ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣವನ್ನು ಎಡಿಟ್ ಮಾಡಿ ಹಂಚಿಕೊಂಡ BJP

ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ “ಹಲ್ಲಾ ಬೋಲ್” ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರದ ಆಡಳಿತಾರೂಢ BJP ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹಿಂದೆ ₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ’ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ‘ಹಿಟ್ಟನ್ನು ಕೆ.ಜಿಯಲ್ಲಿ ಮಾರುತ್ತಾರೋ ಅಥವಾ ಲೀಟರ್‌ನಲ್ಲಿ ಮಾರುತ್ತಾರೊ ಎಂಬುದು ರಾಹುಲ್ ಗಾಂಧಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಲಾಗುತ್ತಿದೆ. ಇದರ ಕುರಿತು ಫ್ಯಾಕ್ಟ್ ಚೆಕ್ ಇಲ್ಲಿದೆ.

 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಭಾಷಣದ ಬಗ್ಗೆ ಮಾಡಲಾದ ವ್ಯಂಗ್ಯಗಳ ಕಮೆಂಟ್‌ಗಳನ್ನು ಪರಿಶೀಲಿಸಿದಾಗ ‘ಈ ವಿಡಿಯೊದಲ್ಲಿ ಪೂರ್ಣ ಮಾಹಿತಿ ಇಲ್ಲ’ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಭಾನುವಾರ ಆಯೋಜಿಸಿದ್ದ ಮಹಂಗಾಯಿ ಪೆ ಹಲ್ಲಾ ಬೋಲ್‌ ರ‍್ಯಾಲಿಯಲ್ಲಿ ರಾಹುಲ್ ಮಾತನಾಡಿದ್ದರು. ₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ ಎಂದು ರಾಹುಲ್ ಹೇಳಿದರು. ಆದರೆ ತಕ್ಷಣವೇ ಕೆ.ಜಿಗೆ ಎಂದು ತಿದ್ದಿಕೊಂಡರು.

ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕರಾದ ಮೊಹಮ್ಮದ್ ಜುಬೇರ್ ವೈರಲ್ ವೀಡಿಯೊ ಬಗ್ಗೆ ಟ್ವೀಟ್ ಮಾಡಿದ್ದು “ಈ ಹಿಂದೆ ಎಡಿಟ್ ಮಾಡಿದ ಮತ್ತು ದಾರಿತಪ್ಪಿಸುವ ವೀಡಿಯೊಗಳನ್ನು ಬಿಜೆಪಿ ಐಟಿ ಸೆಲ್ ಹಂಚಿಕೊಂಡಿದೆ. ಇದನ್ನು ಈಗ ಟಿವಿ ನ್ಯೂಸ್ ಚಾನೆಲ್‌ನ ಸ್ಟಾರ್ ಆಂಕರ್‌ಗಳಿಗೆ ಹೊರಗುತ್ತಿಗೆ ನೀಡಲಾಗಿದೆ ಎಂದು ತೋರುತ್ತಿದೆ’ ಎಂದು ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಭಾರತೀಯ ನ್ಯಾಷನಲ್‌ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಲ್ಲಿ ಕಾರ್ಯಕ್ರಮದ ಪೂರ್ಣ ವಿಡಿಯೊವನ್ನು ಪ್ರಕಟಿಸಲಾಗಿದೆ. ವಿಡಿಯೊದಲ್ಲಿ 1 ಗಂಟೆ 52ನೇ ನಿಮಿಷದ ನಂತರ ರಾಹುಲ್‌ ಅವರ ಈ ಮಾತು ಆರಂಭವಾಗುತ್ತದೆ. ಆದರೆ ಈ ವಿಡಿಯೊವನ್ನು ಕತ್ತರಿಸಿ, ಮೊದಲ ವಾಕ್ಯವಿರುವ ವಿಡಿಯೊವನ್ನಷ್ಟೇ ಹಂಚಿಕೊಳ್ಳಲಾಗಿದೆ’.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಉಲುಬೆ ಮರದ ಚಿತ್ರವನ್ನು ಬಿಳಿಗಿರಿ ರಂಗನ ಬೆಟ್ಟದಲ್ಲಿ ತುಳಸಿ ಮರ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights