ಫ್ಯಾಕ್ಟ್‌ಚೆಕ್: ಪುಣೆಯಲ್ಲಿ ಪ್ರತಿಭಟನೆ ವೇಳೆ PFI ಸದಸ್ಯರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಲ್ಲ

NIA ದಾಳಿ ವಿರೋಧಿಸಿ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ಸೆಪ್ಟೆಂಬರ್ 23 ರಂದು ಪುಣೆಯ ಸಸೂನ್ ಆಸ್ಪತ್ರೆ ಬಳಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ANI, ರಿಪಬ್ಲಿಕ್, ನಯೀ ದುನಿಯಾ ಮತ್ತು ಲೋಕಮತ್ ವಾಹಿನಿಗಳೂ ಇದೇ ಪ್ರತಿಪಾದನೆಯೊಂದಿಗೆ ವರದಿ ಬಿತ್ತರಿಸಿವೆ.

ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿತ್ತು. ಹಾಗಿದ್ದರೆ PFI ನ ಸದಸ್ಯರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ನಿಜವೇ ? ಎಂದು ಸುದ್ದಿ ವಾಹಿನಿಗಳಲ್ಲಿ ಪ್ರಸಾರಮಾಡಲಾಗಿರುವ ವಿಡಿಯೊಗಳಲ್ಲಿ ವಾಸ್ತವವಾಗಿ ಏನಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

PFI ನ ಸದಸ್ಯರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆಯೇ ಎಂದು ಪರಿಶೀಲಿಸಿದಾಗ, ಅಂತಹ ಯಾವುದೇ ಘೋಷಣೆಯನ್ನು PFI ಕಾರ್ಯಕರ್ತರು ಕೂಗಿಲ್ಲ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ. ಈ ಬಗ್ಗೆ ಪುಣೆ ಪೊಲೀಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು , ಪ್ರತಿಭಟನೆ ವೇಳೆ 40 ಜನ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು, ಈ ವೇಳೆ ಬಂಧಿತ PFI ಕಾರ್ಯಕರ್ತರು “ಜಿಂದಾಬಾದ್, ಜಿಂದಾಬಾದ್, ಪಾಪ್ಯುಲರ್ ಫ್ರಂಟ್ ಜಿಂದಾಬಾದ್” ಎಂದು ಕೂಗಿದ್ದಾರೆ, ಆದರೆ ಪಾಕಿಸ್ತಾನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ,  ಎಂದು ಹೇಳಿದ್ದಾರೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

ಯಾರೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಲಿಲ್ಲ. “ಅವರ ಘೋಷಣೆ ‘ಪಾಪ್ಯುಲರ್ ಫ್ರಂಟ್ ಜಿಂದಾಬಾದ್’ ಆಗಿತ್ತು.”  ಇದು ಸಂಪೂರ್ಣ ಸುಳ್ಳು ಎಂದು ಬಂಡ್ ಗಾರ್ಡನ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಾಪ್ ಮಾನ್ಕರ್ ಹೇಳಿದ್ದಾರೆ.

“ಇದು ಸಂಪೂರ್ಣ ನಕಲಿ ಸುದ್ದಿ. ನಮ್ಮ ನಗರದಲ್ಲಿ ಶಾಂತಿ, ಸೌಹಾರ್ದತೆ ಕದಡಲು ಕೆಲವು ಚಾನೆಲ್‌ಗಳು ತಪ್ಪು ಮಾಹಿತಿ ಹರಡುತ್ತಿವೆ. ನಾವು ಎಲ್ಲವನ್ನೂ ಪರಿಶೀಲಿಸಿದ್ದೇವೆ, ಪ್ರತಿಭಟನಾಕಾರರು ಪಾಪ್ಯುಲರ್ ಫ್ರಂಟ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು,  ಪಾಕಿಸ್ತಾನದ ಪರವಾಗಿಲ್ಲ. ಎಂದು ಪ್ರತಿಭಟನೆ ನಡೆದ ಬಂಡ್ ಗಾರ್ಡನ್‌ನಲ್ಲಿದ್ದ ಇನ್ನೊಬ್ಬ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಬ್ದುಲ್ ಅಜೀಜ್ ಮಾತನಾಡಿದ್ದು, “ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಲಿಲ್ಲ, ಆದರೆ ಜನರು  ಕಲೆಕ್ಟರ್ ಕಚೇರಿಯ ಹೊರಗೆ ಜಮಾಯಿಸಿದ್ದರು, ಅವರಲ್ಲಿ 200-250 ಜನರು” ‘ಜಿಂದಾಬಾದ್, ಜಿಂದಾಬಾದ್, ಪಾಪ್ಯುಲರ್ ಫ್ರಂಟ್ ಜಿಂದಾಬಾದ್’ ಮತ್ತು ಕೆಲವು ಅಲ್ಲಾ-ಉ-ಅಕ್ಬರ್ ಎಂದು ಕೂಗುತ್ತಿದ್ದರು. 10 ನಿಮಿಷಗಳ ನಂತರ, ಪೊಲೀಸರು ಸುಮಾರು 40 ಜನರನ್ನು ಬಂಧಿಸಿ ಸಂಜೆ ಬಿಡುಗಡೆ ಮಾಡಿದರು, ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಪ್ರತಿಭಟನಾಕಾರ ಮೊಹಮ್ಮದ್ ಕೈಜ್ ಪ್ರತಿಕ್ರಯಿಸಿದ್ದು “ಯಾವ ಪ್ರತಿಭಟನಾಕಾರರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿಲ್ಲ” ಎಂದು ಹೇಳಿದ್ದಾರೆ. ಹಾಗಾಗಿ ಈ ಎಲ್ಲಾ ಪುರಾವೆಗಳಿಂದ ಸುದ್ದಿ ವಾಹಿನಿ ಮತ್ತು BJP ಬೆಂಬಲಿಗರು ಮಾಡಿರುವ ಆರೋಪ ಸುಳ್ಳು ಎಂದು ಸ್ಪಷ್ಟಾಗಿದೆ.

ಕೃಪೆ : ನ್ಯೂಸ್ ಲಾಂಡ್ರಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಕರ್ನಾಟಕದಲ್ಲಿ ದಲಿತ ಕುಟುಂಬ ಬೆತ್ತಲೆ ಪ್ರತಿಭಟನೆ ನಡೆಸಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights