ಫ್ಯಾಕ್ಟ್‌ಚೆಕ್ : ‘ಬ್ರಾಹ್ಮಣ’ ವ್ಯಕ್ತಿಯನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದಕ್ಕೆ ಮುಸ್ಲಿಮರು ಪ್ರತಿಭಟನೆ ಮಾಡಿದ್ದು ನಿಜವೇ?

ಶ್ರೀರಾಮ್ ವೆಂಕಟರಾಮನ್ ಅವರನ್ನು ಆಲಪ್ಪುಳದ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿರುವುದನ್ನು ವಿರೋಧಿಸಿ ಕೇರಳ ಮುಸ್ಲಿಂ ಜಮಾತ್ ಮತ್ತು ಇತರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿವೆ ಎಂದು The Analyzer  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಕೇರಳದಂತಹ (ದೇವರ ನಾಡು) ರಾಜ್ಯದಲ್ಲಿಯೂ ಅಧಿಕಾರಿಯ ಧರ್ಮ ಮತ್ತು ಜಾತಿಯನ್ನು ಪರಿಗಣಿಸಿ ಪ್ರತಿಭಟನೆಗಳು ನಡೆಯುತ್ತವೆ ಎಂದರೆ ಅದೊಂದು ಗಂಭೀರ ವಿಚಾರವೇ ಹೌದು. ಅದರಲ್ಲೂ ಸರ್ಕಾರ ನೇಮಿಸಿದ ಒಬ್ಬ IAS ಅಧಿಕಾರಿಯ ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆದಿರಲು ಬೇರೆ ಏನು ಕಾರಣ ಇರಬಹುದು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ :

ಕೇರಳ ಸರ್ಕಾರವು ಆಲಪ್ಪುಳದ ಜಿಲ್ಲಾಧಿಕಾರಿಯನ್ನಾಗಿ ಶ್ರೀರಾಮ್ ವೆಂಕಟರಾಮನ್ ಅವರನ್ನು ನೇಮಿಸಿತ್ತು. ಅವರು ಹಿಂದೂ ಧರ್ಮದ ಬ್ರಾಹ್ಮಣ ಜಾತಿಯವರಾದ್ದರಿಂದ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆಯೇ ಎಂದು ಪರಿಶೀಲಿಸಿದಾಗ ವಾಸ್ತವಾಂಶ ಬೇರೆಯದೇ ಇದೆ. 2019ರಲ್ಲಿ  ಶ್ರೀರಾಮ್ ವೆಂಕಟರಾಮನ್ ಅವರು ಪಾನಮತ್ತರಾಗಿ ವಾಹನ ಚಲಾಯಿಸಿ ಪತ್ರಕರ್ತ ಬಶೀರ್ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಯಾಗಿದ್ದರು.

ಶ್ರೀರಾಮ್ ವೆಂಕಟರಾಮನ್ ಅವರ ಕಾರು ಕೆ.ಎಂ. ಬಶೀರ್ ಬೈಕ್‌ಗೆ ಗುದ್ದಿದ್ದ ಸ್ಥಳ
ಶ್ರೀರಾಮ್ ವೆಂಕಟರಾಮನ್ ಅವರ ಕಾರು ಕೆ.ಎಂ. ಬಶೀರ್ ಬೈಕ್‌ಗೆ ಗುದ್ದಿದ್ದ ಸ್ಥಳ

ವರದಿಯ ಪ್ರಕಾರ, 3 ಮಾರ್ಚ್ 2019 ರಂದು, ಶ್ರೀರಾಮ್ ಅವರು ಕೌಡಿಯಾರ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಪಾನಮತ್ತರಾಗಿ ಕಾರು ಚಲಾಯಿಸಿದ ಪರಿಣಾಮ ತಿರುವನಂತಪುರದ ಮ್ಯೂಸಿಯಂ ಜಂಕ್ಷನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ವರದಿಗಾರ ಬಷೀರ್ ಅವರು ಮೃತಪಟ್ಟಿದ್ದರು. ಈ ಅಪಘಾತದ ಕುರಿತ ತನಿಖೆಯಲ್ಲಿ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅನಂತರ ರಾಜ್ಯ ಸರಕಾರ ಶ್ರೀರಾಮ್ ಅವರನ್ನು ಅಮಾನತಿನಲ್ಲಿ ಇರಿಸಿತ್ತು.

ಪತ್ರಕರ್ತ K.M. Basheer
ಪತ್ರಕರ್ತ K.M. Basheer

ಸೋಮವಾರ ತಡರಾತ್ರಿ ಹೊರಡಿಸಿದ ಆದೇಶದಲ್ಲಿ, ಎಸ್‌ಸಿ ಅಭಿವೃದ್ಧಿ ಇಲಾಖೆ ನಿರ್ದೇಶಕ ವಿಆರ್ ಕೆ ತೇಜ ಮೈಲವರಪು ಅವರನ್ನು ಹೊಸ ಆಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 2019 ರಲ್ಲಿ ತಿರುವನಂತಪುರಂನಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಪತ್ರಕರ್ತ ಕೆ ಎಂ ಬಶೀರ್ ಸಾವಿಗೆ ಕಾರಣವಾದ  ಶ್ರೀರಾಮ್ ಪ್ರಮುಖ ಆರೋಪಿಯಾಗಿದ್ದಾರೆ. ಅವರನ್ನು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಿಸಿದ ಸರ್ಕಾರದ ನಿರ್ಧಾರವು ವ್ಯಾಪಕ ಟೀಕೆಗೆ ಗುರಿಯಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್   ವರದಿ ಮಾಡಿದೆ.

Sriram Venkitaraman with his dog Ray
ಶ್ರೀರಾಮ್ ವೆಂಕಟರಾಮನ್ ಅವರ ನಾಯಿ ರೇ ಜೊತೆ

ವಿರೋಧ ಪಕ್ಷಗಳು, ಪತ್ರಕರ್ತರ ಸಂಘಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ಕಾರದ ಕ್ರಮದ ವಿರುದ್ಧ ಬೀದಿಗಿಳಿದಿದ್ದರು. ಎಲ್‌ಡಿಎಫ್‌ನಲ್ಲಿಯೂ ಸಹ ಭಿನ್ನಾಭಿಪ್ರಾಯದ ಧ್ವನಿಗಳು ಕೇಳಿಬಂದ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಶ್ರೀರಾಮ್ ಅವರನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ ಹೇಳುವುದಾರೆ. 2019ರಲ್ಲಿ ಶ್ರೀರಾಮ್ ವೆಂಕಟರಾಮನ್ ಅವರು ಕಾರು ಚಲಾಯಿಸುವ ವೇಳೆ ಅಪಘಾತವಾಗಿ ಪತ್ರಕರ್ತ ಕೆ.ಎಂ ಬಷೀರ್ ಅವರ ಸಾವಿಗೆ ಕಾರಣರಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಆಲಪ್ಪುಳದ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ ಸರ್ಕಾರದ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು, ಶ್ರೀರಾಮ್ ವೆಂಕಟರಾಮನ್ ಅವರು “ಹಿಂದೂ ಬ್ರಾಹ್ಮಣ” ಎನ್ನುವ ಕಾರಣಕ್ಕೆ ಮುಸ್ಲಿಮರು ಪ್ರತಿಭಟನೆ ನಡೆಸಿದೆ ಎಂದು ಸುಳ್ಳು ಪೋಸ್ಟ್‌ಅನ್ನು ಮಾಡುವ ಮೂಲಕ ಕೋಮು ವೈಷಮ್ಯದ  ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಅಧಿಕಾರಿಯೂ ಯಾವುದೇ ಜಾತಿ ಧರ್ಮದ ಹಿನ್ನಲೆಯನ್ನು ಹೊಂದಿದ್ದರು ಅದನ್ನು ಪರಿಗಣಿಸದೆ ಅವರ ಅಧಿಕಾರವನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವುದು ಸರ್ಕಾರದ ಜವಬ್ದಾರಿಯಾಗಿರುತ್ತದೆ. ಅದನ್ನು ಪ್ರಶ್ನಿಸುವ ಯಾವ ಅಧಿಕಾರವೂ ಜನರಿಗೆ ಇರುವುದಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್ : ಭಿಕ್ಷುಕರ ಬಗ್ಗೆ ಎಚ್ಚರಿಕೆ ಎನ್ನುವ ಪೊಲೀಸ್ ಪ್ರಕಟಣೆಯ ವಾಸ್ತವವೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights