ಕೊರೊನಾ ಲಸಿಕೆ: ರಾಜಧಾನಿಯಲ್ಲಿ ಲಸಿಕೆ ಪಡೆವರಿಗೆ 50ಕ್ಕೂ ಹೆಚ್ಚು ಜನರಿಗೆ ಅಡ್ಡಪರಿಣಾಮ

ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ನಿನ್ನೆ (ಜ.16) ಅಷ್ಟೇ ಚಾಲನೆ ನೀಡಲಾಗಿದೆ. ಆದರೆ, ಅಭಿಯಾನದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ದಿನವೇ ಲಸಿಕೆ ಹಾಕಿಸಿಕೊಂಡ ಸುಮಾರು 50 ಜನರಿಗೆ ಲಸಿಕೆಯಿಂದ ಅಡ್ಡಪರಿಣಾಮಗಳು ಕಂಡುಬಂದಿವೆ ಎಂದು ವರಿಯಾಗಿದೆ.

ಲಸಿಕೆ ಹಾಕಿಸಿಕೊಂಡವರಲ್ಲಿ ಒಬ್ಬರಿಗೆ ತೀವ್ರತರದ ಸಮಸ್ಯೆ ಉಂಟಾಗಿದ್ದು, 51 ಜನರಿಗೆ ಕಡಿಮೆ ತೀವ್ರತೆಯ ಅಡ್ಡಪರಿಣಾಮ (ಎಇಎಫ್‌ಐ) ಕಂಡು ಬಂದಿದೆ ಎಂದು ಧಿಕೃತ ಅಂಕಿಅಂಶಗಳು ತಿಳಿದು ಬಂದಿದೆ.

ಅಡ್ಡಪರಿಣಾಮ ಉಂಟಾದಾಗ ರವಾನಿಸಲು ನಿಗದಿಪಡಿಸಿದ್ದ ಕೇಂದ್ರಕ್ಕೆ ಒಬ್ಬ ವ್ಯಕ್ತಿಯನ್ನು ರವಾನಿಸಲಾಯಿತು. ಉಳಿದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿಲ್ಲ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೆಲವರಿಗೆ ತಲೆಸುತ್ತು ಹಾಗೂ ತಲೆನೋವು ಉಂಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರನ್ನು ಮುಂದಿನ ಕೆಲವು ದಿನಗಳ ಕಾಲ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಚುಚ್ಚುಮದ್ದು ಪಡೆದ ಭದ್ರತಾ ಸಿಬ್ಬಂದಿಯಲ್ಲಿ ಅಲರ್ಜಿ ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಇದನ್ನು ತೀವ್ರ ಅಡ್ಡ ಪರಿಣಾಮವೆಂದು ಪರಿಗಣಿಸಲಾಗಿದೆ. ಹಾಗೆಯೇ ದಕ್ಷಿಣ ಹಾಗೂ ನೈಋತ್ಯ ಜಿಲ್ಲೆಗಳಲ್ಲಿ 11 ಕಡಿಮೆ ತೀವ್ರತೆಯ ಅಡ್ಡ ಪರಿಣಾಮ ದಾಖಲಾಗಿದೆ.

ನವದೆಹಲಿಯ 11 ಜಿಲ್ಲೆಗಳಲ್ಲಿ ಮೊದಲ ದಿನದಲ್ಲಿ 8,117 ಆರೋಗ್ಯ ಸೇನಾನಿಗಳಿಗೆ ಲಸಿಕೆ ಹಂಚುವ ಗುರಿ ಹೊಂದಲಾಗಿತ್ತು. ಈ ಪೈಕಿ ಒಟ್ಟು 4,319 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್-19 ಲಸಿಕೆ ಪಡೆದ ಬಳಿಕ ಆರೋಗ್ಯದಲ್ಲಿ ಏರು-ಪೇರಾದರೆ ಅದನ್ನು ರೋಗ ನಿರೋಧಕ ಪಡೆದ ಬಳಿಕ ಉಂಟಾಗಿರುವ ಅಡ್ಡ ಪರಿಣಾಮ (ಎಇಎಫ್‌ಐ) ಎಂದು ಪರಿಗಣಿಸಲಾಗುತ್ತದೆ.

ಮೊದಲ ದಿನದಲ್ಲಿ ದೆಹಲಿಯ 81 ಕೇಂದ್ರಗಳಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಂಚುವ ಗುರಿ ಹೊಂದಲಾಗಿತ್ತು.


Read Also: ಕೋವಾಕ್ಸಿನ್ ತಿರಸ್ಕರಿಸಿದ ದೆಹಲಿ ಆರ್‌ಎಂಎಲ್ ಆಸ್ಪತ್ರೆಯ ವೈದ್ಯರು…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights