FACT CHECK | ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಲಗಿದ್ದ ವ್ಯಕ್ತಿಗೆ ಸಿಂಹವೊಂದು ಹಾನಿ ಮಾಡದೆ ಮೂಸಿ ಹೋಗುವ ವಿಡಿಯೋದ ಅಸಲೀಯತ್ತೇನು?

ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದಕ್ಕೆ ಸಿಂಹವೊಂದು ಪ್ರವೇಶಿಸಿ ಮೇಲಕ್ಕೆ ಹತ್ತುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ, ಅಲ್ಲಿ ಕೆಲವು ಕಾರ್ಮಿಕರು ನಿದ್ರಿಸುತ್ತಿರುವುದನ್ನು ಕಾಣಬಹುದು. ಸಿಂಹವು ಅವರನ್ನು ಮೂಸಿ ನೆಕ್ಕುತ್ತಿರುವಂತೆ ಕಾಣುತ್ತದೆ, ನಂತರ ಅವರು ಎಚ್ಚರಗೊಂಡು ಭಯಭೀತರಾಗಿ ಓಡಿಹೋಗುತ್ತಾರೆ. ಗುಜರಾತ್‌ನ ಅಮ್ರೇಲಿಯ ಧಾರಿ ಜಿಲ್ಲೆಯಲ್ಲಿ ನಡೆದಿರಬಹುದೆಂದು ಹೇಳಲಾಗುವ ನೈಜ ಘಟನೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಗುಜರಾತ್‌ನ ಅಮ್ರೇಲಿಯ ಧಾರಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಸಿಂಹವೊಂದು ಪ್ರವೇಶಿಸಿ ನಿದ್ರಿಸುತ್ತಿರುವ ಕಾರ್ಮಿಕರನ್ನು ಮೂಸಿ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಅವುಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಮದು ತಿಳಿಯಲು, ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಡಿಯೋದಲ್ಲಿ ಹಲವು ಅಸಹಜ ಚಲನೆಗಳನ್ನು ಕಾಣಬಹುದು. ಒಂದು ಹಂತದಲ್ಲಿ, ಎರಡು ಸಿಂಹಗಳು ಗೋಚರಿಸುತ್ತವೆ, ಆದರೆ ಒಂದು ನಿಗೂಢವಾಗಿ ಕಣ್ಮರೆಯಾಗುತ್ತದೆ. ಈ ದೃಶ್ಯ ದೋಷಗಳು ವೀಡಿಯೊವನ್ನು AI ಅಥವಾ ಡಿಜಿಟಲ್ ಎಡಿಟಿಂಗ್ ಪರಿಕರಗಳನ್ನು ಬಳಸಿ ರಚಿಸಿರಬಹುದು ಎಂದು ಬಲವಾಗಿ ಸೂಚಿಸುತ್ತವೆ.

ವೀಡಿಯೊವನ್ನು AI-ರಚಿತವಾಗಿದೆಯೇ ಎಂದು ಖಚಿತಪಡಿಸಲು, ನಾವು ಅದನ್ನು AI ಪತ್ತೆ ಪರಿಕರಗಳಾದ Cynalytix ಮತ್ತು DeepFake-o-meter ಬಳಸಿ ವಿಶ್ಲೇಷಿಸಿದ್ದೇವೆ. ಎರಡೂ ಪರಿಕರಗಳು AI ಬಳಸಿ ವೀಡಿಯೊವನ್ನು ಕೃತಕವಾಗಿ ರಚಿಸಲಾಗಿದೆ ಎಂಬ ಹೆಚ್ಚಿನ ಸಾಧ್ಯತೆಯನ್ನು ಸೂಚಿಸಿವೆ.

ವೀಡಿಯೊದಲ್ಲಿ “@ataquesferoz” ಎಂದು ವಾಟರ್‌ಮಾರ್ಕ್ ಅನ್ನು ಸಹ ನಾವು ಗಮನಿಸಿದ್ದೇವೆ. ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ @ataquesferoz ಎಂಬ ಬಳಕೆದಾರರು ಟಿಕ್‌ಟಾಕ್‌ನಲ್ಲಿ ಮೂಲ ಪೋಸ್ಟ್‌ ಲಭ್ಯವಾಗಿದ್ದು, ಅವರು ವೀಡಿಯೊವನ್ನು “AI-ರಚಿತ” ಎಂದು ಲೇಬಲ್ ಮಾಡಿರುವುದು ಕಂಡುಬಂದಿದೆ, ಇದು ದೃಶ್ಯಗಳು ನಿಜವಲ್ಲ ಆದರೆ ಕೃತಕವಾಗಿ ರಚಿಸಲಾಗಿದೆ ಎಂದು ಖಚಿತಪಡಿಸುತ್ತದೆ. ಖಾತೆಯು ಹಲವಾರು ಇತರ AI-ರಚಿತ ವೀಡಿಯೊಗಳನ್ನು ಒಳಗೊಂಡಿದೆ.

ಹೆಚ್ಚುವರಿಯಾಗಿ, ಗುಜರಾತ್‌ನ ಅಮ್ರೇಲಿಯ ಧಾರಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಸಿಂಹ ಪ್ರವೇಶಿಸುವ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಇವೆಯೇ ಎಂದು ಸರ್ಚ್ ಮಾಡಿದಾಗಲು ಇತ್ತೀಚೆಗೆ ಅಂತಹ ಯಾವುದೇ ಘಟನೆ ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ  ಹೇಳುವುದಾದರೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಸಿಂಹ ಪ್ರವೇಶಿಸುವ ಡೀಪ್‌ಫೇಕ್ ವೀಡಿಯೊವನ್ನು ಗುಜರಾತ್‌ನ ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿಕೊಳ್ಳುತ್ತಿದ್ದಾನೆ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights