ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 101ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ) ವರದಿ ಬಿಡುಗಡೆಯಾಗಿದೆ. ವರದಿಯ ಪ್ರಕಾರ, ಭಾರತವು ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಕುಸಿತ ಕಂಡಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿದಿದೆ. 2020 ರಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಆದರೆ 2021 ರಲ್ಲಿ 101 ನೇ ಸ್ಥಾನಕ್ಕೆ ದೇಶವು ಇಳಿದಿದೆ.

ಚೀನಾ, ಬ್ರೆಜಿಲ್ ಮತ್ತು ಕುವೈಟ್ ಸೇರಿದಂತೆ ಹದಿನೆಂಟು ದೇಶಗಳ ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್‌‌ ಐದಕ್ಕಿಂತ ಕಡಿಮೆ ಇದ್ದು, ಅಗ್ರ ಶ್ರೇಣಿಯಲ್ಲಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಗುರುವಾರ ಹೇಳಿದೆ.

ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 94ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

ಐರಿಶ್ ನೆರವು ಸಂಸ್ಥೆಯಾದ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆಯಾದ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ತಯಾರಿಸಿದ ವರದಿಯು ಭಾರತದಲ್ಲಿ ಹಸಿವಿನ ಮಟ್ಟವನ್ನು “ಆತಂಕಕಾರಿ” ಎಂದು ಎಚ್ಚರಿಸಿದೆ. 2020 ರಲ್ಲಿ, 107 ದೇಶಗಳಲ್ಲಿ ಭಾರತವು 94 ನೇ ಸ್ಥಾನದಲ್ಲಿತ್ತು. ಈಗ 116 ದೇಶಗಳು ಪಟ್ಟಿಯಲ್ಲಿದ್ದು, ದೇಶವು 101 ನೇ ಸ್ಥಾನಕ್ಕೆ ಕುಸಿದಿದೆ.

ಭಾರತದಲ್ಲಿ ಕೊರೊನಾ ಮತ್ತು ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದ ಜನರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇಕಡಾ 17.3 ಇದ್ದು, 1998-2002ರ ನಡುವೆ ಈ ಪ್ರಮಾಣ ಶೇಕಡಾ 17.1 ಇತ್ತು ಎಂದು ಜಿಎಚ್‌ಐ ವರದಿ ಹೇಳಿದೆ.

ನೆರೆಯ ರಾಷ್ಟ್ರಗಳಾದ ನೇಪಾಳ (76), ಬಾಂಗ್ಲಾದೇಶ (76), ಮ್ಯಾನ್ಮಾರ್ (71) ಮತ್ತು ಪಾಕಿಸ್ತಾನ (92) ಕೂಡ ‘ಆತಂಕಕಾರಿ’ ಹಸಿವಿನ ಹಂತದಲ್ಲಿವೆ. ಆದರೆ ಈ ದೇಶಗಳು ತನ್ನ ನಾಗರಿಕರಿಗೆ ಆಹಾರ ನೀಡುವಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ.

ಇದನ್ನೂ ಓದಿ: ಭಾರತದಲ್ಲಿ ಹಸಿವಿನ ಪ್ರಮಾಣ ಗಂಭೀರ : ಜಾಗತಿಕ ಹಸಿವು ಸೂಚ್ಯಂಕ ವರದಿ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 101ನೇ ಸ್ಥಾನ; ಪಾಕಿಸ್ಥಾನ, ನೇಪಾಳಕ್ಕಿಂತ ಹಿಂದುಳಿದ ಭಾರತ

  • October 15, 2021 at 4:13 pm
    Permalink

    Worst prime minister of India this is Narendra Modi unfit for the prime minister

    Reply

Leave a Reply

Your email address will not be published.

Verified by MonsterInsights