ಗುಜರಾತ್‌ ಚುನಾವಣೆ: ಹೆಚ್ಚು ಸ್ಥಾನಗಳಲ್ಲಿ BJP ಮುನ್ನಡೆ; ಕಾಂಗ್ರೆಸ್‌ಗೆ ಆರಂಭಿಕ ಹಿನ್ನಡೆ!

ಗುಜರಾತ್‌ನ ಆರು ಮಹಾನಗರ ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಒಟ್ಟು 575 ಸ್ಥಾನಳಿಗೆ ನಡೆದಿರುವ ಚುನಾವಣೆಯಲ್ಲಿ ಈಗಾಗಲೇ 92 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.

ಆದರೆ, ಚುನಾವಣಾ ಆಯೋಗದ ಇತ್ತೀಚೆಗಿನ ಮಾಹಿತಿಯ ಪ್ರಕಾರ, ಬಿಜೆಪಿ 58 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಆರಂಭಿಕ ಹಿನ್ನೆಡೆ ಅನುಭವಿಸಿರುವ ಕಾಂಗ್ರೆಸ್‌ ಎಂಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೆ, ಆಮ್‌ ಆದ್ಮಿ ಪಕ್ಷವು 04 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಮ್ಜೋಧ್‌ಪುರ, ತಲ್ತೇಜ್, ವಾಸ್ಟ್ರಪುರ್, ಅಸರ್ವಾ, ಸೈಜ್‌ಪುರ, ನವ ವಡಾಜ್ ಮತ್ತು ನವರಂಗ್‌ಪುರ ವಾರ್ಡ್‌ಗಳನ್ನು ಮುನ್ನಡೆಸುತ್ತಿದೆ.

ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights