ಫ್ಯಾಕ್ಟ್‌ಚೆಕ್: ಮಾಗಡಿಯ ದೇವಾಲಯದ ಶಿವಲಿಂಗ ಕಣ್ಣು ಬಿಟ್ಟಿದ್ದು ನಿಜವೇ?

ಮಾಗಡಿಯ KSRTC ನಿಲ್ದಾಣದಲ್ಲಿರುವ ಪುರಾತನ ದೇವಾಲಯವಾದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗ ಕಣ್ಣು ಬಿಟ್ಟಿದೆ. ಅದನ್ನು ನೋಡಲು ಜನರು ದೌಡಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು ಎಂದು ಪ್ರತಿಪಾದಿಸಿ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಅಷ್ಟೆ ಅಲ್ಲದೆ ವಾಟ್ಸಾಪ್‌ ಗ್ರೂಪ್‌ಗಳಲ್ಲೂ ಈ ಸುದ್ದಿ ಹರಿದಾಡುತ್ತಿದ್ದು ಏನ್‌ಸುದ್ದಿ.ಕಾಂನ ವಾಟ್ಸಾಪ್‌ನಲ್ಲೂ ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಇದರ ಸತ್ಯಾಸತ್ಯತೆ ಏನೆಂದು ತಿಳಿಸುವಂತೆ ವಿನಂತಿಸಿದ್ದಾರೆ. ಈ ವಿಡಿಯೋದಲ್ಲಿ ತೋರಿಸಿರುವಂತೆ ಶಿವಲಿಂಗ ಕಣ್ಣು ಬಿಟ್ಟಿದೆ ಎಂಬ ಪ್ರತಿಪಾದನೆಯಲ್ಲಿ ಸತ್ಯಾಂಶ ಇದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದಾಗ, ರಾಮನಗರ ಜಿಲ್ಲೆಯ ಮಾಗಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶಿವಲಿಂಗದಲ್ಲಿ ಕಣ್ಣು ಮೂಡಿದೆ ಎಂದು ಎಂಬ ಚರ್ಚೆಗಳಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

25 ನವೆಂಬರ್ ಶುಕ್ರವಾರ ರಾತ್ರಿ ಸುಮಾರು 7 ಗಂಟೆಯ ಹೊತ್ತಿನಲ್ಲಿ ಹೂವಿನಿಂದ ಅಲಂಕೃತಗೊಂಡಿದ್ದ ಶಿವಲಿಂಗದ ಮೇಲ್ಭಾಗದಲ್ಲಿ ಕಣ್ಣಿನ ಆಕಾರದಲ್ಲಿ ಕಲೆ ಮೂಡಿತ್ತು. ಶಿವಲಿಂಗಕ್ಕೆ ಕನಕಾಂಬರ ಹೂವಿನ ಮಾಲೆಯನ್ನು ಹಾಕಾಲಾಗಿದ್ದು ಅದರ ನೆರಳಿನ ಕೆಳಗೆ ದೀಪದ ಎಣ್ಣೆ ಸೋರಿದೆ. ಆ ಭಾಗವು ವಿದ್ಯುತ್ ಬೆಳಕಿನ ಹೊಳಪಿಗೆ ಅದು ಕಣ್ಣಿನ ಹಾಗೆ ಗೋಚರಿಸಿದೆ. ಅದನ್ನೆ ಕಣ್ಣು ಎಂಬು ಭಾವಿಸಿ ವಂದಂತಿ ಹರಡಲಾಗಿದೆ.

ಮೊದಲಿಗೆ ಚಂದನ್‌ ಎಂಬವರು ಪೂಜೆ ಮಾಡಲು ಹೋದಾಗ ಲಿಂಗದಲ್ಲಿ ಕಣ್ಣುಗಳ ಆಕೃತಿ ನೋಡಿ ತಕ್ಷಣ ತನ್ನ ಅಣ್ಣನಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ.

ವದಂತಿ ಗಾಳಿಯಂತೆ ಎಲ್ಲ ಕಡೆ ಹರಡಿದ್ದು, ಶಿವಲಿಂಗವನ್ನು ನೋಡಲು ಜನರು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ದೇವಸ್ಥಾನಕ್ಕೆ ಬೀಗ ಹಾಕಿ, ಮುಂಜಾನೆ ದೇವರ ದರ್ಶನಕ್ಕೆ ಅವಕಾಶ ನೀಡಲು ಆಡಳಿತ ಮಂಡಳಿ ಮುಂದಾಗಿತ್ತು ಎಂದು ಹಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾರೆ, ಮಾಗಡಿಯ ಬಸವೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗ ಕಣ್ಣು ಬಿಟ್ಟಿದೆ ಎಂದು ಗಾಳಿಸುದ್ದಿ ಹರಡಿ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ, ಗಣಪ ಹಾಲು ಕುಡಿದ ಘಟನೆಯಂತೆಯೇ ಇನ್ನೊಂದು ಘಟನೆಯಾಗಿದ್ದು ಕಣ್ಣು ತೆರೆದ ಶಿವನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಇಂತಹ ಸುದ್ದಿಗಳನ್ನು ಪರಿಶೀಲಿಸಿ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕೆನ್ನುವುದು ನಮ್ಮ ಏನ್‌ ಸುದ್ದಿ.ಕಾಂ ಆಶಯ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮೋದಿಯೇ ಬರಬೇಕಾಯಿತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights