ಮಹಾರಾಷ್ಟ್ರ: BJP ಸದಸ್ಯರ ಅಡ್ಡ ಮತದಾನ; NCP ಪಾಲಿಗೆ ಮೇಯರ್ ಹುದ್ದೆ!
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ನಡೆದಿದ್ದು, ಇಂದು ವಿವಿಧ ಪುರಸಭೆ, ಪಾಲಿಕೆಗಳ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆದಿದೆ. ಸಂಗ್ಲಿ ಮಿರಾಜ್ ಕುಪ್ವಾಡ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಕಾರ್ಪೋರೇಟ್‌ಗಳ ಅಡ್ಡ ಮತದಾನದ ಪರಿಣಾಮ ಮೇಯರ್ ಹುದ್ದೆ ಎನ್‌ಸಿಪಿ ಪಾಲಾಗಿದೆ.
78 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಸಂಗ್ಲಿ ಪಾಲಿಕೆಯಲ್ಲಿ ಬಿಜೆಪಿ 43 ಸ್ಥಾನಗಳನ್ನು ಹಾಗೂ ಎನ್‌ಸಿಪಿ 34 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ 01 ಸ್ಥಾನವನ್ನು ಚುನಾವಣೆಯಲ್ಲಿ ಗೆದ್ದಿದ್ದವು. ಈ ಸಂಖ್ಯೆ ಆಧಾರದಲ್ಲಿ ಬಿಜೆಪಿಗೆ ಮೇಯರ್ ಹುದ್ದೆ ಲಭಿಸಲಿದೆ ಎನ್ನಲಾಗಿತ್ತು.
ಆದರೆ, 05 ಬಿಜೆಪಿ ಕಾರ್ಪೋರೇಟ್‌ಗಳು ಅಡ್ಡಮತದಾನ ಮಾಡಿ ಎನ್‌ಸಿಪಿಗೆ ಬೆಂಬಲ ನೀಡಿದ್ದು, ಎನ್‌ಸಿಪಿಯ ಅಭ್ಯರ್ಥಿ ಸಂಜಯ್ ಬಜಾಜ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕಾಗಿ ಬಿಜೆಪಿಯಿಂದ ಧೀರಜ್ ಸೂರ್ಯವಂಶಿ ಮತ್ತು ಎನ್‌ಸಿಪಿಯಿಂದ ಸಂಜಯ್ ಬಜಾಜ್ ನಾಮಪತ್ರ ಸಲ್ಲಿಸಿದ್ದರು. ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿ 39 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 36 ಮತಗಳನ್ನು ಪಡೆದಿದ್ದಾರೆ.
ಐವರು ಬಿಜೆಪಿ ಕಾರ್ಪೊರೇಟರ್ ಗಳು ಎನ್ ಸಿಪಿ ಪರವಾಗಿ ಮತ ಚಲಾಯಿಸಿದ್ದಾರೆ ಮತ್ತು ಇಬ್ಬರು ಬಿಜೆಪಿಗರು ಮತದಾನದಿಂದ ಹಿಂದೆಸರಿದಿದ್ದಾರೆ. ಇದರಿಂದಾಗಿ ಎನ್‌ಸಿಪಿ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ನ ಉಮೇಶ್ ಪಾಟೀಲ್ ಉಪಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.
ಈ ಹಿಂದೆ ಈ ಪಾಲಿಕೆಯ ಮೇಯರ್ ಹುದ್ದೆ ಬಿಜೆಪಿ ತೆಕ್ಕೆಯಲ್ಲಿತ್ತು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ 7 ಕಾರ್ಪೊರೇಟರ್ ಮತಗಳನ್ನು ನಿಯಂತ್ರಿಸುವ ಮೂಲಕ ಪಾಲಿಕೆ ಆಡಳಿತವನ್ನು ಎನ್‌ಸಿಪಿ ಗೆದ್ದುಕೊಂಡಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ಹೆಚ್ಚು ಸ್ಥಾನಗಳಲ್ಲಿ BJP ಮುನ್ನಡೆ; ಕಾಂಗ್ರೆಸ್‌ಗೆ ಆರಂಭಿಕ ಹಿನ್ನಡೆ!

