ದೇಶಾದ್ಯಂತ BJP ಕಚೇರಿಗಳಿಗೆ ಘೆರಾವ್; ರೈಲು ಸಂಚಾರ ನಿರ್ಬಂಧಕ್ಕೆ ರೈತರ ನಿರ್ಧಾರ!

ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರ ಹೋರಾಟ 16ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸರ್ಕಾರ ತನ್ನ ಅಹಂಮ್ಮಿಕೆಯನ್ನು ಪ್ರದರ್ಶಿಸುತ್ತಿದ್ದು, ಹಿಂಪಡೆಯಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರ್ಕಾರ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸಲು ಹೋರಾನಿರತ ರೈತ ಮುಖಂಡರು ನಿರ್ಧರಿಸಿದ್ದಾರೆ.

ಈಗಾಗಲೇ ಡಿಸೆಂಬರ್ 12 ರಿಂದ ದೆಹಲಿ-ಆಗ್ರಾ ಮತ್ತು ದೆಹಲಿ-ಜೈಪುರ್ ಹೆದ್ದಾರಿಗಳನ್ನು ನಿರ್ಬಂಧಿಸುವುದಾಗಿ ತಿಳಿಸಿರುವ ರೈತರು, ರೈಲು ಮಾರ್ಗಗಳು ಮತ್ತು ರೈಲ್ವೇ ಹಳಿಗಳನ್ನೂ ಬಂದ್‌ ಮಾಡಲು ನಿರ್ಧಿಸಿದ್ದಾರೆ.

ಅಲ್ಲದೆ, ಸೋಮವಾರದಿಂದ ದೇಶಾದ್ಯಂತ ಬಿಜೆಪಿ ಕಚೇರಿಗಳ ಮುಂದೆ ಘೆರಾವ್ ಪ್ರತಿಭಟನೆ ನಡೆಸಲು ರೈತರು ಚಿಂತಿಸಿದ್ದಾರೆ.

Read Also: Boycott jio; ಅಂಬಾನಿ-ಅದಾನಿ ಕಂಪನಿಗಳ ಬಾಯ್ಕಾಟ್‌ಗೆ ರೈತರ ಕರೆ!

ಇಂದು ಪಂಜಾಬ್‌ನ ಅಮೃತಸರ ಜಿಲ್ಲೆಯಿಂದ ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಸುಮಾರು 700 ಟ್ರ್ಯಾಕ್ಟರ್‌ ಟ್ರಾಲಿಗಳು ಸಿಂಗು ಗಡಿಗೆ ಪ್ರತಿಭಟನಾ ಜಾಥಾ ಹೊರಟಿದ್ದು, ಹೋರಾಟಕ್ಕೆ ಅಗತ್ಯವಿರುವ ಆಹಾರ ಧಾನ್ಯ ಮತ್ತು ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇಂದು ರಾತ್ರಿಯ ವೇಳೆಗೆ ಅವರು ದೆಹಲಿ ಗಡಿ ತಲುಪಲಿದ್ದಾರೆ.

ಹೋರಾಟ ಮುಂದುರೆಯುತ್ತಿದ್ದು, ಪಂಜಾಬ್, ಹರಿಯಾಣ ಮಾತ್ರವಲ್ಲದೆ, ದೇಶಾದ್ಯಂತ ರೈಲ್ವೇ ಹಳಿಗಳನ್ನು ಬಂದ್‌ ಮಾಡಲು ಚಿಂತಿಸಲಾಗುತ್ತಿದೆ. ಸದ್ಯದಲ್ಲೇ ಈ ಪ್ರತಿಭಟನೆಗೆ ದಿನಾಂಕ ನಿಗದಿಯಾಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಸರ್ಕಾರ ಅಹಂಕಾರವನ್ನು ತೋರುತ್ತಿದೆ. ಅವರು ನಮ್ಮ ಹೋರಾಟವನ್ನು, ಶಕ್ತಿಯನ್ನು ಪರೀಕ್ಷಿಸುತ್ತಿದೆ. ನಮ್ಮನ್ನು ಮಣಿಸುತ್ತೇವೆ ಎಂದು ಸರ್ಕಾರ ಭಾವಿಸಿದೆ. ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯವಿದ್ದರೆ ನಮ್ಮ ಕುಟುಂಬಗಳ ಮಹಿಳೆಯರು ಮತ್ತು ಮಕ್ಕಳು ಕೂಡ ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಂಶರ್ ಸಿಂಗ್ ತಿಳಿಸಿದ್ದಾರೆ.


Read Also: ಭೂಸುಧಾರಣಾ ಮಸೂದೆಗೆ ಸಹಿ ಹಾಕಲ್ಲ; ರೈತರೊಂದಿಗೆ ಚರ್ಚಿಸಲು ಸರ್ಕಾರಕ್ಕೆ ಸೂಚಿಸುತ್ತೇನೆ: ರಾಜ್ಯಪಾಲರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights