ರಣಜಿ ಅಂಪೈರ್ ಮತ್ತು ವೀಕ್ಷಕ ವಿವರಣೆಗಾರ ಬಾಪು ಹನುಮಂತರಾವ್ ನಿಧನ

ರಣಜಿ ಕ್ರಿಕೆಟ್ ಅಂಪೈರ್ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಬಾಪು ಹನುಮಂತರಾವ್ ಅವರು ನಿಧನರಾಗಿದ್ದಾರೆ.

ಅಮೆರಿಕಾದ ಚಿಕಾಗೋದಲ್ಲಿ ವಾಸವಾಗಿದ್ದ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಆಕಾಶವಾಣಿ ದೂರದರ್ಶನದಲ್ಲಿ ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿದ್ದರು. ಕ್ರಿಕೆಟ್ ಪಂದ್ಯವನ್ನು ಕಣ್ಣಿಗೆ ಕಟ್ಟುವಂತೆ ವೀಕ್ಷಕ ವಿವರಣೆ ನೀಡುತ್ತಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ನ ನೋಂದಾಯಿತ ಕ್ರಿಕೆಟ್ ಅಂಪೈರ್ ಆಗಿಯೂ ಅವರು ಜನಪ್ರಿಯರಾಗಿದ್ದರು.

ಇದನ್ನೂ ಓದಿ: T20 world cup: B ಗ್ರೂಪ್‌ನಲ್ಲಿ ಭಾರತ; ಸವಾಲುಗಳನ್ನು ಮೆಟ್ಟಿ ಗೆಲ್ಲುತ್ತಾ ಟೀಂ ಇಂಡಿಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights