ಮಾನವೀಯ ಆಧಾರದಲ್ಲಿ 55 ಮಹಿಳಾ ಖೈದಿಗಳಿಗೆ ಬಿಡುಗಡೆ ಭಾಗ್ಯ!

ಜೈಲು ಶಿಕ್ಷೆ ಅನುಭವಿಸುವ ದಿನಗಳಲ್ಲಿ ಸನ್ನಡೆತೆಯಿಂದ ನಡೆದುಕೊಳ್ಳುತ್ತಿದ್ದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 55 ಮಹಿಳಾ ಕೈದಿಗಳನ್ನು ಮಾನವೀಯ ಆಧಾರದ ಮೇಲೆ ಬಿಡುಗಡೆಗೊಳಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

ಆಂಧ್ರಪ್ರದೇಶ ವಿವಿಧ ಜೈಲುಗಳಲ್ಲಿರುವ ಬಿಡುಗಡೆಗೆ ಅರ್ಹ 55 ಮಹಿಳಾ ಕೈದಿಗಳ ಹೆಸರನ್ನು ಪಟ್ಟಿಮಾಡಿದ್ದು, ಮುಂದಿನ ವಾರ  ಬಿಡುಗಡೆಗೊಳಿಸಲಿದೆ.

“ಮಾನವೀಯ ಆಧಾರದ ಮೇಲೆ ಐದು ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳಿಸಿದ ಖೈದಿಗಳನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. 147 ಮಹಿಳೆಯರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರಲ್ಲಿ ನಾವು 55 ಜನರನ್ನು ಮುಕ್ತಗೊಳಿಸಲು ಆಯ್ಕೆ ಮಾಡಿದ್ದೇವೆ” ಎಂದು ಗೃಹ ಸಚಿವ ಮೆಕಥೋಟಿ ಸುಚರಿಥಾ ಹೇಳಿದ್ದಾರೆ.

21 ರಾಜಮಂಡ್ರಿ ಜೈಲಿನಿಂದ, 27 ಕಡಪದಿಂದ, ಇಬ್ಬರು ವಿಶಾಖಪಟ್ಟಣಂ ಮತ್ತು ಐದು ಮಂದಿ ನೆಲ್ಲೂರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. “ಮಹಿಳೆಯರು ಜೈಲಿಗೆ ಹೋದಾಗ, ಅವರ ಕುಟುಂಬಗಳು ಗಲಿಬಿಲಿಗೊಳ್ಳುತ್ತವೆ. ಅವರ ನಡವಳಿಕೆಯಲ್ಲಿ ಬದಲಾವಣೆ ತರಲು ನಾವು ಸುಧಾರಣೆಗಳನ್ನು ಪರಿಚಯಿಸಿದ್ದೇವೆ” ಎಂದು ಸುಚರಿಥಾ ತಿಳಿಸಿದ್ದಾರೆ.

ಟೈಲರಿಂಗ್, ಕಸೂತಿ, ಸೀರೆ ಪೈಂಟಿಂಗ್, ಬೇಕರಿ ಮತ್ತು ಇತರ ವಿಷಯಗಳಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಆಯ್ದ ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.


ಇದನ್ನೂ ಓದಿ: ಕಾಮಗಾರಿ ಪೂರ್ಣಗೊಳ್ಳದ ಉಕ್ಕಿನ ಸೇತುವೆಯನ್ನು ಪ್ರಾಚೀನ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಎಎಪಿ ಕಿಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights