ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣ ಮಾಡುವಾಗ ಮೂಕಾಭಿನಯ ಮಾಡಿದ್ದು ನಿಜವೇ?

ಭಾರತ್ ಜೋಡೋ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ತಮ್ಮ ಮೈಕ್ ಆಫ್ ಆಗಿರುವುದನ್ನು ಅರಿಯದೆ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ದೃಶ್ಯಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. BJP ಬೆಂಬಲಿತ ಮತ್ತು ಬಲಪಂಥೀಯ ಪ್ರತಿಪಾದಕಿ ಶಕುಂತಲ ಎಂಬುವವರು ರಾಹುಲ್ ಗಾಂಧಿಯ ಭಾಷಣದ ವಿಡಿಯೋ ಕ್ಲಿಪ್‌ ಅನ್ನು ಪೋಸ್ಟ್ ಮಾಡುವ ಮೂಲಕ “ಛೇ ಪಪ್ಪು ಮೂಕ ರೋಧನೆನಾ ನನ್ನಿಂದ ನೋಡೋಕಾಗ್ತಿಲ್ಲ” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

BJP ಬೆಂಬಲಿಗರಾದ ರಿಷಿ ಬಾಗ್ರೀ ಎಂಬ ಟ್ವಿಟರ್ ಬಳಕೆದಾರರು ಇದೇ ಟ್ವೀಟ್‌ ಅನ್ನು ಹಂಚಿಕೊಂಡಿದ್ದು, ” ಮೈಕ್ ಆಫ್ ಆದ್ರೆ, ಕಾಮಿಡಿ ಆನ್‌ ಆಗತ್ತೆ ಎಂದು ಅಪಹಾಸ್ಯದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿ ಅವರ ಧ್ವನಿ ಇಲ್ಲದ ವಿಡಿಯೋದ ಸರ್ಚ್ ಮಾಡಿದಾಗ ಮೂಲ ವಿಡಿಯೋ ಲಭ್ಯವಾಗಿದೆ. ರಿಷಿ ಬಾಗ್ರೀ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸುವಾಗ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಹಂಚಿಕೊಳ್ಳಲಾಗಿದೆ. ಸಂಸತ್ತಿನಲ್ಲಿ ರೈತರ ಸಾಲ ಮನ್ನಾ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತಿತರ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದಾಗ ಕಾಂಗ್ರೆಸ್ ಪಕ್ಷದ ನಾಯಕರ ಧ್ವನಿಯನ್ನು ಹೇಗೆ ಹತ್ತಿಕ್ಕಲಾಗುತ್ತದೆ ಎಂಬುದನ್ನು ಜನರಿಗೆ ತೋರಿಸಲು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಮೈಕ್ ಆಫ್ ಮಾಡುತ್ತಿರುವುದು ವೀಡಿಯೊದ ವಿಸ್ತೃತ ಆವೃತ್ತಿಯಲ್ಲಿ ಕಂಡುಬಂದಿದೆ.

27 ನವೆಂಬರ್ 2022 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳನ್ನು ಕಂಡುಕೊಂಡಿದ್ದೇವೆ. ಭಾರತ್ ಜೋಡೋ ಯಾತ್ರಾ ರ್ಯಾಲಿಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ರಾಹುಲ್ ಗಾಂಧಿಯವರ ಭಾಷಣದ ದೃಶ್ಯಗಳು ಎಂದು ವಿವರಿಸುವ ಈ ವೀಡಿಯೊವನ್ನು INC ಪ್ರಕಟಿಸಿದೆ. ಇಂದೋರ್‌ನ ರಾವ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಮತ್ತು ಕಾಂಗ್ರೆಸ್ ಪಕ್ಷದ ಸಂಸದರು ಒಂದಲ್ಲ, ಹಲವು ಬಾರಿ ಲೋಕಸಭೆಯಲ್ಲಿ ರೈತರ ಸಾಲ ಮನ್ನಾ, ನೋಟು ರದ್ದತಿ ಮತ್ತು ಜಿಎಸ್‌ಟಿ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸುತ್ತೇವೆ.

ಆದರೆ, ನಾವು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸಿದಾಗ, ಆಶ್ಚರ್ಯಕರವಾಗಿ ನಮ್ಮ ಮೈಕ್‌ಗಳು ಈ ರೀತಿ ಆಫ್ ಆಗುತ್ತವೆ. ಕೆಲವೇ ಕ್ಷಣಗಳಲ್ಲಿ ರಾಹುಲ್ ಗಾಂಧಿ ಕೈ ಮತ್ತು ಮುಖದ ಸನ್ನೆಗಳು ಮಾಡುತ್ತಿರುವುದು ಮಾತ್ರ ಕಾಣಿಸುತ್ತಿದ್ದು ಧ್ವನಿ ಕೇಳಿಸುತ್ತಿರಲಿಲ್ಲ. ಕೆಲವು ಕ್ಷಣಗಳ ನಂತರ, ರಾಹುಲ್ ಗಾಂಧಿ ತಮ್ಮ ಮೈಕ್ ಅನ್ನು ಆನ್ ಮಾಡಿ, “ಹಾಗಾದರೆ, ನಾವು ಏನು ಹೇಳಲು ಬಯಸುತ್ತೇವೆ, ನೀವು ನೋಡಿದಂತೆ, ನಾವು ನಿರಂತರವಾಗಿ ಮಾತನಾಡುತ್ತೇವೆ ಆದರೆ ನಾವು ಸದನದಲ್ಲಿ ಮಾತನಾಡಿದರೆ ಅದು ಕೇಳವುದಿಲಿಲ್ಲ” ಎಂದು ಹೇಳಿದರು. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಲು ಪ್ರಯತ್ನಿಸಿದಾಗ ಮೈಕ್‌ಗಳು ಹೇಗೆ ಆಫ್ ಆಗುತ್ತವೆ ಎಂಬುದನ್ನು ಪ್ರದರ್ಶಿಸಲು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ತಮ್ಮ ಮೈಕ್ ಆಫ್ ಮಾಡಿದ್ದಾರೆ.

10 ನವೆಂಬರ್ 2022 ರಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ರ್ಯಾಲಿಯ ಸಂದರ್ಭದಲ್ಲಿ  ರಾಹುಲ್ ಗಾಂಧಿ ಇದೇ ರೀತಿ ಮಾಡುವ ಮೂಲಕ ಪ್ರತಿಪಕ್ಷ ನಾಯಕರ ಧ್ವನಿಯನ್ನು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಹೇಗೆ ಹತ್ತಿಕ್ಕಲಾಗುತ್ತದೆ ಎಂಬುದನ್ನು ಪ್ರದರ್ಶಿಸಲು ರಾಹುಲ್ ಗಾಂಧಿ ಮೈಕ್ ಆಫ್ ಮಾಡುವ ಮೊದಲು ಮತ್ತು ನಂತರದ ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು

ಒಟ್ಟಾರೆಯಾಗಿ ಹೇಳುವುದಾದರೆ, ಇಂದೋರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಇತರ ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕರು ಪ್ರಶ್ನೆಗಳನ್ನು ಎತ್ತಿದಾಗ ಸಂಸತ್ತಿನಲ್ಲಿ ಮೈಕ್‌ಗಳು ಹೇಗೆ ಸ್ವಿಚ್ ಆಫ್ ಆಗುತ್ತವೆ ಎಂಬುದನ್ನು ಪ್ರದರ್ಶಿಸಲು ಉದ್ದೇಶಪೂರ್ವಕವಾಗಿ ತಮ್ಮ ಮೈಕ್ ಅನ್ನು ಸ್ವಿಚ್ ಆಫ್ ಮಾಡಿದರು.  ಕೆಲವು ಕ್ಷಣಗಳ ನಂತರ, ರಾಹುಲ್ ಗಾಂಧಿ ತಮ್ಮ ಮೈಕ್ ಆನ್ ಮಾಡಿ ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಹತ್ತಿಕ್ಕುವ ಮಾರ್ಗವಾಗಿದೆ ಎಂದು ಹೇಳಿದರು. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಇಂದೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ತಮ್ಮ ಮೈಕ್ ಅನ್ನು ಆಫ್ ಮಾಡುವ ಮೊದಲು ಮತ್ತು ನಂತರದ ದೃಶ್ಯಗಳನ್ನು ಕ್ಲಿಪ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: FIFA ವಿಶ್ವಕಪ್‌ನಲ್ಲಿ ನೀಡಿದ ಬ್ಯಾಗ್‌ ಮೇಲೆ ಮೋದಿ ಫೋಟೋ ಹಾಕಲಾಗಿತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights