ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ: ಕರ್ನಾಟಕಕ್ಕೆ ಅನ್ಯಾಯ, ಸಿಕ್ಕಿದ್ದು 1 ಕೋಟಿ ರೂ ಮಾತ್ರ!

ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ಉಂಟಾದ ಬಿಕ್ಕಟ್ಟಿನಿಂದಾಗಿ ಹೆಣ್ಣು ಮಕ್ಕಳಿಗೆ ನೆರವು ನೀಡಲು ಜನ್‌ಧನ್‌ ಖಾತೆ ಹೊ೦ದಿದ್ದ ಮಹಿಳಾ ಖಾತೆದಾರರಿಗೆ ಪ್ರತಿ ತಿಂಗಳು 500 ರೂ ನೀಡುವುದಾಗಿ ಕೇ೦ದ್ರ ಸರ್ಕಾರ ಘೋಷಿಸಿತ್ತು. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿಯಲ್ಲಿ ಘೋಷಿಸಲಾದ ಈ ಯೋಜನೆಯಲ್ಲಿ ಕರ್ನಾಟಕ 8ನೇ ಸ್ನಾನ ಪಡೆದಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳ ಮಹಿಳಾ ಖಾತೆದಾರರಿಗೆ ಇದೂವರೆಗೂ ಹಣ ಜಮಾ ಆಗಿಲ್ಲ ಎಂಬುದು ದುರಾದೃಷ್ಟಕರ.

ಅಥಣಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊ೦ಡ ಅವರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆರ್‌ಟಿಐ ಅಡಿ ಫಲಾನುಭವಿಗಳ ಪಟ್ಟಿ ಮತ್ತು ಬ್ಯಾ೦ಕ್‌ ಖಾತೆಗೆ ಜಮಾ ಆಗಿರುವ ಹಣದ ವಿವರವನ್ನು 2020ರ ನವೆ೦ಬರ್‌ 11ರ೦ದು ಒದಗಿಸಿದೆ. ಈ ಪಟ್ಟಿ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಮಹಿಳೆಯರು ನೋಲ೦ದಾಯಿಸಿದ್ದರೆ ಬಿಹಾರ ಎರಡನೇ ಸ್ನಾನ ಮತ್ತು ಪಶ್ಚಿಮ ಬ೦ಗಾಳ ಮೂರನೇ ಸ್ನಾನದಲ್ಲಿರುವುದು ತಿಳಿದು ಬ೦ದಿದೆ.

ರಾಜಸ್ನಾನ, ಆಂಧ್ರಪ್ರದೇಶ, ಒಡಿಶಾದ ನ೦ತರ 8ನೇ ಸ್ಮಾನದಲ್ಲಿರುವ ರಾಜ್ಯದಲ್ಲಿ 80.60 ಲಕ್ಷ ಫಲಾನುಭವಿಗಳಿಗೆ 1.17 ಕೋಟಿ ರು.ಗಳನ್ನು ಜಮಾ ಮಾಡಲಾಗಿದೆ ಎ೦ದು ಕೇ೦ದ್ರ ಸರ್ಕಾರ ಆರ್‌ಟಿಐ ಅಡಿ ಮಾಹಿತಿ ಒದಗಿಸಿದೆ. ಆದರೆ ರಾಜ್ಯದ ಬೆಳಗಾವಿ, ಕಲ್ಬುರ್ಗಿ ಸೇರಿದ೦ತೆ ಹಲವು ಜಿಲ್ಲೆಗಳಲ್ಲಿನ ಮಹಿಳೆಯರ ಖಾತೆಗಳಿಗೆ ಹಣವಿನ್ನೂ ಜಮಾ ಆಗಿಲ್ಲ ಎ೦ದು ಗೊತ್ತಾಗಿದೆ.

ಉತ್ತರ ಪ್ರದೇಶದಲ್ಲಿ 3,24,37,601 ಫಲಾನುಭವಿಗಳಿಗೆ 4,85,698.76 ಲಕ್ಷ ರೂ. ಬಿಹಾರದಲ್ಲಿ 2,43,62,070 ಫಲಾನುಭವಿಗಳಿಗೆ 365523.65 ಲಕ್ಷ ರೂ. ಪಶ್ಚಿಮ ಬ೦ಗಾಳದಲ್ಲಿ 1,93,69,409 ಫಲಾನುಭವಿಗಳಿಗೆ 2,90,495.29 ಲಕ್ಷ ರು. ಗುಜರಾತ್‌ನಲ್ಲಿ 71,73,309 ಫಲಾನುಭವಿಗಳಿಗೆ 1,07,355.95 ಲಕ್ಷ ರು. ಜಮಾ ಆಗಿರುವುದು ಆರ್‌ಟಿಐನಿ೦ದ ತಿಳಿದು ಬಂದಿದೆ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ದೇಶಾದ್ಯ೦ತ ಲಾಕ್‌ ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಜನ್‌ ಧನ್‌ ಯೋಜನೆಯಡಿ ಖಾತೆ ಹೊಂದಿರುವ ಮಹಿಳಾ ಖಾತಾದಾರರಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಏಪ್ರಿಲ್‌ ತಿಂಗಳ 500 ರೂಪಾಯಿ ಎಕ್ಸ್‌ ಗ್ರೇಷಿಯಾ ಮೊತ್ತವನ್ನು ಬಿಡುಗಡೆ ಮಾಡಿತ್ತು.

ರಾಜ್ಯ ಸರ್ಕಾರಗಳು ಸಹ ತನ್ನ ಜಿಲ್ಲಾಡಳಿತ ಮತ್ತು ಪೊಲೀಸರ ಸಹಕಾರದ ಮೂಲಕ ಖಾತೆದಾರರಿಗೆ ಹಣ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾ೦ಕ್‌ ಗಳು ತನ್ನ ಬ್ಯಾ೦ಕ್‌ ಪ್ರತಿನಿಧಿಗಳು ಹಾಗೂ ಬ್ಯಾ೦ಕ್‌ ಗಳ ಶಾಖೆಗಳಿಂದ ಹಣ ಪಡೆಯುವ ವಿಧಾನದ ಬಗ್ಗೆ ಸೂಕ್ತ ವಿರ್ದೇಶನ ನೀಡುವಂತೆಯೂ ಕೇ೦ದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ರಾಜ್ಯದ ಜನರಿಗೆ ಈ ಯೋಜನೆ ಸಮರ್ಪಕವಾಗಿ ತಲುಪಿಲ್ಲ. ಕೊರೊನಾ ಸಮಯದಲ್ಲಿ ಪ್ರತಿ ತಿಂಗಳು 500 ರು.ನ೦ತೆ 3 ತಿಂಗಳು ಕೇಂದ್ರ ಸರ್ಕಾರ ನೀಡಿದ್ದ ಹಣ ಬಡವರ ಕುಟುಂಬಕ್ಕೆ ನಾಮಕಾವಸ್ಥೆ ಎ೦ಬಂ೦ತಾಗಿದೆ. ಇದರಿ೦ದ ಸ೦ಕಷ್ಟದಲ್ಲಿ ಇರುವ ಬಡ ಕುಟು೦ಬದ ಒಬ್ಬರಿಗೆ 2 ಜೊತೆ ಬಟ್ಟೆ ಇರಲಿ, ಒ೦ದು ತಿಂಗಳ ಆಹಾರ ಸಾಮಗ್ರಿ ಖರೀದಿಸಲು ಆಗುವುದಿಲ್ಲ. ಕೇ೦ದ್ರ ಸರ್ಕಾರ ನೀಡಿದ ಅ೦ಕಿ ಅಂಶಗಳನ್ನು ನೋಡಿದರೆ (ತಳಮಟ್ಟದ ಫಲಾನುಭವಿಗಳಿಗೆ ಇಂದಿಗೂ ಹಣ ತಲುಪಿಲ್ಲ ಎ೦ಬುದು ಗೊತ್ತಾಗುತ್ತದೆ.

– ಭೀಮನಗೌಡ ಪರಗೊ೦ಡ, ವಕೀಲರು

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ 31 ಕೋಟಿ ಜನರಿಗೆ ಒಟ್ಟು 28 ಸಾವಿರ ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರ್ಕಾರ ನೀಡಿದ್ದನ್ನು ಸ್ಮರಿಸಬಹುದು. 8ಪ್ರಿಲ್‌ 10 ವರೆಗಿನ ಅಂಕಿ-ಅಂಶಗಳ ಪ್ರಕಾರ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಜನತೆಗೆ ಸಹಕರಿಯಾಗಲು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ 31 ಕೋಟಿ ಜನರಿಗೆ ಆರ್ಥಿಕ ನೆರವು ನೀಡಲಾಗಿತ್ತು.

ಇದೇ ಯೋಜನೆಯಡಿಯಲ್ಲಿ ಒಟ್ಟಾರೆ ಮೊತ್ತದ ಹಣದಲ್ಲಿ 13,855 ಕೋಟಿ ರೂಪಾಯಿ ಹಣವನ್ನು 6.93 ಕೋಟಿ ರೈತರಿಗೆ ಪಿಎ೦-ಕಿಸಾನ್‌ ಯೋಜನೆಯಡಿ ನೀಡಲಾಗಿದೆ.ಇನ್ನು ಪ್ರಧಾನಮಂತ್ರಿ ಜನಧನ್‌ ಯೋಜನೆಯ ವ್ಯಾಪ್ತಿಯಲ್ಲಿ ಬರುವ 20.05 ಕೋಟಿ ಮಹಿಳಾ ಖಾತೆದಾರರಿಗೆ ಸರ್ಕಾರದಿ೦ದ 10,025 ಕೋಟಿ ರೂಪಾಯಿ ವಿತರಿಸಲಾಗಿದೆ. 2.16 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3066 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಕೇ೦ದ್ರ ಸರ್ಕಾರ ಹೇಳಿತ್ತು.

ಕೃಪೆ: ದಿ ಫೈಲ್


ಇದನ್ನೂ ಓದಿ: ‌20 ವರ್ಷದಲ್ಲಿ 07 ಬಾರಿಗೆ ಸಿಎಂ ನಿತೀಶ್‌ ಕುಮಾರ್‌: ಮುಖ್ಯಮಂತ್ರಿ ಗಾದಿಯ ಕಂಪ್ಲೀಟ್‌ ಡೀಟೇಲ್ಸ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights