ಸಾಹುಕಾರ್ ಸುದ್ದಿಗೋಷ್ಠಿ : ನಕಲಿ ಸಿಡಿಗಾಗಿ ನೂರಾರು ಕೋಟಿ ಖರ್ಚು..!

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಹುಕಾರ್ ಸಿಡಿ ನಕಲಿಯಾಗಿದೆ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರಾಕಿದ ರಮೇಶ್ ಜಾರಕಿಹೊಳಿ, “ಸಿಡಿ %100 ನಕಲಿ ಎಂದಿದ್ದಾರೆ. 2020 ಫೆಬ್ರವರಿ 26ರಂದು ನಾನು ಸಚಿವನಾದೆ. ಆಗ ನಾನು 3 ತಿಂಗಳು ಈ ಇಲಾಖೆ ನಡೆಸುವುದಿಲ್ಲ ಎಂದು ಮಹಾನಾಯಕನೊಬ್ಬ ಸವಾಲು ಹಾಕಿದ್ದನು. ಸಂಜೆ 5-6 ಗಂಟೆಗೆ ಸಿಡಿ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ. ಅಂದರೆ ಸಿಡಿ ಬಿಡುಗಡೆ ವಿಚಾರ ರಮೇಶ್ ಜಾರಕಿಹೊಳಿಗೆ ಮೊದಲೇ ವಿಚಾರ ಗೊತ್ತಿತ್ತು.

“ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ. ಒರಾಯನ್ ಮಹಾಲ್ ಅಕ್ಕಪಕ್ಕ 5ನೇ ಮಹಡಿಯಲ್ಲಿ ಮತ್ತು ಯಶವಂತಪುರ 4-5ನೇ ಮಹಡಿಯಲ್ಲಿ ಈ ಎರಡು ಕಡೆ ಷಡ್ಯಂತ್ರ ಮಾಡಿದ್ದಾರೆ. ಬೇರೆ ಸೆಕ್ಸ್ ಹಗರಣಗಳಲ್ಲಿ 15-20 ಕೋಟಿ ಖರ್ಚು ಮಾಡಲಾಗಿದೆ. ಆದರೆ ನನ್ನ ಮುಗಿಸಲು ನನ್ನನ್ನು ಮುಗಿಸಲು ನೂರಾರು ಕೋಟಿ ಖರ್ಚು ಮಾಡಲಾಗಿದೆ ಎಂದು ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ರಮೆಶ್ ಭಾವುಕರಾಗಿದ್ದಾರೆ.

ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ. ನನಗೆ ರಾಜಕಾರಣದ ಮೇಲೆ ಆಸಕ್ತಿಲ್ಲ ಕುಟುಂಬದ ಗೌರವ ಮುಖ್ಯ. ನನ್ನ ಕುಟುಂಬವೇ ರಾಜಮನೆತನದ್ದು. ಅವರನ್ನು ಜೈಲಿನಲ್ಲಿ ಹಾಕುವವರೆಗೂ ಬಿಡುವುದಿಲ್ಲ. ನಾನು ಭಯಪಡುವುದಿಲ್ಲ ನಾನು ತಪ್ಪು ಮಾಡಿಲ್ಲ. ಆವತ್ತು ಸಿಡಿ ಬಿಡುಗಡೆ ವಿಚಾರ ತಿಳಿದಾಗಲೂ ನಾನು ಭಯಪಡೆದೆ ಮೈಸೂರಿನ ಚಾಮುಂಡಿ ದರ್ಶನ ಪಡೆದಿದ್ದೆ ಎಂದಿದ್ದಾರೆ.

ಸೆಕ್ಸ್ ಸಿಡಿಯಲ್ಲಿ 100% ಷಡ್ಯಂತ್ರ ಇದೆ. ಹುಡುಗಿಗೆ 5 ಕೋಟಿ ಕೊಡಲಾಗಿದೆ. ವಿದೇಶದಲ್ಲಿ 2 ಪ್ಲ್ಯಾಟ್ ಕೊಡಿಸಿರುವ ಬಗ್ಗೆ ಮಾಹಿತಿ ಇದೆ. ಎರಡು ಮನೆ ಕೊಟ್ಟಿದ್ದಾರೆ. ದೂರು ನೀಡುವುದಕ್ಕೆ ಇದು ಹುಡುಗಾಟದ ವಿಚಾರವಲ್ಲ ಎಂದಿದ್ದಾರೆ. ಹುಡುಗಿ ಹಿಂದೆ 4 ಜನ ಇದ್ದಾರೆ. ಆ 4 ಜನರ ಹಿಂದೆ ಇಬ್ಬರು, ಇಬ್ಬರ ಹಿಂದೆ ಮೂವರ ಕೈವಾಡವಿದೆ ಎಂದು ಸುಳಿವು ಕೊಟ್ಟಿದ್ದಾರೆ. ಯುದ್ಧವನ್ನು ಅವರು ಆರಂಭಿಸಿದ್ದಾರೆ ಆದರೆ ಮುಗಿಸುವುದು ನಾವು ಎಂದು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights