ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ವಿತರಣೆ; ಪೋಲಿಸ್ ಇಲಾಖೆ ಮೌನ: ಎಸ್‌ಡಿಪಿಐ ಖಂಡನೆ

ಆಯುಧ ಪೂಜೆ ನೆಪ ಇಟ್ಟುಕೊಂಡು ಮಂಗಳೂರು, ಕಲ್ಲಡ್ಕ ಮತ್ತು ಇತರ ಪ್ರದೇಶಗಳಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿವೆ. ಈ ಬಗ್ಗೆ ಪೋಲಿಸ್ ಇಲಾಖೆ ಮೌನವಹಿಸಿದ್ದು, ಹಿಂಬದಿಯಿಂದ ಸಮ್ಮತಿ ನೀಡಿದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕಿಡಿಕಾರಿದ್ದಾರೆ.

ಸಭೆಯ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಅವರನ್ನು ಬಂಧಿಸಬೇಕೆಂದು ಅಥಾವುಲ್ಲಾ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿನಿಂದ ಹಲವಾರು ನೈತಿಕ ಪೋಲಿಸ್ ಗಿರಿ ನಡೆದ ಸಂದರ್ಭದಲ್ಲಿ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಸಣ್ಣಪುಟ್ಟ ಸೆಕ್ಷನ್ ಹಾಕಿ ಶೀಘ್ರ ಜಾಮೀನು ದೊರಕಲು ಅನುಕೂಲ ಮಾಡಿಕೊಟ್ಟದ್ದು,ನಂತರ ಮುಖ್ಯ ಮಂತ್ರಿ ಬೊಮ್ಮಾಯಿ ಜಿಲ್ಲೆಯ ಬೇಟಿ ಸಂದರ್ಭದಲ್ಲಿ ಅನೈತಿಕ ಪೋಲಿಸ್ ಗಿರಿಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟು ಸಂಘದ ಕಿರಾತಕರಿಗೆ ಅರಾಜಕತೆ ಸೃಷ್ಟಿಸಲು ಅವಕಾಶ ಮಾಡಿಕೊಟ್ಟದರ ಪರಿಣಾಮ ಇದೀಗ ತಮ್ಮ ಗೂಂಡಾಗಳಿಗೆ ಧಾರ್ಮಿಕ ಕಾರ್ಯಕ್ರಮ ವಾದ ಆಯುಧ ಪೂಜೆಯ ನೆಪದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಭಜರಂಗದಳದ ಗೂಂಡಾಗಳಿಗೆ ಬಹಿರಂಗವಾಗಿ ತ್ರಿಶೂಲ ವಿತರಿಸಿ ರಾಷ್ಟ್ರ ದ್ರೋಹದ ಕೃತ್ಯವನ್ನು ಸಂಘಪರಿವಾರ ಪುನಃ ಪುನರಾವರ್ತನೆ ಮಾಡಿದೆ.

ಆದರೆ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಬೇಕಾದ ಪೋಲಿಸರು ಇಂತಹ ಬಹಿರಂಗ ಕಾರ್ಯಕ್ರಮ ನಡೆದಾಗ ಸುಮಟೋ ಪ್ರಕರಣ ದಾಖಲಿಸುವುದನ್ನು ಬಿಟ್ಟು ಕಣ್ಣು ಮುಚ್ಚಿಕೊಂಡು ಕಾರ್ಯಕ್ರಮಕ್ಕೆ ಮೌನ ಸಮ್ಮತಿ ನೀಡಿರುವುದು ವಿಪರ್ಯಾಸವಾಗಿದೆ, ಕೂಡಲೇ ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಅದೇ ರೀತಿ ಆಯುಧ ವಿತರಣೆ ಮಾಡುವುದರ ಮೂಲಕ ಜಿಲ್ಲೆಯ ಜನತೆಯನ್ನು ಭಯಪಡಿಸಬಹುದು ಎಂಬ ಭ್ರಮೆ ಸಂಘಪರಿವಾರಕ್ಕೆ ಇದ್ದರೆ ಜನತೆಯ ಆ ಭಯವನ್ನು ಎಲ್ಲಾ ರೀತಿಯಿಂದಲೂ ಇಲ್ಲವಾಗಿಸಲು SDPI ಸನ್ನದ್ದವಾಗಿದೆ ಮಾತ್ರವಲ್ಲದೆ ಜಿಲ್ಲೆಯ ಶಾಂತಿ, ಸೌಹಾರ್ದತೆ,ಭಾವೈಕ್ಯತೆಯನ್ನು ಉಳಿಸಲು ಎಸ್ ಡಿಪಿಐ ನಿರಂತರವಾಗಿ ಪ್ರಯತ್ನಪಟ್ಟು ಸಂಘಪರಿವಾರದ ಷಡ್ಯಂತ್ರವನ್ನು ವಿಫಲಗೊಳಿಸಲಿದೆ ಎಂದು ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಆರೋಪಿಗಳ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights