ಟೋಕಿಯೋ ಒಲಿಂಪಿಕ್ಸ್‌: ಹಾಕಿ ಸೆಮಿಫೈನಲ್‌ನಲ್ಲಿ ಸೋಲುಂಡ ಭಾರತ; ಕಂಚು ಪಡೆಯುವ ನಿರೀಕ್ಷೆ!

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡ 5-2 ಅಂತರದಲ್ಲಿ ಬೆಲ್ಜಿಯಂ ಎದುರು ಸೋತಿದೆ.ಹೀಗಾಗಿ ಕಂಚಿನ ಪದಕಕ್ಕಾಗಿ ಭಾರತ ತಂಡ ಮತ್ತೊಂದು ಆಟ ಆಡಲಿದೆ.

ಆರಂಭಿಕ ಗೋಲನ್ನು ಬಿಟ್ಟುಕೊಟ್ಟ ನಂತರ ಭಾರತವು ಮೊದಲ ಮೂರು ಗೋಲ್‌ಗಳ ಅಂತ್ಯದಲ್ಲಿ 2-1 ಮುನ್ನಡೆ ಸಾಧಿಸಿತ್ತು. ಆದರೆ,  ಎರಡನೇ ಹಂತದಲ್ಲಿ ಬೆಲ್ಜಿಯಂ ಸರಿಸಮ ಪೈಪೋಟಿ ನೀಡಿತು. ಅಂತಿಮ ಹಂತದಲ್ಲಿ ಭಾರತ ಮೂರು ಗೋಲುಗಳನ್ನು ಬಿಟ್ಟುಕೊಟ್ಟು ಫೈನಲ್‌ಗೆ ಹೋಗುವ ಅವಕಾಶವನ್ನು ಕಳೆದುಕೊಂಡಿತು.

ಭಾರತ ತಂಡದ ಮನ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಿದರೆ, ಅಲೆಕ್ಸಾಂಡರ್ ಹೆಂಡ್ರಿಕ್ಕ್ಸ್ ಬೆಲ್ಜಿಯಂ ಪರವಾಗಿ ಗಮನಾರ್ಹವಾದ ಹ್ಯಾಟ್ರಿಕ್ ಸಾಧಿಸಿದರು.

ಇನ್ನೊಂದು ಸೆಮಿಫೈನಲ್ ಇಂದು ಆಸ್ಟ್ರೇಲಿಯಾ ಮತ್ತು ಜರ್ಮನಿ ನಡುವೆ ನಡೆಯಲಿದೆ. ಪಂದ್ಯದಲ್ಲಿ ಸೋಲುವ ತಂಡದ ವಿರುದ್ದ ಕಂಚಿಗಾಗಿ ಭಾರತ ತಂಡ ಸೆಣೆಸಾಡಲಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಓಟದಲ್ಲಿ ಮುಗ್ಗರಿಸಿದ ದ್ಯುತಿ ಚಾಂದ್‌; ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights