ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌: ರಿಲೇಯಲ್ಲಿ ಕಂಚು ಗೆದ್ದ ಭಾರತ ತಂಡ!

ನೈರೋಬಿಯಲ್ಲಿ ಬುಧವಾರ ನಡೆದ ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನ ಮಹಿಳಾ-ಪುರುಷ ಮಿಶ್ರ 4×400 ಮೀಟರ್ ರಿಲೇ ಆಟದಲ್ಲಿ ಭಾರತ ತಂಡವು ಕಂಚಿನ ಪದಕ ಗಳಿಸಿದೆ. ಈ ಮೂಲಕ ದೇಶದ ಇತಿಹಾಸದಲ್ಲಿ ಐದನೇ ಪದಕವನ್ನು ಗೆದ್ದುಕೊಂಡಿದೆ.

ಭಾರತ್ ಎಸ್, ಪ್ರಿಯಾ ಮೋಹನ್, ಸಮ್ಮಿ ಮತ್ತು ಕಪಿಲ್ ಅವರನ್ನೊಳಗೊಂಡ ಭಾರತ ತಂಡ ಫೈನಲ್ ನಲ್ಲಿ 3:20.60 ಸೆಕೆಂಡುಗಳಲ್ಲಿ ಆಟವನ್ನು ಮುಗಿಸಿದ್ದು ಮೂರನೇ ಸ್ಥಾನ ಗಳಿಸಿದೆ. ನೈಜೀರಿಯಾ ಮತ್ತು ಪೋಲೆಂಡ್ ಕ್ರಮವಾಗಿ 3:19.70 ಸೆ ಮತ್ತು 3:19.80 ಸೆಕೆಂಡುಗಳಲ್ಲಿ ಆಟ ಮುಗಿಸಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿವೆ.

ಬೆಳಿಗ್ಗೆ ನಡೆದ ಹೀಟ್ ರೇಸ್ ನಲ್ಲಿ 3: 23.36 ಸೆ.ಗಳ ದಾಖಲೆ ಸಮಯದೊಂದಿಗೆ ಎರಡನೇ ಅತ್ಯುತ್ತಮ ತಂಡವಾಗಿ ಫೈನಲ್ ಪ್ರವೇಶಿಸಿತ್ತು.

ಆದಾಗ್ಯೂ, ಹೀಟ್ ರೇಸ್‌ನಲ್ಲಿ ಓಡಿದ್ದ ಅಬ್ದುಲ್ ರಜಾಕ್ ಅವರನ್ನು ಬದಲಿಸಿ ಫೈನಲ್‌ನಲ್ಲಿ ಭರತ್ ಎಸ್ ರನ್ನು ಓಡಿಸಲಾಯಿತು.

https://twitter.com/DDNewslive/status/1428162445185490945?s=20

ಪ್ರಿಯಾ ಮತ್ತು ಸಮ್ಮಿಗೆ, ಮಿಶ್ರ 4x400m ರಿಲೇ ಫೈನಲ್ ದಿನದ ಮೂರನೇ ರೇಸ್ ಆಗಿತ್ತು. ಏಕೆಂದರೆ ಇಬ್ಬರೂ ವೈಯಕ್ತಿಕ 400 ಮೀ ಹೀಟ್‌ ರೇಸ್‌ಗಳಲ್ಲಿ ಭಾಗವಹಿಸಿದ್ದರು.

“ನಾವು ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಂದ ಸ್ಫೂರ್ತಿ ಪಡೆದಿದ್ದೇವೆ. ಇಲ್ಲಿ ನಮ್ಮ ಗೆಲುವು ಅನೇಕ ಭಾರತೀಯರಿಗೆ ಅಥ್ಲೆಟಿಕ್ಸ್ ಆಯ್ಕೆ ಮಾಡಿಕೊಳ್ಳಲು ಸ್ಫೂರ್ತಿ ನೀಡುತ್ತದೆ” ಎಂದು ಅಂತಿಮ ಸ್ಪರ್ಧೆಯ ನಂತರ ಪ್ರಿಯಾ ಮೋಹನ್ ಹೇಳಿದರು.

https://twitter.com/diveshbhal/status/1428245375048044551?s=20

“ಇದು ನನಗೆ ಮತ್ತು ನನ್ನ ತಂಡದ ಸಹ ಆಟಗಾರರಿಗೆ ಒಂದು ಅದ್ಭುತ ಕ್ಷಣವಾಗಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ನಮ್ಮ ಕನಸಾಗಿದೆ. ವಿಶ್ವ ಅಥ್ಲೆಟಿಕ್ಸ್ ಮತ್ತು ನಮ್ಮ ಆತಿಥೇಯ ಕೀನ್ಯಾಗೆ ಧನ್ಯವಾದ ಸಲ್ಲಿಸಲು ನಾವು ಬಯಸುತ್ತೇವೆ” ಎಂದು ಭರತ್ ಹೇಳಿದರು.

ಇದಕ್ಕೂ ಮೊದಲು, ವಿಶ್ವ U-20 ಕೂಟದಲ್ಲಿ ಭಾರತವು ಸೀಮಾ ಆಂಟಿಲ್ (ಡಿಸ್ಕಸ್ ಥ್ರೋನಲ್ಲಿ ಕಂಚು, 2002), ನವಜೀತ್ ಕೌರ್ ಧಿಲ್ಲೋನ್ (ಡಿಸ್ಕಸ್ ಥ್ರೋನಲ್ಲಿ ಕಂಚು, 2014), ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ (ಜಾವೆಲಿನ್ ಥ್ರೋನಲ್ಲಿ ಚಿನ್ನ, 2016) ಮತ್ತು ಹಿಮಾ ದಾಸ್ (400m ಓಟದಲ್ಲಿ ಚಿನ್ನ, 2018 ರಲ್ಲಿ) ಗೆದ್ದಿದ್ದರು .

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾಗೆ ಒಂದು ಕೋಟಿ ಬಹುಮಾನ; ಡಿಎಸ್‌ಪಿ ಹುದ್ದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.