ಕೊವ್ಯಾಕ್ಸಿನ್ ಪಡೆದ ಎರಡೇ ಗಂಟೆಯಲ್ಲಿ ಪೌರ ಕಾರ್ಮಿಕ ಸಾವು!

ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್‌ ಅನ್ನು ಪಡೆದ ಎರಡನೇ ಗಂಟೆಯಲ್ಲಿ ಕೊರೊನಾ ವಾರಿಯರ್‌ ಆದ ಪೌರ ಕಾರ್ಮಿಕರೊಬ್ಬರು ಮೃತ ಪಟ್ಟಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ.

ಸಾವಿಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸಾವನ್ನಪ್ಪಿದ ವ್ಯಕ್ತಿಯ ಮೃತ ದೇಹವನ್ನು ಮರೋತ್ತರ ಪರೀಕ್ಷೆ ಕಳಿಸಲಾಗಿದ್ದು, ಪರೀಕ್ಷಾ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವನ್ನಪ್ಪಿರುವ ಪೌರ ಕಾರ್ಮಿಕ ಜಿಗ್ನೇಶ್ ಸೋಲಂಕಿ ಎಂದು ತಿಳಿದು ಬಂದಿದ್ದು, ಪೌರ ಕಾರ್ಮಿಕನ ಸಾವಿಗೆ ಕೋವಿಡ್-19 ಲಸಿಕೆ ಕಾರಣ ಎಂದು ಸಾವನ್ನಪ್ಪಿದ ವ್ಯಕ್ತಿಯ ಕುಟುಂಬ ಆರೋಪಿಸಿದೆ.

ಮೃತನ ಕುಟುಂಬ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ಅಧಿಕಾರಿಗಳು, ಆತನಿಗೆ 2016ರಿಂದ ಹೃದಯ ಸಂಬಂಧಿತ ಕಾಯಿಲೆ ಇತ್ತು. ಅದಕ್ಕಾಗಿ ಆತ ಔಷಧಿಗಳನ್ನು ತೆಗೆದುಕೊಳ್ಳದೇ ಇದ್ದುದ್ದರಿಂದಾಗಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ(ವಿಎಂಸಿ) ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕನಿಗೆ, ಭಾನುವಾರ ಬೆಳಗ್ಗೆ ಲಸಿಕೆ ನೀಡಲಾಗಿತ್ತು. ಆತ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights