯೋದಲ್ಲಿ ಹಾಡುವ ಅವಕಾಶ’. ನಂತರ ಅವರ ಗಾಯನ ಎಲ್ಲೆಡೆ ಪಸರಿಸಿದ್ದು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದಾರೆ.

90 ವರ್ಷಗಳ ಕಾಲ ಬದುಕಿದ್ದ ಪಂಡಿತ್‌ ಜಸ್‌ರಾಜ್‌ ಅವರು ಇಹಲೋಕ ತ್ಯಜಿಸಿದ್ದಾರೆ.


ಇದನ್ನೂ ಓದಿ:  ಸುಗಂಧಿ ಬೇರು-12: ಇಂದಿಗೂ ಪ್ರಸ್ತುತ ಭೀಷ್ಮ ಸಾಹನಿಯವರ ‘ತಮಸ್: ದೇಶ ವಿಭಜನೆಯ ಕರಾಳ ಕಥನ’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights