ಲಾಕ್‌ಡೌನ್‌: ಸಾಲದ ಮೇಲಿನ ಬಡ್ಡಿ ನಿಷೇಧಕ್ಕೆ ಸರ್ಕಾರ ಒಪ್ಪಿಗೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಜಾರಿಗೆ ತರಲಾದ ಸಾಲ ಮರುಪಾವತಿ ರಿಯಾಯ್ತಿ ಸಂದರ್ಭದಲ್ಲಿ ಚಕ್ರಬಡ್ಡಿ ಹಾಕದಿರಲು ಕೇಂದ್ರ ಸರಕಾರ ಕೊನೆಗೂ ನಿರ್ಧರಿಸಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟು ಕೇಂದ್ರ ಸರಕಾರದ ಕಿವಿ ಹಿಂಡಿ ದೀಪಾವಳಿ ವೇಳೆಗೆ ಈ ಬಗ್ಗೆ ನಿರ್ಧಾರಕ್ಕೆ ಬರುವಂತೆ ಸಲಹೆ ನೀಡಿತ್ತು. ಈ ಸಲಹೆಗೆ ತಲೆಬಾಗಿ ಸರಕಾರವು ಚಕ್ರಬಡ್ಡಿ ಹಾಕದಿರುವುದಾಗಿ ಘೋಷಿಸಿದೆ.

ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತಡರಾತ್ರಿ ಪ್ರಕಟಣೆ ಹೊರಡಿಸಿದ್ದು, ಇಎಂಐ ಪಾವತಿ ಗಡುವು ವಿಸ್ತರಣೆಯ ಸೌಲಭ್ಯವನ್ನು ಪಡೆದವರು ಮತ್ತು ಪಡೆಯದಿದ್ದವರಿಗೂ ಈ ಮನ್ನಾ ಅನ್ವಯಸಲಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟಿನ ಒತ್ತಾಸೆ ಮತ್ತು ಒಂದರ್ಥದಲ್ಲಿ ಒತ್ತಾಯಪೂರ್ವಕ ಸಲಹೆ ಮೇರೆಗೆ ಘೋಷಿಸಲಾಗಿರುವ ಈ ವಿನಾಯ್ತಿಯಿಂದ ಕೇಂದ್ರಕ್ಕೆ 6,500 ಕೋಟಿ ರೂ.ಗಳಷ್ಟು ಹೆಚ್ಚಿನ ಆರ್ಥಿಕ ಹೊರೆ ಬೀಳುವ ನಿರೀಕ್ಷೆ ಇದೆ.

ರಾಷ್ಟ್ರೀಕೃತ ಬ್ಯಾಂಕ್‍ಗಳು, ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ವಸತಿ, ಗೃಹ, ವಾಹನ, ಶಿಕ್ಷಣ, ಕೈಗಾರಿಕೆ(ಎಂಎಸ್‍ಎಂಇ) , ದುಬಾರಿ ಗೃಹಬಳಕೆ ವಸ್ತುಗಳ ಖರೀದಿ, ಕ್ರೆಡಿಟ್ ಕಾರ್ಡ್‍ಗಳ ಬಾಕಿ ಮೇಲೆ ಇದು ಅನ್ವಯವಾಗಲಿದೆ.2 ಕೋಟಿ ರೂ.ವರೆಗಿನ ಸಾಲ ಪಡೆದ ಎಲ್ಲರಿಗೂ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಕೇಂದ್ರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಸಾಲದ ಮೇಲಿನ ಬಡ್ಡಿ ನಿಷೇಧ: ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights