FACT CHECK | ಜಾರ್ಜ್ ಸೊರೊಸ್ ಮಗನ ಮದುವೆಯಲ್ಲಿ ಭಾಗವಹಿಸಿದ್ರಾ ರಾಹುಲ್ ಗಾಂಧಿ?

ಜೂನ್ 14, 2025 ರಂದು, ವಿವಾದಾತ್ಮಕ ಅಮೇರಿಕನ್ ಬಿಲಿಯನೇರ್ ಉದ್ಯಮಿ ಜಾರ್ಜ್ ಸೊರೊಸ್ ಅವರ ಮಗ ಅಲೆಕ್ಸ್ ಸೊರೊಸ್, ಹಿಲರಿ ಕ್ಲಿಂಟನ್ ಅವರ ಮಾಜಿ ಸಹಾಯಕಿ ಹುಮಾ ಅಬೆಡಿನ್ ಅವರನ್ನು ನ್ಯೂಯಾರ್ಕ್‌ನ ಹ್ಯಾಂಪ್ಟನ್ಸ್‌ನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ವಿವಾಹವಾದರು. ಈ ವಿವಾಹ ಸಮಾರಂಭದಲ್ಲಿ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಭಾರತದಲ್ಲಿ ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ಜಾರ್ಜ್ ಸೊರೊಸ್ ಪುತ್ರನ ಮದುವೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ ನೋಡಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದಬೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ. ನಾವು ರಾಹುಲ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಲಾಗಿದ್ದು ಅಲ್ಲಿಯೂ ವೈರಲ್ ಆಗಿರುವ ಯಾವುದೇ ಚಿತ್ರ ಕಂಡುಬಂದಿಲ್ಲ.

ಬಳಿಕ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದರಲ್ಲಿ ನೈಜ್ಯತೆಗೆ ದೂರವಾಗಿರುವ ಅನೇಕ ಅಂಶಗಳು ಇರುವುದನ್ನು ಕಂಡುಬಂದಿದೆ. ಉದಾಹರಣೆಗೆ, ವಧುವಿನ ಕೈ ವಿರೂಪಗೊಂಡಂತೆ ತೋರುತ್ತಿದೆ, ಹಾಗೆಯೆ ಸೊರೊಸ್‌ನ ಬೆರಳು ಗಾಂಧಿಯವರ ಉಡುಪಿನಲ್ಲಿ ವಿಲೀನಗೊಂಡಿರುವುದನ್ನು ಕಾಣಬಹುದು. ಮಸುಕಾದ ಹಿನ್ನೆಲೆ ಮತ್ತು ಚಿತ್ರದ ಹೆಚ್ಚುವರಿ ನಯವಾದ ವಿನ್ಯಾಸವು ಇದು AI ನಿಂದ ರಚಿಸಲಾಗಿರುವ ಸಾಧ್ಯತೆ ಇದೆ ಎಂಬ ಅನುಮಾನ ಮೂಡಿತು.

ಇದಲ್ಲದೆ, ಈ ವೈರಲ್ ಫೋಟೋದ ಕೆಳಗಿನ ಬಲ ಮೂಲೆಯಲ್ಲಿ AI ಸಹಾಯಕ ಗ್ರೋಕ್ ಅವರ ವಾಟರ್‌ಮಾರ್ಕ್ ಕೂಡ ಮಸುಕಾಗಿ ಕಂಡುಬರುತ್ತದೆ.

ವೈರಲ್ ಚಿತ್ರವು AI ರಚಿತವಾಗಿದೆಯೇ ಎಂದು ಮತ್ತಷ್ಟು ಪರಿಶೀಲಿಸಲು, ನಾವು AI ವಿಷಯ ಪತ್ತೆ ಪರಿಕರಗಳನ್ನು ಬಳಸಿಕೊಂಡು ಚೆಕ್ ಮಾಡಿದಾಗ, ಚಿತ್ರವನ್ನು AI- ರಚಿತವಾಗುವ ಸಾಧ್ಯತೆಯನ್ನು 99.9% ರಷ್ಟಿದೆ ಎಂದು ಸೂಚಿಸಿದೆ. ಸೈಟ್‌ಎಂಜಿನ್ ಫಲಿತಾಂಶಗಳು AI- ರಚಿತವಾಗುವ ಸಾಧ್ಯತೆಯನ್ನು 99% ರಷ್ಟು ಸೂಚಿಸಿವೆ. ವಾಸಿಟ್‌ಎಐ ಮತ್ತು AI ಅಥವಾ ನಾಟ್ ನಂತಹ ಇತರ ಪರಿಕರಗಳು ಸಹ ಫೋಟೋವನ್ನು AI- ರಚಿತವಾಗಿದೆ ಎಂದು ದೃಢಪಡಿಸಿದವು.

ರಾಹುಲ್ ಗಾಂಧಿ ಅವರು ಈ ಮದುವೆಗೆ ಹಾಜರಾಗಿದ್ದಾರೆಯೇ ಅಥವಾ ಇಲ್ಲವೇ ಎಂದು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಫೋಟೋವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಒಟ್ಟಾರೆಯಾಗಿ ಹೇಳುವುದಾದರೆ. ರಾಹುಲ್ ಗಾಂಧಿ ಅವರು ಅಲೆಕ್ಸ್ ಸೊರೊಸ್ ಮದುವೆಗೆ ಆಗಮಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೊ AI ನಿಂದ ರಚಿತವಾಗಿದೆ ಎಂದು ನ್ಯೂಸ್ ಮೀಟರ್ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ ವರದಿ ಪ್ರಕಟಿಸಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇರಾನ್ ದಾಳಿಗೆ ಅಮೆರಿಕದ ಯುದ್ಧ ವಿಮಾನಗಳು ಭಾರತದ ವಾಯುಪ್ರದೇಶವನ್ನು ಬಳಸಿಕೊಂಡಿವೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights