ದೇಶದಲ್ಲಿ ಮಿತಿಮೀರಿದ ಕೊರೊನಾ : ಒಂದೇ ದಿನ ಸುಮಾರು 3 ಲಕ್ಷ ಕೇಸ್!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೈ ಮೀರಿ ಹೋಗುತ್ತಿದ್ದು ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಸುಮಾರು 3 ಲಕ್ಷ ಕೇಸ್ ದಾಖಲಾಗಿದ್ದು 2,023 ಜನ ಸಾವನ್ನಪ್ಪಿದ್ದಾರೆ.

ಹೌದು.. ಕೊರೊನಾ ಸೋಂಕು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,95,041 ಜನರಿಗೆ ತಗುಲಿದ್ದು, 2,023 ಜನರನ್ನು ಕೊಂದಿದೆ.

ಕೋವಿಡ್ -19 ಸೋಂಕಿನಿಂದಾಗಿ ಭಾರತ ಬುಧವಾರ ಸುಮಾರು ಮೂರು ಲಕ್ಷ ಏಕದಿನ ಪ್ರಕರಣಗಳು ಮತ್ತು 2,000 ಕ್ಕೂ ಹೆಚ್ಚು ಸಾವುನೋವುಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ, ಭಾರತವು 2.95 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ಕಂಡಿದ್ದು, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.56 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚು ಕೋವಿಡ್ -19 ಸೋಂಕು ತಗುಲಿದ 10 ರಾಜ್ಯಗಳನ್ನು ನೋಡುವುದಾದರೆ, ಮಹಾರಾಷ್ಟ್ರ (62,097 ಪ್ರಕರಣಗಳು), ಉತ್ತರ ಪ್ರದೇಶ (29,574 ಪ್ರಕರಣಗಳು), ದೆಹಲಿ (28,395 ಪ್ರಕರಣಗಳು), ಕರ್ನಾಟಕ (21,794 ಪ್ರಕರಣಗಳು), ಕೇರಳ (19,577) ಪ್ರಕರಣಗಳು), ಛತ್ತೀಸ್‌ಗಢ (15,625 ಪ್ರಕರಣಗಳು), ಮಧ್ಯಪ್ರದೇಶ (12,727 ಪ್ರಕರಣಗಳು), ಗುಜರಾತ್ (12,206 ಪ್ರಕರಣಗಳು), ರಾಜಸ್ಥಾನ (12,201 ಪ್ರಕರಣಗಳು) ಮತ್ತು ತಮಿಳುನಾಡು (10,986 ಪ್ರಕರಣಗಳು) ದಾಖಲಾಗಿವೆ.

ಆದರೆ ದೇಶ ಎರಡನೇ ಕೋವಿಡ್ ಅಲೆಗೆ ತುತ್ತಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಲ್ಲಿ ಲಾಕ್‌ಡೌನ್ ಕೊನೆಯ ಉಪಾಯವಾಗಿ ಮಾತ್ರ ಬಳಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪ್ರಕರಣಗಳು ಹಾಗೂ ಸಾವು ನೋವುಗಳ ಮುಂದಿನ ದಿನಗಳಲ್ಲಿ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights