ಫ್ಯಾಕ್ಟ್‌ಚೆಕ್: ಮಧುರೈ ಏಮ್ಸ್ (AIIMS)ನ 95% ರಷ್ಟು ಕೆಲಸ ಮುಗಿದಿವೆ ಎಂದು ಸುಳ್ಳು ಹೇಳಿದ BJP ಅಧ್ಯಕ್ಷ

ಮಧುರೈಯಲ್ಲಿ ನಿರ್ಮಿಸಲಾಗುತ್ತಿರುವ ಏಮ್ಸ್ (AIIMS) ಯೋಜನೆ ಕಾಮಗಾರಿಯ ಪ್ರಗತಿಯ ಬಗ್ಗೆ  BJP ಅಧ್ಯಕ್ಷ ಜೆ.ಪಿ. ನಡ್ಡಾ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು.

YouTube ವೀಡಿಯೊವನ್ನು ವೀಕ್ಷಿಸಿ.

BJP ಅಧ್ಯಕ್ಷ ಜೆ.ಪಿ. ನಡ್ಡಾಅವರು ಸೆಪ್ಟೆಂಬರ್ 22, 2022 ರಂದು ಮಧುರೈ ಮತ್ತು ಶಿವಗಂಗಾಗೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ  ಮಧುರೈನಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ 95% ರಷ್ಟು ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಇದನ್ನು ಪ್ರಧಾನಿಯವರು ಜನರಿಗೆ ಅರ್ಪಿಸಲಿದ್ದಾರೆ” ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು.

ತಮಿಳುನಾಡಿನ ಮಧುರೈ ಬಳಿಯ ತೋಪ್ಪೂರ್‌ನಲ್ಲಿ AIIMS ನ ಕಾಮಗರಿಗಳು ಶೇ 95 % ರಷ್ಟು ಮುಗಿದಿವೆ ಎಂದು JP ನಡ್ಡಾ ಹೇಳಿದ್ದು, ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂದು ವಾಸ್ತವವನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮಧುರೈನ ಏಮ್ಸ್‌ನ 95% ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ  ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಸಂಸದ ಮಣಿಕ್ಕಂ ಠಾಗೋರ್ ಕಾಮಗಾರಿ ಸ್ಥಳಕ್ಕೆ ತೆರಳಿ ವಿವರಗಳನ್ನು ಸಂಗ್ರಹಿಸಿ, ವಿಡಿಯೋ ಚಿತ್ರಗಳನ್ನೂ ಟ್ವೀಟ್ ಮಾಡಿದ್ದಾರೆ. ಆದರೆ ಅಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ-ಎಂ ಮತ್ತು ಕಾಂಗ್ರೆಸ್‌ನ ನಾಯಕರು ಜೆಪಿ ನಡ್ಡಾ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಧುರೈ ಕ್ಷೇತ್ರದ ಸಂಸದ ಸು ವೆಂಕಟೇಶನ್ ಮತ್ತು ವಿರುದುನಗರ ಸಂಸದ ಮತ್ತು ಕಾಂಗ್ರೆಸ್ ನಾಯಕ ಬಿ ಮಾಣಿಕಂ ಟ್ಯಾಗೋರ್ ಅವರು ಏಮ್ಸ್ ನಿರ್ಮಾಣವಾಗಬೇಕಿರುವ ಜಾಗದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿಗೆ ಭೇಟಿ ನೀಡಿದ್ದ ನಡ್ಡಾ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿ “ಏಮ್ಸ್ ಯೋಜನೆಗೆ ರೂ. 1,264 ಕೋಟಿ ಮಂಜೂರಾಗಿದೆ ಎಂದು ಹೇಳಲು ಸಂತೋಷಿಸುತ್ತೇನೆ. ಇಂದು ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರ ಪ್ರಧಾನಿ ಅದನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಹೆಚ್ಚುವರಿ ರೂ. 164 ಕೋಟಿ ಮಂಜೂರುಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ 750 ಹಾಸಿಗೆಗಳು ಹಾಗೂ ಇವುಗಳ ಪೈಕಿ 250 ಐಸಿಯು ಬೆಡ್‍ಗಳು ಇರುತ್ತವೆ” ಎಂದೂ ನಡ್ಡಾ ಹೇಳಿದ್ದರು. ಆದರೆ ನಡ್ಡಾ ಮಾತುಗಳನ್ನು ಒಪ್ಪದ ಕಾಂಗ್ರೆಸ್ ಸಂಸದ ಠಾಗೋರ್ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದಾರೆ.

https://twitter.com/manickamtagore/status/1573192926909571072?ref_src=twsrc%5Etfw%7Ctwcamp%5Etweetembed%7Ctwterm%5E1573192926909571072%7Ctwgr%5Ec87870a3cc8c49ed3b94483f7dab9494dbaa2040%7Ctwcon%5Es1_&ref_url=https%3A%2F%2Fm.varthabharati.in%2Farticle%2F2022_09_24%2F350639

ನಡ್ಡಾ, ಅವರು “ತಮಿಳುನಾಡಿನ ಮದುರೆಯ AIIMS ನ ಕೆಲಸ 95% ಮುಗಿದಿದೆ, ಸದ್ಯವೇ ಪ್ರಧಾನಿಯವರು ಅದನ್ನು ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದರು. ಹೊಸ ಏಮ್ಸ್ ನೋಡಲು ಜನ ಓಡಿದರು. ನೋಡುವುದೇನು 2019 ರಲ್ಲಿ ಮೋದಿ ಸಾಹೇಬರು ಹಾಕಿದ ಅಡಿಗಲ್ಲು ಚಿಗುರಿ ಹೆಮ್ಮರವಾಗಿಯೇ ಇಲ್ಲ. ಅಲ್ಲಿರುವುದು ಅಡಿಗಲ್ಲು ಮಾತ್ರ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

“ಪ್ರೀತಿಯ ನಡ್ಡಾಜೀ, ಮಧುರೈ ಏಮ್ಸ್ ಶೇ 95 ಕಾಮಗಾರಿ ಪೂರ್ಣಗೊಂಡಿದ್ದಕ್ಕಾಗಿ ಧನ್ಯವಾದಗಳು. ನಾನು ತೊಪ್ಪೂರು ಸೈಟ್‍ನಲ್ಲಿ ಒಂದು ಗಂಟೆ ಹುಡುಕಿದೆ ಆದರೆ ಏನೂ ದೊರೆಯಲಿಲ್ಲ, ಯಾರೋ ಕಟ್ಟಡವನ್ನು ಕದ್ದಿರಬೇಕು” ಎಂದು ಮಣಿಕಾಮ್ ಟ್ಯಾಗೋರ್ ವ್ಯಂಗ್ಯವಾಡಿದ್ದಾರೆ.

“ನಡ್ಡಾ ಅವರು ಮಧುರೈನಲ್ಲಿ ಮಾತನಾಡಿದ್ದಾರೆ ಹಾಗೂ ಶೇ. 95ರಷ್ಟು ಕಾಮಗಾರಿ ಮುಗಿದಿದೆ ಎಂದಿದ್ದಾರೆ. ಈ ರೀತಿ ಕಾಮಗಾರಿ ಪೂರ್ಣದ ಬಗ್ಗೆ ಸುಳ್ಳು ಹೇಳಿರುವುದು ಅಚ್ಚರಿ ಮೂಡಿಸಿದೆ. ಇದು ಅವರು ತಮಿಳುನಾಡಿನ ಜನರಿಗೆ ವಂಚಿಸುವ ವಿಧಾನ,” ಎಂದು ವೀಡಿಯೋವೊಂದರಲ್ಲಿ ಠಾಗೋರ್ ಹೇಳಿದ್ದಾರೆ.

ಗೂಗಲ್ ಸಹಾಯದಿಂದ ಗೂಗಲ್ ಮ್ಯಾಪ್‌ ಮೂಲಕ ಸ್ಥಳ ಪರಿಶೀಲನೆಯನ್ನು ಮಾಡಿದಾಗ, ನಡ್ಡಾ ಪ್ರಸ್ತಾಪಿಸಿದ ನಿವೇಶನದಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿಗೆ ಭೇಟಿ ನೀಡಿದ್ದ ನಡ್ಡಾ ಮಧುರೈಯಲ್ಲಿ ನಿರ್ಮಿಸಲಾಗುತ್ತಿರುವ ಏಮ್ಸ್ (AIIMS) ಯೋಜನೆ ಕಾಮಗಾರಿ ಶೇ 95% ಪೂರ್ಣಗೊಂಡಿದೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ‘ಪ್ರಾಜೆಕ್ಟ್‌ ಚೀತಾ’ ಕಾರ್ಯಕ್ರಮಕ್ಕಾಗಿ ಮರಗಳನ್ನು ನೆಲಸಮ ಮಾಡಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights