ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿದೆ ಜಿಲ್ಲಾಡಳಿತ : ಬಾಡಿಗೆ ಮನೆಸಿಗದೆ ಜನರ ಪರದಾಟ

ಚಿಕ್ಕಮಗಳೂರು ನೆರೆ ಸ್ಥಿತಿ ಹೇಳತೀರದಂತಾಗಿದೆ. ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿಂದಂತೆ ದಿಕ್ಕು ಕಾಣದಂತಾಗಿವೆ ಮಧುಗುಂಡಿ ಗ್ರಾಮದ 40 ಕುಟುಂಬಗಳು.

ಇನ್ನು ಪರಿಹಾರ ಕೇಂದ್ರದಲ್ಲೇ ವಾಸವಿರುವ ನೂರಾರು ಜನರಿಗೆ ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರ ಇಂದೇ ಕೊನೆ ಎಂದಿದ್ದಕ್ಕೆ ಮಧುಗುಂಡಿ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ. ಬಾಡಿಗೆ ಮನೆಗಾಗಿ ಹುಡುಗಾಟ ನಡಿಸಿದ್ರು ಮನೆ ಸಿಗ್ತಿಲ್ಲ. ಹೊಸ ಬದುಕು ಕಟ್ಟಿಕೊಳ್ಳುವ ಆತಂಕವೇ ಹೆಚ್ಚಾಗಿದೆ. ಹೀಗಾಗಿ ಬೇಸರದಲ್ಲಿ ಬದುಕು ಸಾಗಿಸ್ತಿದ್ದಾರೆ ಮನೆ ಕಳೆದುಕೊಂಡ ಕುಟುಂಬಗಳು.

ಮನೆಗಾಗಿ ಹುಡುಗಾಟ ನಡೆಸಿದರೂ ಮಲೆನಾಡು ಭಾಗದಲ್ಲಿ ಬಾಡಿಗೆ ಮನೆ ಕೊರತೆ ಹಿನ್ನೆಲೆ ಮನೆಗಳು ಸಿಗ್ತಿಲ್ಲ.  ನಿರಾಶ್ರಿತ ಕೇಂದ್ರವೂ ಇಲ್ಲ, ಬಾಡಿಗೆಗೆ ಮನೆಯೂ ಇಲ್ಲದೆ ಜನ ಕಂಗಾಲಾಗಿದ್ದಾರೆ. ಹೀಗಾಗಿ 24 ದಿನಗಳಿಂದ ನಿರಾಶ್ರಿತ ಕೇಂದ್ರಲ್ಲಿರೋ ಜನ ಜಿಲ್ಲಾಧಿಕಾರಿ ಬರುವವರೆಗೂ ನಿರಾಶ್ರಿತರ ಕೇಂದ್ರದಿಂದ ಹೊರ ಹೋಗಲ್ಲ ಅಂತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights