ಲಡಾಖ್ ವಿಚಾರದಲ್ಲಿ ಚೀನಾದ ಬೆದರಿಕೆಗೆ ಭಾರತ ಬಗ್ಗುವುದಿಲ್ಲ!

ಲಡಾಖ್‌ನಲ್ಲಿ ಅಥವಾ ಬೇರೆ ಯಾವುದೇ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ಸೈನ್ಯವನ್ನು ಸಜ್ಜುಗೊಳಿಸುವುದರಿಂದ ಉಂಟಾಗುವ ಬೆದರಿಕೆಗೆ ನಾವು ಎದರುವುದಿಲ್ಲ ಹಾಗೂ ಬಿಟ್ಟುಕೊಡುವುದಿಲ್ಲ ಎಂದು ಭಾರತ ನಿರ್ಧರಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಒಂದು ಗಂಟೆ ಕಾಲ ಸಭೆ ನಡೆಸಿದರು. ಭಾರತವು ಪ್ರತಿಪಾದಿಸುವ ಎಲ್‌ಎಸಿಯಲ್ಲಿ ಸೇನೆಯು ಭೂಪ್ರದೇಶವನ್ನು ಕಾಯ್ದುಕೊಳ್ಳುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಲ್‌ಎಸಿಯಲ್ಲಿ ಸೈನ್ಯವನ್ನು ಸಜ್ಜುಗೊಳಿಸಿ ನಿಯೋಜನೆ ಮಾಡಿರುವ ಚೀನಾದ ಪಿಎಲ್‌ಎ(ಪೀಪಲ್ಸ್‌ ಲಿಬರೇಷನ್ ಆರ್ಮಿ)  ಸೈನ್ಯದ ಸಂಖ್ಯೆಗೆ, ಭಾರತದಿಂದ ನಿಯೋಜಿಸಿರುವ ಮಿಲಿಟರಿ ಸಮನಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್‌ಎಸಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳು ಯೋಜಿಸಿದಂತೆ ಮುಂದುವರಿಯುತ್ತವೆ. ಪಿಎಲ್‌ಎಯ ಯಾವುದೇ ಬೆದರಿಕೆಗಳಿಂದಾಗಿ ಅದನ್ನು ನಿಲ್ಲಿಸಲಾಗುವುದಿಲ್ಲ. ಅಲ್ಲದೆ, ಎಲ್‌ಎಸಿಯಲ್ಲಿ ಶಾಂತಿ ಕಾಪಾಡಲು ಭಾರತ ಪ್ರಯತ್ನಿಸುತ್ತದೆ ಎಂದು ರಕ್ಷಣಾ ಸಚಿವ ತಿಳಿಸಿದ್ದಾರೆ.

ಇತ್ತೀಚೆಗೆ ಲಡಾಕ್‌ಗೆ ಭೇಟಿ ನೀಡಿದ್ದ ಆರ್ಮಿ ಚೀಫ್‌ ಜನರಲ್ ಎಂ.ಎಂ ನಾರವಾನೆಯವರು ರಕ್ಷಣಾ ಸಚಿವರಿಗೆ ಅಲ್ಲಿಯ ಪರಿಸ್ಥಿತಿ ಬಗ್ಗೆ ತಳಿಸಿದ್ದಾರೆ. ಭಾರತೀಯ ಸೇನೆ ತನ್ನ ಬಲವನ್ನು ಗಟ್ಟಿಗೊಳಿಸಲು ಹೆಚ್ಚುವರಿ ಸೈನಿಕರನ್ನು ಎಲ್‌ಎಸಿಗೆ ಕರೆದೊಯ್ದಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತದ ಇವರು ಉನ್ನತ ಸೇನಾ ಕಮಾಂಡರ್‌ಗಳು ತಮ್ಮ ದ್ವಿ-ವಾರ್ಷಿಕ ಸಮ್ಮೇಳನಕ್ಕಾಗಿ ಬುಧವಾರ ಸೌತ್ ಬ್ಲಾಕ್‌ನಲ್ಲಿ ಭೇಟಿಯಾಗಲಿದ್ದು, ಆ ಸಭೆಯಲ್ಲಿ ಎಲ್ಲಾ ಭಾಗದಲ್ಲಿರುವ ಭದ್ರತಾ ಪಡೆಯ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights