ಅಡ್ರೆಸ್ ಕೇಳೋ ನೆಪದಲ್ಲಿ ಹುಡ್ಗೀರನ್ನ ಚುಡಾಯಿಸ್ತೀರಾ? ಹುಷಾರಾಗಿರಿ…

ಅಡ್ರೆಸ್ ಕೇಳೋ ನೆಪದಲ್ಲಿ ಹುಡುಗಿಯನ್ನ ಚುಡಾಯಿಸಿದ ಹುಡುಗನೊಬ್ಬ ತಗಲಾಕಿಕೊಂಡ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಈ ಬಗ್ಗೆ ಸ್ವತ: ಹುಡುಗಿಯೇ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.

ಭಾವನಾ ಕಶ್ಯಪ್ ಎಂಬ ಮಹಿಳೆ ತನ್ನ ಫೇಸ್ಬುಕ್ ಪುಟದಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾಳೆ. ಹಗಲು ಹೊತ್ತು ಜನನಿಬಿಡ ಪ್ರದೇಶದಲ್ಲಿ ಹುಡುಗನೊಬ್ಬ ಅಡ್ರೆಸ್ ಕೇಳುವ ನೆಪದಲ್ಲಿ ಹಠಾತ್ ಭಾವನಾ ಮೈ ಮೇಲೆ ಕೈ ಹಾಕಿದ್ದಾನೆ. ತಕ್ಷಣಕ್ಕೆ ಗಾಬರಿಯಾದ ಭಾವನಾ ಆತ ವೇಗವಾಗಿ ಹೋಗಲು ಪ್ರಯತ್ನಿಸಿದರೂ ಆತನನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಬುದ್ಧಿವಂತಿಕೆಯಿಂದ ಪಕ್ಕದಲ್ಲಿದ್ದ ಚರಂಡಿಗೆ ಆತನ ಸ್ಕೂಟರ್ ಎಳೆದು ಹಾಕಿದ್ದಾಳೆ. ಚೇಡಿಸಿ ಎಸ್ಕೇಪ್ ಆಗಲು ಪ್ಲ್ಯಾನ್ ಮಾಡಿದ್ದ ಹುಡುಗ ಪರಾರಿಯಾಗದೇ ಸ್ಕೂಟರ್ ಇಲ್ಲದೇ ಸ್ಥಳದಲ್ಲೇ ನಿಂತು ಹುಡುಗಿಯ ನಿಂದನೆಗೆ ಒಳಗಾಗಿದ್ದಾನೆ.

ಅವಳು ಸ್ಕೂಟರ್ ಅನ್ನು ಚರಂಡಿಗೆ ಎಳೆದ ನಂತರ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ, ಆರೋಪಿ ತನ್ನ ಸ್ಕೂಟರ್ ತೆಗೆದುಕೊಳ್ಳಲು ಸಹಾಯಕ್ಕಾಗಿ ಜನರನ್ನು ಪರಿಪರಿಯಾಗಿ ಬೇಡಿಕೊಳ್ಳುವುದನ್ನ ನೋಡಬಹುದು. ಭಾವನಾ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಘಟನೆಯ ಬಗ್ಗೆ ಬರೆದಿದ್ದಾರೆ.

ಸ್ಥಳೀಯರು ಸುತ್ತಲೂ ಸೇರುತ್ತಿದ್ದಂತೆ ಹುಡುಗ ತನ್ನ ಹೆಸರು ಮಧುಶನ ರಾಜ್ ಕುಮಾರ್ ಎಂದು ಹೇಳಿಕೊಂಡಿದ್ದಾನೆ. ಕ್ಷಮೆ ಕೇಳಿದರೂ ಬಿಡದ ಭಾವನಾ ಹುಡುಗನ ತರಾಟೆ ತೆಗೆದುಕೊಂಡಿದ್ದಾಳೆ. ಘಟನೆಯಲ್ಲಿ ಹುಡುಗನ ಕೈಗೆ ಗಾಯಗಳು ಕೂಡ ಆಗಿವೆ. ಪುಂಡನಿಗೆ ಭಾವನಾ ತರಾಟೆ ತೆಗೆದುಕೊಮಡಿದ್ದಾಳೆ.

May be an image of 1 person, standing, outdoors and text that says "MONTE"

May be an image of body of water

ಕೂಡಲೇ ಅಸ್ಸಾಂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ದಿಸ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ರುಕ್ಮಿಣಿ ನಗರದಲ್ಲಿ ಎಫ್ಐಆರ್ ದಾಖಲಾಗಿದೆ.

https://www.facebook.com/bhavna.kashyap.750/posts/2081774441964701

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights