FACT CHECK | ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿಕೊಳ್ಳುತ್ತಿದ್ದಾನೆ ಎಂದು AI ವಿಡಿಯೋ ಹಂಚಿಕೆ

ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿಕೊಳ್ಳುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು!

ಫೇಸ್‌ಬುಕ್ ನಲ್ಲಿ ವಿಡಿಯೋ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು “ಇಸ್ರೇಲ್ ಸೈನಿಕರ ಮಂಡಿಯೂರಿ ಬೇಡಿಕೊಳ್ಳುತ್ತಿದ್ದಾರೆ ಇರಾನ್ ಸ್ಟಾಪ್ ವಾರ್  ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸೂಕ್ಷ್ಮವಾಗಿ ಗಮನಿಸಿದಾಗ, ಕ್ಲಿಪ್ ನ ಬಲ ಮೂಲೆಯಲ್ಲಿ “Veo” ಎಂದು ಬರೆದಿರುವ ವಾಟರ್ ಮಾರ್ಕ್ ಗಮನಿಸಿದ್ದೇವೆ.  ಇದು Google ನ ಎಐ ಮಾದರಿಯಾಗಿದ್ದು ಅದು ಪಠ್ಯ ಅಥವಾ ಚಿತ್ರ ಪ್ರಾಂಪ್ಟ್‌ಗಳಿಂದ ವೀಡಿಯೋಗಳನ್ನು ಉತ್ಪಾದಿಸುತ್ತದೆ.

ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು!

ಅನಂತರ ನಾವು ವೀಡಿಯೋವನ್ನು ಎಐ ಪತ್ತೆಸಾಧನ  ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದ್ದೇವೆ. ಅದು ವೀಡಿಯೋ 88% ರಷ್ಟು ಎಐ ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.

ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು!

ಮಿಸ್‌ಇನ್‌ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (MCA) ನ ಡೀಪ್‌ಫೇಕ್ಸ್ ಅನಾಲಿಸಿಸ್ ಯೂನಿಟ್ (DAU) ಕೂಡ ಕ್ಲಿಪ್ ಅನ್ನು ವಿಶ್ಲೇಷಣೆ ನಡೆಸಿದೆ. DAU ಹಿಯಾ ಡೀಪ್‌ಫೇಕ್ ವಾಯ್ಸ್ ಡಿಟೆಕ್ಟರ್ ಅನ್ನು ಬಳಸಿತು, ಇದು ಆಡಿಯೊ ಟ್ರ್ಯಾಕ್ ಅನ್ನು AI ನಿಂದ ರಚಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ಕಂಡುಹಿಡಿದಿದೆ, ಆದರೆ ಡೀಪ್‌ಫೇಕ್-ಒ-ಮೀಟರ್ ಆರು ಆಡಿಯೊ ವರ್ಗೀಕರಣಗಳಲ್ಲಿ, ನಾಲ್ಕು ಆಡಿಯೋ “ಎಐ- ರಚಿತವಾಗಿದೆ” ಎಂದು ಹೆಚ್ಚಿನ ಸಂಭವನೀಯತೆಯನ್ನು ತೋರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದು ಎಐ ರಚಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜಾರ್ಜ್ ಸೊರೊಸ್ ಮಗನ ಮದುವೆಯಲ್ಲಿ ಭಾಗವಹಿಸಿದ್ರಾ ರಾಹುಲ್ ಗಾಂಧಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights