20 ವರ್ಷದಲ್ಲಿ 07 ಬಾರಿಗೆ ಸಿಎಂ ನಿತೀಶ್‌ ಕುಮಾರ್‌: ಮುಖ್ಯಮಂತ್ರಿ ಗಾದಿಯ ಕಂಪ್ಲೀಟ್‌ ಡೀಟೇಲ್ಸ್

ಬಿಹಾರದ ಮುಖ್ಯಮಂತ್ರಿಯಾಗಿರು ನಿತೀಶ್‌ ಕುಮಾರ್ ಇದೂವರೆಗೂ 07 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಅತ್ಯಂತ ಕಳಪೆ ಮಟ್ಟದ ಸ್ಥಾನಗಳನ್ನೂ 2020ರ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಗೆದ್ದಿದ್ದರೂ, ಈ ಬಾರಿಯೂ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರು 20 ವರ್ಷದಲ್ಲಿ 08 ಬಾರಿ ಮುಖ್ಯಮಂತ್ರಿಯಾಗಿರುವುದು ಆಶ್ಚರ್ಯಕರವಾಗಿದೆ. ಅವರ ಮುಖ್ಯಮಂತ್ರಿ ಗಾದಿಯ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ.

ಮೊದಲ ಬಾರಿಗೆ ಮುಖ್ಯಮಂತ್ರಿ: 

ನಿತೀಶ್‌ ಕುಮಾರ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು 2000ನೇ ಇಸವಿಯಲ್ಲಿ. ಆಗ ಸಂದರ್ಭದಲ್ಲಿ ಅವರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಬದಲಾಗಿ ಅವರು ಲೋಕಸಭಾ ಸದಸ್ಯರಾಗಿದ್ದರು. ಅಲ್ಲದೆ, ಕೇಂದ್ರ ಸಚಿವರೂ ಆಗಿದ್ದರು. ಆ ಸಂದರ್ಭದಲ್ಲಿ ಬಿಹಾರ ಮತ್ತು ಜಾರ್ಖಂಡ್‌ ಎರಡೂ ರಾಜ್ಯಗಳು ಇನ್ನೂ ವಿಭಜನೆಯಾಗಿರಲಿಲ್ಲ. ಎರಡೂ ರಾಜ್ಯಗಳನ್ನು ಒಳಗೊಂಡ ಅವಿಭಜಿತ ಬಿಹಾರ ರಾಜ್ಯವಾಗಿತ್ತು. ಆಗ ವಿಧಾನಸಭೆಯ ಸಂಖ್ಯಾಬಲ 324 ಸ್ಥಾನಗಳಿತ್ತು. ಬಹುಮತ ಸಾಬೀತು ಮಾಡಲು 163 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು.

2000ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಗೂ ಮುಂಚೆ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ಅವರು ಸತತ 15 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು. 10 ವರ್ಷಗಳ ಲಾಲೂ ಆಡಳಿತ ಜನರಿಗೆ ಬೇಸರ ತರಿಸಿತ್ತು. ಆ ಕಾರಣದಿಂದಾಗಿ 2000ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸರಳ ಬಹುಮತ ಸಿಕ್ಕಿರಲಿಲ್ಲ. ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 151 ಸ್ಥಾನಗಳಲ್ಲಿ ಗೆದ್ದಿತ್ತು. ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ 159 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಆಗ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿತ್ತು. ಕೇಂದ್ರದ ಅಧಿಕಾರವಿರುವುದರಿಂದ ಬಿಹಾರದಲ್ಲಿ ಸರ್ಕಾರವನ್ನು ಎನ್‌ಡಿಎ ಸ್ಥಾಪಿಸುತ್ತದೆ ಎಂದು ಭಾವಿಸಿದ್ದ ಬಿಜೆಪಿ ಮತ್ತು ಜೆಡಿಯು ಕೇಂದ್ರ ಮಂತ್ರಿಯಾಗಿದ್ದ ನಿತೀಶ್‌ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು. ನಿತೀಶ್‌ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಎಂಟೇ ದಿನಗಳಲ್ಲಿ ಬಹುಮತ ಸಾಬೀತು ಮಾಡಲಾಗದೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದರು. ಮತ್ತೆ ಲಾಲೂ ಮುಖ್ಯಮಂತ್ರಿಯಾದರು.

ಲಾಲೂ ಮತ್ತು ಆಡಳಿತ ವಿರೋಧಿ ಅಲೆಯ ಲಾಭ ಪಡೆದ ನಿತೀಶ್‌ (ಎರಡನೇ ಬಾರಿಗೆ ಸಿಎಂ)

2000ದಲ್ಲಿಯೇ ಲಾಲೂ ವರ್ಚಸ್ಸು ಕುಸಿದು ಸರಳ ಬಹುಮತವನ್ನೂ ಪಡೆಯಲಾಗದೇ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಲಾಲೂಗೆ 2005ರಲ್ಲಿ ಆಡಳಿತ ವಿರೋಧಿ ಅಲೆ ಎದ್ದಿತ್ತು. ಬಿಹಾರದಲ್ಲಿದ್ದ ಭೂಮಾಲೀಕರ ದೌರ್ಜನ್ಯ, ದಬ್ಬಾಳಿಕೆಗಳನ್ನು ಮಟ್ಟಹಾಕಲು ಮುಂದಾಗಿದ್ದ ಲಾಲೂ, ಬಿಹಾರದ ಪ್ರಭಲ ಜಾತಿಗಳಾದ ಠಾಕೂರ್‌ ಮತ್ತು ಭೂಮಿಹಾರ್‌ ಸಮುದಾಯಗಳನ್ನು ದಮನ ಮಾಡಲು, ಯಾದವರಿಗೆ ಬೆಂಬಲ ನೀಡಿದರು. ಇದರಿಂದಾಗಿ ಬಿಹಾರದಲ್ಲಿ ಹಿಂಸಾಚಾರವೂ ನಡೆಯಿತು. ಇದು ಬಿಹಾರಕ್ಕೆ ‘ಜಂಗಲ್‌ ರಾಜ್‌’ ಎಂಬ ಹಣೆಪಟ್ಟಿಯನ್ನು ತಂದೊಡ್ಡಿತ್ತು. ಇದರ ಲಾಭ ಪಡೆದ ನಿತೀಶ್‌ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎನ್‌ಡಿಎ ಮೈತ್ರಿಯು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. ಇದರಿಂದಾಗಿ ನಿತೀಶ್‌ ಆರಾಮದಾಯಕವಾಗಿ ಅಧಿಕಾರಕ್ಕೇರಿದರು.

ಮೂರನೇ ಬಾರಿಗೆ ಮುಖ್ಯಮಂತ್ರಿ: 

2005ರಲ್ಲಿ ಅಧಿಕಾರಕ್ಕೇರಿದ ನಿತೀಶ್‌ ಕುಮಾರ್‌, ಠಾಕೂರ್ ಮತ್ತು ಭೂಮಿಹಾರ್‌ಗಳ ಓಲೈಕೆ ಮಾಡಿದ್ದರು. ಈ ಎರಡೂ ಸಮುದಾಯಗಳ ವಿರುದ್ಧ ರಾಜ್ಯದಲ್ಲಿ ಭುಗಿಲೆದ್ದಿದ್ದ ಆಕ್ರೋಶವನ್ನು ಶಮನ ಮಾಡಿ, ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ಯತ್ನಿಸಿದ್ದರು. ಇದರಿಂದಾಗಿ ನಿತೀಶ್‌ ಕುಮಾರ್‌ಗೆ ಠಾಕೂರ್ ಮತ್ತು ಭೂಮಿಹಾರರ ಬೆಂಬಲ ದೊರೆತು. 2010ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು.

ರಾಜೀನಾಮೆ ನೀಡಿ, ಮತ್ತೆ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್ (4ನೇ ಬಾರಿಗೆ ಸಿಎಂ)

2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆಗೆ ಹಲವು ಪಕ್ಷಗಳನ್ನು ಕರೆತರಲು ಶ್ರಮಿಸಿದ್ದ ನಿತೀಶ್‌ ಕುಮಾರ್‌, ಎನ್‌ಡಿಎಯಿಂದ ಪ್ರಾಧನಿ ಅಭ್ಯರ್ಥಿಯಾಗಲು ಇಂಗಿತ ವ್ಯಕ್ತಪಡಿಸಿದ್ದರು. ಅದರೆ, ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿತು. ಇದರಿಂದಾ ಕೋಪಗೊಂಡ ನಿತೀಶ್‌, ಬಿಜೆಪಿ ಜೊತೆಗೆ ಮೈತ್ರಿ ತೊರೆದು, ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಸ್ವತಂತ್ರ್ಯವಾಗಿ ಜೆಡಿಯು ಸ್ಪರ್ಥಿಸಿತು. ಆದರೆ, ಒಂದೂ ಸ್ಥಾನಗಳನ್ನೂ ಗೆಲ್ಲಲಿಲ್ಲ. ಇದರಿಂದಾಗಿ ಸೋಲಿನ ಹೊಣೆಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎನ್‌ಡಿಎ ಮೈತ್ರಿಯನ್ನು ಬೆಂಲಿಸಿದ್ದ,ಜಿತಿನ್ ರಾಮ್ ಮಾಂಜಿಯನ್ನು ಸಿಎಂ ಆಗಿ ಆಯ್ಕೆಮಾಡಿದರು. ಆದರೆ, ನಿತೀಶ್ ಮತ್ತು ಮಾಂಜಿ ನಡುವೆ ಭಿನ್ನಮತ ಉಂಟಾಗಿ ಮಾಂಜಿ ರಾಜೀನಾಮೆ ನೀಡಿದರು. ಬಳಿಕ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಆರ್‌ಜೆಡಿ-ಜೆಡಿಯು ಮೈತ್ರಿಯಲ್ಲಿ ಮುಖ್ಯಮಂತ್ರಿಯಾದ ನಿತೀಶ್‌ ಕುಮಾರ್ (5ನೇ ಬಾರಿ)

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಸ್ಥಾನ ಪಡೆಯಲಾಗದೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ನಿತೀಶ್‌ ಕುಮಾರ್‌, 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಖ್ಯ ತೊರೆದು ಆರ್‌ಜೆಡಿಯೊಂದಿಗೆ ಕೈ ಜೋಡಿಸಿದರು. ಆರ್‌ಜೆಡಿ, ಕಾಂಗ್ರೆಸ್‌ ಮತ್ತು ಜೆಡಿಯು ಮೈತ್ರಿ ಚುನಾವಣೆಯಲ್ಲಿ ಜಯಗಳಿಸಿತು. ನಿತೀಶ್‌ ಮುಖ್ಯಮಂತ್ರಿಯಾದರು.

ಆರ್‌ಜೆಡಿ ಮೈತ್ರಿ ಬಿಟ್ಟು ಬಿಜೆಪಿ ಜೊತೆಗೆ ಒಗ್ಗಟ್ಟು (6ನೇ ಬಾರಿ)

2015ರ ಚುನಾವಣೆಯಲ್ಲಿ ಆರ್‌ಜೆಡಿ ನಿತೀಶ್‌ ಕುಮಾರ್‌ಗೆ ತೀವ್ರ ಬೆಂಬಲ ನೀಡಿತ್ತು. ತಾವು ಗೆದ್ದ ಸ್ಥಾನಗಳಲ್ಲೂ ಜೆಡಿಯುಗೆ ಅವಕಾಶ ಕೊಟ್ಟ ಲಾಲೂ ಪ್ರಸಾದ್‌ ಯಾದವ್‌ ನಿತೀಶ್‌ಗೆ ಸಹಕಾರ ಕೊಟ್ಟಿದ್ದರು. ಆದರೂ, ಜೆಡಿಯು ಹೆಚ್ಚು ಸ್ಥಾನಗಳನ್ನು ಗೆಲ್ಲಲಿಲ್ಲ. ಕಡಿಮೆ ಪರ್ದಶನ ನೀಡಿದರೂ, ಲಾಲೂ ಅವರು ನಿತೀಶ್‌ರನ್ನೇ ಸಿಎಂ ಮಾಡಿದ್ದರು. ಅದರೆ, ಆರ್‌ಜೆಡಿ ಜೊತೆಗೆ ಮುಂದುವರೆಯಲು ಇಚ್ಚಿಸದ ನಿತೀಶ್‌ 2017ರಲ್ಲಿ ಮತ್ತೆ ಬಿಜೆಪಿ ಜೊತೆಗಿನ ಮೈತ್ರಿಗೆ ಮರಳಿದರು. 2017ರಲ್ಲಿಯೂ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ನಿತೀಶ್‌ ಸಿಎಂ ಆದರು.

2020ರ ಚುನಾವಣೆಯಲ್ಲಿಯೂ ಎನ್‌ಡಿಎಯಿಂದ ಮುಖ್ಯಮಂತ್ರಿ (7ನೇ ಬಾರಿಗೆ) 

ಕಳೆದ ವಾರ ಫಲತಾಂಶ ಪ್ರಕಟವಾರ 2020ರ ಚುನಾವಣೆಯಲ್ಲಿ ತೀವ್ರ ಕಳಪೆ ಸಾಧನೆಯನ್ನು ಜೆಡಿಯು ಮಾಡಿದೆ. 208 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 43 ಸ್ಥಾನಗಳನ್ನಷ್ಟೇ ನಿತೀಶ್‌ ನೇತೃತ್ವದ ಜೆಡಿಯು ಪಡೆದಿದೆ. ಅದರೂ, ನಿತೀಶ್‌ ರನ್ನೇ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ನಿನ್ನೆ 07 ನೇ ಬಾರಿಗೆ ಸಿಎಂ ಆಗಿ ನಿತೀಶ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


ಇದನ್ನೂ ಓದಿ: ಬಿಹಾರ: ಕೇವಲ 43 ಸ್ಥಾನಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಆರ್‌ಜೆಡಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights