Fact Check: ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಯೋಗಿ ನೆರವು; ಧನ್ಯವಾದ ಹೇಳಿ ಪತ್ರ ಬರೆದ ಮೋದಿ?

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ, ರಾಮಮಂದಿರ ನಿರ್ಮಾಣಕ್ಕೆ ನೆರವಾಗುವ ಮೂಲಕ ಹಿಂದೂ ರಾಷ್ಟ್ರಕ್ಕಾಗಿ ಗಣನೀಯ ಕೊಡುಗೆ ನೀಡಿದ ಯೋಗಿ ಆದಿತ್ಯನಾಥ್‌ ಮತ್ತು ಅವರ ತಂಡದವರಿಗೆ ಅಭಿನಂದನೆ ಹೇಳಿದ್ದರು ಎಂಬ ಪತ್ರದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಆತ್ಮೀಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರೇ.. ಹಿಂದೂ ರಾಷ್ಟ್ರಕ್ಕಾಗಿ ನೀಡಿರುವ ಅಮೋಘ ಕೊಡುಗೆಗಾಗಿ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು. ನಿಮ್ಮ ಹಾಗೂ ನಿಮ್ಮ ತಂಡದ ನಿಸ್ವಾರ್ಥ ಹಾಗೂ ಕಠಿಣ ಪರಿಶ್ರಮಕ್ಕೆ ಹಿಂದೂಗಳು ಯಾವಾಗಲೂ ಚಿರಋಣಿಗಳು. ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದು ಮೈಲುಗಲ್ಲು ಸೃಷ್ಟಿಸಲು ನೀವು ನೆರವಾಗಿದ್ದೀರಿ. ಹಿಂದೂ ರಾಷ್ಟ್ರದಲ್ಲಿ ಇದು ಹೊಸ ಇತಿಹಾಸ ಬರೆದಿದೆ. 2022ರ ಚುನಾವಣೆಯಲ್ಲಿ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಗೆಲುವಾಗಲಿ. ಇಂಥಾ ಸಂಕಷ್ಟ ಸನ್ನಿವೇಶದಲ್ಲಿ ಬೆಂಬಲ ಕೊಟ್ಟಿದ್ದಕ್ಕೆ ಧನ್ಯವಾದಗಳು. ಪ್ರಧಾನಿ ಕಾರ್ಯಾಲಯದಿಂದ ನಿಮಗೆ 50 ಕೋಟಿ ರೂಗಳನ್ನು ರವಾನಿಸುತ್ತಿದದು, ಆದಷ್ಟು ಬೇಗ ರಾಮಮಂದಿರ ನಿರ್ಮಾಣವಾಗಲಿ’ ಎಂಬುದು ಈ ಪತ್ರದ ಸಾರಾಂಶವಾಗಿದ್ದು, ಈ ಪತ್ರವನ್ನು ಮೋದಿಯವರು ಬರೆದಿದ್ದಾರೆ ಎಂದು ಹೇಳಲಾಗಿದ್ದು,  ಪತ್ರದಲ್ಲಿ ಪ್ರಧಾನಿ ಮೋದಿಯವರದ್ದು ಎನ್ನಲಾದ ಸಹಿ ಕೂಡಾ ಇತ್ತು.

body 1

ಈ ಸುದ್ದಿಯ ಸತ್ಯಾಂಶವೇನೆಂದರೆ, ಪ್ರಧಾನಿ ಮೋದಿಯವರು ಇತ್ತೀಚೆಗೆ ಯೋಗಿ ಆದಿತ್ಯಾನಾಥ್‌ ಅವರಿಗೆ ಯಾವುದೇ ಪತ್ರವನ್ನು ಬರೆದಿಲ್ಲ. ಅಲ್ಲದೆ, ರಾಮಮಂದಿರ ನಿರ್ಮಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ ಎಂದು ತಿಳಿದು ಬಂದಿದೆ. ಪ್ರೆಸ್‌ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್‌ ಚೆಕ್‌ ತಂಡ ಕೂಡಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಬಗ್ಗೆ ಸ್ಪಷ್ಟನೆ ನೀಡಿದೆ.


ಇದನ್ನೂ ಓದಿ: ಸಂವಿಧಾನ ವಿರೋಧಿ ಮೋದಿ ಸರ್ಕಾರ; ಪ್ರಜಾಪ್ರಭುತ್ವದ ಆತ್ಮಾವಲೋಕನಕ್ಕೆ ಸಂದರ್ಭ: ಸೋನಿಯಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights