ಸಿದ್ದು ತಳಿಯ ಹಲಸಿನ ಹಣ್ಣಿಗೆ ಮನಸೋತ ಸಿಎಂ ಯಡಿಯೂರಪ್ಪ!
ಅಧಿಕ ಪೋಷಕಾಂಶವುಳ್ಳ ತಾಮ್ರ ಕೆಂಪು ಬಣ್ಣದ ಸಿದ್ದು ಹಲಸಿನಹಣ್ಣು, ಇತರ ತಳಿಯ ಹಲಸಿನ ಹಣ್ಣುಗಳಿಂದ ಉತ್ತರ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತುಮಕೂರಿನ ಅಧಿಕಾರಿಗಳು ಸಹಭಾಗಿ ಸಸ್ಯ ಅಭಿವೃದ್ದಿ ಕಾರ್ಯಕ್ರಮದ ಅಡಿಯಲ್ಲಿ ಸಿದ್ದು ತಳಿಯ ಹಲಸಿನ ಸಸಿಗಳನ್ನು ಸಿಎಂ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಬಿಎಸ್ವೈ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹಲಸಿನ ತಳಿಗಳ ಬಗ್ಗೆ ಸಂಶೋಧನೆ ನಡೆಸಿದ್ದು, ತುಮಕೂರು ಜಿಲ್ಲೆಯ ಚೇಳೂರು ಗ್ರಾಮದಲ್ಲಿ ಸಿದ್ದು ತಳಿಯ ಹಲಸಿನ ಹಣ್ಣನ್ನು ಗುರುತಿಸಿದ್ದಾರೆ. ಇದು ಅಭಿನಂದನಾರ್ಹ. ಈ ತಳಿಯ ಹಣ್ಣುಗಳು ಶ್ರೇಷ್ಟ ಮತ್ತು ವಿಶಿಷ್ಟವಾಗಿವೆ ಎಂಬ ಮಾನ್ಯತೆ ಪಡೆದಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುವೇಂದು ಭೇಟಿ ಮಾಡಿದ ‘ತುಷಾರ್ ಮೆಹ್ತಾ’ರನ್ನು ಸಾಲಿಟರ್ ಜನರಲ್ ಹುದ್ದೆಯಿಂದ ವಜಾಗೊಳಿಸಿ: ಮೋದಿಗೆ ಟಿಎಂಸಿ ಪತ್ರ
ಸಿದ್ದು ತಳಿಯ ಹಲಸಿನ ಹಣ್ಣನ್ನು ಬೆಳೆದಿರುವ ಚೇಳೂರಿನ ಪರಮೇಶ್ ಎಂಬುವವರು ಕಳೆದ 2 ವರ್ಷಗಳಲ್ಲಿ 22 ಲಕ್ಷ ಅದಾಯ ಗಳಿಸಿದ್ದಾರೆ. ಈ ಹಣ್ಣುಗಳನ್ನು ಬೆಳೆಸುವುದರಿಂದ ಜೀವ ವೈವಿದ್ಯತೆಯನ್ನು ಕಾಪಾಡಬಹುದು. ರೈತರು ಹೆಣ್ಣು ಆದಾಯ ಗಳಿಸಬಹುದು. ರಾಜ್ಯದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೂವರೆಗೆ 31 ಸಾವಿರ ರೈತರಿಗೆ ಈ ತಳಿಯ ಸಸಿಗಳನ್ನು ವಿತರಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಭಾರತದಲ್ಲಿ ಸುಮಾರು 137 ರೀತಿಯ ಹಲಸಿನ ತಳಿಗಳಿವೆ. ಈ ಪೈಕಿ ಸಿದ್ದು ಹಲಸಿನ ಹಣ್ಣುಗಳು ವಿಶಿಷ್ಟವಾದವು. ಇವುಗಳನ್ನು ಹಲಸಿನ ರಾಜ ಎಂದು ಕರೆಯಲಾಗುತ್ತದೆ. 100 ಗ್ರಾಮ್ ಸಿದ್ದು ಹಲಸಿನ ಹಣ್ಣಿನಲ್ಲಿ 2 ಎಂಜಿ ಲಿಕೋಪಿನ್. ಉಳಿದ ತಳಿಗಳ ಹಣ್ಣುಗಳಲ್ಲಿ ಲಿಕೋಪಿನ್ ಕೇವಲ 0.2 ಎಂಜಿ ಮಾತ್ರ ಇರುತ್ತದೆ ಎಂದು ಹೇಳಲಾಗಿದೆ. ಲಿಕೋಪಿನ್ ಅಂಶ ಹೆಚ್ಚಾಗಿರುವುದರಿಂ ಹೃದಯ ಸಂಬಂಧಿ ಕಾಯಿಲೆಗಳಿಗೆ ಇವು ಉಪಯುಕ್ತ ಎಂದು ಹೇಳಲಾಗಿದೆ.
ಇದನ್ನೂ ಓದಿ: DRDO ಮಾಜಿ ವಿಜ್ಞಾನಿ, ಹೆಚ್ಎಎಲ್ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ನಿಧನ!

