ಕೊರೊನಾ ಭೀತಿ : ಮೋದಿ ಪ್ರವಾಸ ರದ್ದು : ಜನ ದಟ್ಟನೆ ದೇವಸ್ಥಾನದಲ್ಲಿ ನಮೋ ಧರ್ಮಪತ್ನಿ ಪೂಜೆ…

ಕೊರೊನಾ ವೈರಸ್ ಎಲ್ಲೆಡೆ ಹರಡುವ ಆತಂಕದಿಂದ ಮೋದಿಯವರ ದೇಶ ವಿದೇಶ ಪ್ರವಾಸವನ್ನ ರದ್ದು ಪಡಿಸಲಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಮೋದಿ ಅವರ ಧರ್ಮಪತ್ನಿ ಜಸೋದಬೆನ್ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.

ಹೌದು… ಇಂದು ಬೆಳಗ್ಗೆ ರಾಜನುಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಧರ್ಮಪತ್ನಿ ಜಸೋದಬೆನ್ ಕಂಡುಬಂದರು.

ಇಂದು ಬೆಳಗ್ಗೆ ಅಚ್ಚರಿ ಯಂತೆ ಕಾಣಿಸಿಕೊಂಡ ಪ್ರದಾನ ಮಂತ್ರಿಗಳ ಧರ್ಮ ಪತ್ನಿ ಜಸೂಧಬೆನ್ ಅವರು ರಾಜನುಕುಂಟೆಯ ವೇಣುಗೋಪಾಲಸ್ವಾಮಿ ಮತ್ತು ಮಹದೇಶ್ವರ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಅಚ್ಚರಿ ಮುಡಿಸದರು. ದೇವಸ್ಥಾನದಲ್ಲಿ ಜನಸಾಮಾನ್ಯರಂತೆ ಪೂಜೆ ಸಲ್ಲಿಸಿದರು.

ಕೊರೊನಾ ವೈರಸ್ ಭೀತಿಯಿಂದ ಮನೆ ಬಿಟ್ಟು ಹೊರ ಬಾರದಂತ ಪರಿಸ್ಥಿತಿ ನಿರ್ಮಾಣವಾದರೂ ಮೋದಿ ಅವರ ಧರ್ಮಪತ್ನಿ ಜನಬೀಡಿತ ಪ್ರದೇಶವಾದ ದೇವಸ್ಥಾನಕ್ಕೆ ಆಗಮಿಸಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights