ಪತ್ನಿಯೊಂದಿಗೆ ಸಂಬಂಧ ಆರೋಪ : ವ್ಯಕ್ತಿಯನ್ನು ಹೊಡೆದು ಸಾಯಿಸಿದ ಪತಿ : ವಿಡಿಯೋ ವೈರಲ್!

ಪತ್ನಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಿ ಪತಿ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮೃತನನ್ನು ಪ್ರೇಮುಪುರ ಗ್ರಾಮದ ಜಗದೀಶ್ ಮೇಘ್ವಾಲ್ ಎಂದು ಗುರುತಿಸಲಾಗಿದೆ. ಪ್ರೇಂಪುರ ನಿವಾಸಿಗಳಾದ ವಿನೋದ್, ಮುಖೇಶ್, ಲಾಲ್‌ಚಂದ್ ಅಲಿಯಾಸ್ ರಾಮೇಶ್ವರ್, ಸಿಕಂದರ್ ಮತ್ತು ದಿಲೀಪ್ ರಜಪೂತ್ ಈ ಕೃತ್ಯ ಎಸಗಿದ್ದಾರೆ.

ನಗರದ ಹನುಮಾನ್ ಗಢ ಜಿಲ್ಲೆಯಲ್ಲಿ ಗುರುವಾರ ವ್ಯಕ್ತಿಯೊಬ್ಬ ತನ್ನ  ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ಮಹಿಳೆಯ ಪತಿ ಮತ್ತು ಇತರ ಕುಟುಂಬ ಸದಸ್ಯರು ವ್ಯಕ್ತಿಯನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೋಪಿತರು ವಿಡಿಯೋವನ್ನು ಹಂಚಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.  ವಿಡಿಯೋದಲ್ಲಿ ಆರು ಜನರು ವ್ಯಕ್ತಿಯನ್ನು ನಿರ್ದಯವಾಗಿ ಲಾಠಿಯಿಂದ ಹೊಡೆಯುತ್ತಿರುವುದು ಕಂಡುಬಂದಿದೆ.

ತಂದೆ ಬನ್ವಾರಿಲಾಲ್ ಅವರಿಗೆ ಗುರುವಾರ ಮಧ್ಯಾಹ್ನ 1.30 ರ ಸುಮಾರಿಗೆ ಜಗದೀಶ್ ಅವರು ಸೂರತ್‌ಗಢಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆತ ಮನೆಯಿಂದ ಹೊರ ಹೋಗುತ್ತಿದ್ದಾಗ ಆರೋಪಿಗಳು ಆತನನ್ನು ಅಪಹರಿಸಿ ಹತ್ಯೆ ಮಾಡಿ ಸಾಯಿಸಿದ್ದಾರೆ. ಬಳಿಕ ಆತನ ಶವವನ್ನು ಆರೋಪಿಗಳು ಆತನ ಮನೆಯ ಮುಂದೆ ಎಸೆದಿದ್ದಾರೆ. ನಂತರ ನಾನು ಮಗನನ್ನು ಮಾತನಾಡಲು ಪ್ರಯತ್ನಿಸಿದೆ ಆದರೆ ಮಗ ಮಾತನಾಡಲಿಲ್ಲ ಎಂದು ತಂದೆ ದೂರು ನೀಡಿದ್ದಾರೆ.

ವಿಡಿಯೋದಲ್ಲಿ ಆರೋಪಿಗಳಲ್ಲಿ ಜಗದೀಶ್ ಮೊಣಕಾಲುಗಳಿಗೆ ಹೊಡೆದು, ಕುತ್ತಿಗೆ ಇಸುಗಿ ಕೊಲೆ ಮಾಡಿದ್ದಾರೆ. ವಿಡಿಯೋ ಮತ್ತು ತಂದೆ ನೀಡಿದ ದೂರಿನ ಆಧಾರದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು , ಅವರಲ್ಲಿ ಮೂವರನ್ನು ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ. ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹನುಮಂತಗಡ ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದು ಆರೋಪಿಯನ್ನು ಬಂಧಿಸದವರೆಗೆ ವ್ಯಕ್ತಿಯ ಶವವನ್ನು ಸುಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights