ವೇದಿಕೆಯಲ್ಲಿ ಸರಸ್ವತಿ ಪೂಜೆಗೆ ವಿರೋಧ: ಪ್ರಶಸ್ತಿ ತಿರಸ್ಕರಿಸಿದ ಕವಿ!

ಸಾಹಿತ್ಯ ಕಾರ್ಯಕ್ರಮದ ವೇದಿಕೆಯಲ್ಲಿ ಸರಸ್ವತಿ ಪೂಜೆ ಮಾಡಿ, ಫೋಟೋಗೆ ಮಾಲಾರ್ಪಣೆ ಮಾಡಿದ್ದನ್ನು ವಿರೋಧಿರುವ ಹಿರಿಯ ಮರಾಠಿ ಕವಿ ಯಶವಂತ್ ಮನೋಹರ್ ಅವರು ‘ವಿದರ್ಭ ಸಾಹಿತ್ಯ ಸಂಘ’ ನೀಡಿದ ಜೀವಮಾನ ಸಾಧನೆ ಪ್ರಶಸ್ತಿಯನ್ನು ತಿರಸ್ಕರಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

“ದೇವತೆಯ ಭಾವಚಿತ್ರ, ಮಹಿಳೆಯರು ಹಾಗೂ ಶೂದ್ರರನ್ನು ಶಿಕ್ಷಣ ಮತ್ತು ಜ್ಞಾನ ಪಡೆಯದಂತೆ ತಡೆಯುವ ಸಂಕೇತ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧಾರ್ಮಿಕತೆಯನ್ನು ನಾನು ಒಪ್ಪುವುದಿಲ್ಲ” ಎಂದು ವಿದರ್ಭ ಸಾಹಿತ್ಯ ಸಂಘಕ್ಕೆ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ.

ಬರಹಗಾರನಾಗಿ ನನ್ನ ಪಾತ್ರ ಮತ್ತು ನನ್ನ ಯೋಚನೆಗಳ ಬಗ್ಗೆ ವಿದರ್ಭ ಸಾಹಿತ್ಯ ಸಂಘಕ್ಕೆ ಅರಿವು ಇದೆ ಎಂದು ನಾನು ಭಾವಿಸಿದ್ದೇನೆ. ಸರಸ್ವತಿ ದೇವಿಯ ಚಿತ್ರ ಇರುತ್ತದೆ ಎಂದು ನನಗೆ ಹೇಳಲಾಗಿದೆ. ನನ್ನ ಮೌಲ್ಯಗಳನ್ನು ಕಡೆಗಣಿಸಿ ನಾನು ಪ್ರಶಸ್ತಿ ಸ್ವೀಕರಿಸಲಾರೆ. ವಿನಯದಿಂದ ಈ ಪ್ರಶಸ್ತಿಯನ್ನು ನಿರಾಕರಿಸುತ್ತೇನೆ” ಎಂದು ನಾಗ್ಪುರದ ಸಾಹಿತಿ ಹೇಳಿದ್ದಾಗಿ PreePressJournal.com ವರದಿ ಮಾಡಿದೆ.

ವಿಎಸ್‌ಎಸ್‌ನಿಂದ ಯಾರಾದರೂ ಸಂಪರ್ಕಿಸಿ ಚರ್ಚಿಸಿದ್ದರೆ ಒಂದು ಪರಿಹಾರ ಕಂಡುಹಿಡಿಯಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ವಿವರಿಸಿದ್ದಾರೆ. ಸರಸ್ವತಿ ದೇವರ ಫೋಟೊ ಇಡುವ ಬದಲು ಎಲ್ಲ ಸಾಹಿತ್ಯಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾವಿತ್ರಿಭಾಯಿ ಪುಲೆ ಅವರ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಇಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಎಲ್ಲ ಕಲಾವಿದರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಕೋರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Read Also: ಬಂಗಾಳದಲ್ಲಿ BJPಗೆ TMCಗರ ದಂಡು; ಪಕ್ಷಕ್ಕೆ ಆನಂದ – RSSಗೆ ಆತಂಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights