FACT CHECK | ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಉಚಿತ ಸ್ಕೂಟಿ ನೀಡಲಿದೆಯೇ ಕೇಂದ್ರ ಸರ್ಕಾರ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿಗಳನ್ನು ನೀಡುತ್ತಿದೆ ಎಂದು ಹೇಳುವ ಹಲವಾರು ಪೋಸ್ಟ್‌ಗಳು, ಪೇಪರ್ ಕ್ಲಿಪ್ಪಿಂಗ್‌ಗಳು ಮತ್ತು ಲಿಂಕ್‌ಗಳು ಕಳೆದ ಕೆಲವು ದಿನಗಳಿಂದ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

सोशल मीडिया पर एक लेख पर फर्जी शब्द की मुहर जिसमें दावा किया जा रहा है कि सरकार ‘प्रधानमंत्री फ्री स्कूटी योजना’ के तहत छात्राओं को कॉलेज जाने के लिए मुफ्त स्कूटी दे रही है

ಕೆಲವು ಮಾಧ್ಯಮ ಸಂಸ್ಥೆಗಳು ʼಪ್ರಧಾನ ಮಂತ್ರಿ ಉಚಿತ ಸ್ಕೂಟಿʼಯಡಿ ಕಾಲೇಜಿಗೆ ಹೋಗಲು ಕೇಂದ್ರ ಸರ್ಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿಗಳನ್ನು ನೀಡುತ್ತಿದೆ  ಎಂಬ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಕೇಂದ್ರ ಸರ್ಕಾರ ನಿಜವಾಗಿಯೂ ಸ್ಕೂಟಿ ನೀಡುವ ಘೋಷಣೆ ಮಾಡಿದೆಯೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

‘ಪ್ರಧಾನ ಮಂತ್ರಿ ಉಚಿತ ಸ್ಕೂಟಿ ಯೋಜನೆ’ಯಡಿಯಲ್ಲಿ ಕಾಲೇಜಿಗೆ ಹೋಗಲು ಸರ್ಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿಗಳನ್ನು ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸಿದಾಗ,  ಪಿಐಬಿ (PIB Fact Check) ಈ ಕುರಿತು ಸ್ಟೋರಿ ಪ್ರಕಟಿಸಿರುವುದು ಲಭ್ಯವಾಗಿದೆ.

ಪಿಐಬಿ ತನ್ನ ಫ್ಯಾಕ್ಟ್ ಚೆಕ್‌ನಲ್ಲಿ ಈ ಸುದ್ದಿ ನಕಲಿ ಎಂದು ಹೇಳಿದೆ. ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ, ಈ ಪೋಸ್ಟ್ ನಕಲಿ ಸುದ್ದಿ ಮತ್ತು ಆಧಾರರಹಿತವಾಗಿದೆ. ಭಾರತ ಸರ್ಕಾರ ಇಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪಿಐಬಿ ತನ್ನ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ʼನೀವು ಕೂಡ ‘ಪ್ರಧಾನ ಮಂತ್ರಿ ಉಚಿತ ಸ್ಕೂಟಿ ಯೋಜನೆ’ಗೆ ಬಲಿಯಾಗಿದ್ದೀರಾ?ʼ ಎಂದು ಪ್ರಶ್ನಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ʼಇದು ಸಂಪೂರ್ಣ ಸುಳ್ಳು ಸುದ್ದಿ. ಇದನ್ನು ಯಾರೂ ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಕೇಂದ್ರ ಸರ್ಕಾರವು ಇಂತಹ ಯಾವುದೇ ‘ಉಚಿತ ಸ್ಕೂಟಿ ಯೋಜನೆ’ಯನ್ನ ಘೋಷಿಸಿಲ್ಲʼವೆಂದು ಪಿಐಬಿ ತನ್ನ ಫ್ಯಾಕ್ಟ್ ಚೆಕ್‌ನಲ್ಲಿ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜಾರ್ಖಂಡ್‌ನಲ್ಲಿ ಮುಸ್ಲಿಂ ಆಟೋ ಚಾಲಕರಿಂದ ಪೊಲೀಸರ ಮೇಲೆ ದಾಳಿ ಆಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights