ತರಗತಿಗೆ ಹಾಜರ್, ಆನ್‌ಲೈನ್‌ನಲ್ಲಿ ಲೆಕ್ಚರ್‌: ಶಿಕ್ಷಕರಿಗೆ ತಲೆನೋವಾದ ಸರ್ಕಾರದ ಆದೇಶ!

ಮುಂದಿನ ತಿಂಗಳ 17ರಿಂದ ಕಾಲೇಜುಗಳ ಮರು ಆರಂಭಕ್ಕೆ ಸರಕಾರ ಹೊರಡಿಸಿರುವ ಆದೇಶ ಮತ್ತು ಹಾಕಿರುವ ನಿಬಂಧನೆಗಳು ಶಿಕ್ಷಕರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ದೂಡಿದೆ.

ಕಾಲೇಜುಗಳಲ್ಲಿ ಹಾಜರಿ ಕಡ್ಡಾಯವಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಆರಂಭಿಸಿ ಎಂದು ಸರಕಾರ ಹೇಳಿದೆ. ಜೊತೆಗೆ ಹಾಜರಾಗದವರಿಗೆ ಆನ್‌ಲೈನ್ ಪಾಠ ಮುಂದುವರಿಸುಂತೆಯೂ ಸೂಚಿಸಿದೆ. ಇದು ಬೋಧಕರನ್ನು ತೀವ್ರ ಗೊಂಡಲಕ್ಕೆ ಈಡುಮಾಡಿದೆ. ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಲ್ಲದೇ ಆನ್‌ಲೈನಿನಲ್ಲಿ ಮತ್ತೆ ಪಾಠ ಮಾಡಬೇಕೆ ಎಂಬುದು ಅವರ ಜಿಜ್ಞಾಸೆ.

ತರಗತಿಗಳಲ್ಲಿ ತಾವು ಹೇಳಿಕೊಡುವ ಪಾಠವನ್ನು ಆನ್‌ಲೈನ್‌ ಮೂಲಕ ಬಿತ್ತರಿಸುವ ವ್ಯವಸ್ಥೆ ಆಗದಿದ್ದರೇ ತಮ್ಮ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬುದು ಅವರ ಆಂಬೋಣ.

ಇದೇ ರೀತಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ಬರದಿದ್ದರೇ ಅಥವಾ ಅಲ್ಪ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೂ ತರಗತಿ ಮಾಡಬೇಕಾದ ಅನಿವಾರ್‍ಯತೆ ಕಾಲೇಜುಗಳ ಮುಂದಿದೆ. ಇದು ಆಡಳಿತ ಮಂಡಳಿಗಳಿಗೆ ತಲೆನೋವಿನ ವಿಚಾರವಾಗಿದೆ.

ಇನ್ನು ವಿದ್ಯಾರ್ಥಿಗಳಲ್ಲಿ ಸಹ ಕೆಲವೊಂದು ಅನುಮಾನಗಳು ಮೂಡಿರುವ ಹಾಗಿದೆ. ತರಗತಿಯಲ್ಲಿ ಹೇಳಿಕೊಡುವ ಪಾಠಕ್ಕೂ ಆನ್‌ಲೈನ್‌ನಲ್ಲಿ ಹೇಳಿಕೊಡುವುದಕ್ಕೂ ವ್ಯತ್ಯಾಸ ಉಂಟಾದರೇ ಕಷ್ಟ ಎಂಬುದು ಅವರ ಅಳಲಾಗಿದೆ.

ನಾಲ್ಕು ಜನರನ್ನು ಸೇರಿಸಿಕೊಂಡು ಸಭೆ ಮಾಡಿ ಕಾಲೇಜು ಪುನಾರಂಭದ ಘೋಷಣೆ ಮಾಡುವ ಸರಕಾರ ಈ ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟತೆ ನೀಡದೇ ಇರುವುದು ಶಿಕ್ಷಣವನ್ನು ಅದು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.


ಇದನ್ನೂ ಓದಿ: ಡಿಜಿಟಲ್‌ ಇಂಡಿಯಾ: ಭಾರತದ್ದು ವಿಶ್ವದಲ್ಲಿಯೇ ಅತ್ಯಂತ ಕಳಪೆ ಇಂಟರ್‌ನೆಟ್‌ ಸ್ಪೀಡ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights