ಕೊರೊನಾ ಲಸಿಕೆ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ ಸಾವು!

ಕೊರೊನಾ ಲಸಿಕೆ ಪಡೆದಿದ್ದ ಉತ್ತರ ಪ್ರದೇಶ ಮೊರಾದಾಬಾದ್‌ನ ಸರ್ಕಾರಿ ಆಸ್ಪತ್ರೆಯ ಉದ್ಯೋಗಿ ಲಸಿಕೆ ಪಡೆದ 24 ಗಂಟೆಗಳ ನಂತರ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಅಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಕೊರೊನಾ ಲಸಿಕೆ ಪಡೆದ ನಂತರ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿಗೂ ವ್ಯಾಕ್ಸಿನೇಷನ್‌‌‌ಗೂ ಸಂಬಂಧವಿಲ್ಲ ಎಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ ಎಂದು ಎನ್‌‌ಡಿಟಿವಿ ವರದಿ ಮಾಡಿದೆ.

ಅವರಿಗೆ ಎದೆ ನೋವು ಮತ್ತು ಉಸಿರಾಟದ ತೊಂದರೆಗಳು ಇರುವುದಾಗಿ ಹೇಳಿದ್ದರು. ಅವರು ಲಸಿಕೆ ನೀಡುವುದಕ್ಕೂ ಮೊದಲೆ ಅವರು ಅಸ್ವಸ್ಥರಾಗಿದ್ದರು ಎಂದು ಅವರ ಕುಟುಂಬ ಹೇಳಿದೆ.

“ಅವರಿಗೆ ಶನಿವಾರ ಮಧ್ಯಾಹ್ನ ಲಸಿಕೆ ನೀಡಲಾಯಿತು. ಭಾನುವಾರ ಉಸಿರಾಟದ ತೊಂದರೆ ಮತ್ತು ಎದೆ ನೋವಿನ ಬಗ್ಗೆ ಹೇಳಿದ್ದರು. ಮರಣೋತ್ತರ ಪರೀಕ್ಷೆ ನಡೆಯಲಿದೆ, ಸಾವಿಗೆ ಕಾರಣಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಇದು ವ್ಯಾಕ್ಸಿನೇಷನ್‌‌‌ನ ಪ್ರತಿಕೂಲ ಪರಿಣಾಮದಂತೆ ಕಾಣುತ್ತಿಲ್ಲ. ಅವರು ಶನಿವಾರ ರಾತ್ರಿ ಕೂಡಾ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡಿದ್ದರು, ಆಗ ಯಾವುದೆ ಸಮಸ್ಯೆಗಳಿರಲಿಲ್ಲ” ಎಂದು ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಎಂ.ಸಿ.ಗಾರ್ಗ್ ಕಳೆದ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Read Also: ಕೊರೊನಾ ಲಸಿಕೆ: ರಾಜಧಾನಿಯಲ್ಲಿ ಲಸಿಕೆ ಪಡೆವರಿಗೆ 50ಕ್ಕೂ ಹೆಚ್ಚು ಜನರಿಗೆ ಅಡ್ಡಪರಿಣಾಮ

ಸಾವಿಗೆ ತಕ್ಷಣದ ಕಾರಣ ಹೃದಯ-ಶ್ವಾಸಕೋಶದ ಕಾಯಿಲೆ. ಅದರಿಂದಾಗಿ ”ಹೃದಯ ಆಘಾತ / ಸೆಪ್ಟಿಸೆಮಿಕ್ ಆಘಾತ” ಆಗಿದೆ ಎಂದು ಮರಣೋತ್ತರ ವರದಿಯು ಬಹಿರಂಗಪಡಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಮೂಲಗಳು ತಿಳಿಸಿವೆ.

“ನನ್ನ ತಂದೆಯನ್ನು ಮಧ್ಯಾಹ್ನ 1.30 ರ ಸುಮಾರಿಗೆ ವ್ಯಾಕ್ಸಿನೇಷನ್ ಕೇಂದ್ರದಿಂದ ನಾನು ಮನೆಗೆ ಕರೆತಂದೆ. ಅವರಿಗೆ ಉಸಿರುಗಟ್ಟುತ್ತಿದ್ದರು ಮತ್ತು ಕೆಮ್ಮುತ್ತಿದ್ದರು. ಅಲ್ಲದೆ ಅವರು ಸ್ವಲ್ಪ ನ್ಯುಮೋನಿಯಾ, ಸಾಮಾನ್ಯ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು, ಆದರೆ ಮನೆಗೆ ಹಿಂದಿರುಗಿದ ನಂತರ ಇದು ಜಾಸ್ತಿಯಾಯಿತು” ಎಂದು ಮಹಿಪಾಲ್ ಸಿಂಗ್ ಮಗ ವಿಶಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಭಾರತದ ಕೊರೊನಾ ವ್ಯಾಕ್ಸಿನೇಷನ್‌ನ ಮೊದಲ ದಿನವಾದ ಶನಿವಾರದಂದು ಉತ್ತರ ಪ್ರದೇಶದಲ್ಲಿ 22,643 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Read Also: ಕೊವ್ಯಾಕ್ಸಿನ್‌ ಪಡೆದಿದ್ದ ಸ್ವಯಂಸೇವಕ ಸಾವು; ವಿಷ ಸೇವಿಸಿರಬಹುದೆಂಬ ಶಂಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights