ಫ್ಯಾಕ್ಟ್‌ಚೆಕ್ : ನೆಹರೂ ಲಂಡನ್ ಪೌರತ್ವ ಪಡೆದಿದ್ದರೆ?
ಜವಾಹರಲಾಲ್ ನೆಹರು ಅವರು 1956 ರಲ್ಲಿ ಲಂಡನ್‌ನ ಪೌರತ್ವವನ್ನು ಪಡೆದಿದ್ದರು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅದೇ ವೀಡಿಯೊವನ್ನು ‘ಬ್ರಿಟಿಷ್ ಪಾಥೆ’ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ – ““London Honours Two Great Premiers (1956)”. ಭಾರತದ ನೆಹರು ಮತ್ತು ನ್ಯೂಜಿಲೆಂಡ್ ಪ್ರಧಾನಿ ಹಾಲೆಂಡ್, ಈ ಇಬ್ಬರು ಮಹನೀಯರಿಗೆ ‘ಫ್ರೀಮನ್ ಆಫ್ ದಿ ಸಿಟಿ ಆಫ್ ಲಂಡನ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ವರದಿಯಾಗಿದೆ. ಲಂಡನ್ ನಗರದ ಗಿಲ್ಡ್‌ಹಾಲ್‌ನಲ್ಲಿ ಈ ಸಮಾರಂಭವನ್ನು ನೆರೆವೇರಿಸಲಾಗಿತ್ತು.
ಅದೇ ಘಟನೆಯ ಒಂದೇ ರೀತಿಯ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸನ್ಮಾನ ಸ್ವೀಕರಿಸಿದ ಬಳಿಕ ನೆಹರೂ ಅವರು ಹೇಳಿದ ಮಾತುಗಳನ್ನು ವಿಡಿಯೋಗಳಲ್ಲಿ ನೋಡಬಹುದು.
03 ಜುಲೈ 1956 ರಂದು, ಭಾರತದ ಜವಾಹರಲಾಲ್ ನೆಹರು ಮತ್ತು ನ್ಯೂಜಿಲೆಂಡ್‌ನ ಸರ್ ಸಿಡ್ನಿ ಹಾಲೆಂಡ್ ಅವರಿಗೆ ನೀಡಿದ ಗೌರವದ ಬಗ್ಗೆ ಹಲವು ಪತ್ರಿಕೆಗಳು ವರದಿ ಮಾಡಿವೆ. ಆ ಕೆಲವು ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಜವಾಹರಲಾಲ್ ನೆಹರು ಅವರಿಗೆ 1956 ರಲ್ಲಿ ‘ಫ್ರೀಮನ್ ಆಫ್ ದಿ ಸಿಟಿ ಆಫ್ ಲಂಡನ್’/’ಫ್ರೀಡಮ್ ಆಫ್ ದಿ ಸಿಟಿ ಆಫ್ ಲಂಡನ್’ ಪ್ರಶಸ್ತಿಯನ್ನು ನೀಡಲಾಯಿತು. ಇದು ಗೌರವ ಪ್ರಶಸ್ತಿಯಾಗಿದೆ. ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ ಇಂಗ್ಲೆಂಡ್‌ನ ಪೌರತ್ವವನ್ನು ತೆಗೆದುಕೊಳ್ಳಲಿಲ್ಲ.
ಆದರೆ ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸದಲ್ಲಿ ನೆಹರು ಅವರ ಮೇಲೆ ಹೊರಿಸಲಾದ ಆರೋಪಗಳನ್ನು ಮತ್ತಾರ ಮೇಲೂ ಮಾಡಲಾಗಿಲ್ಲ ಅದರಲ್ಲೂ BJP ಮತ್ತು ಬಲಪಂಥೀಯ ಬೆಂಬಲಿತ ಮಾಧ್ಯಮಗಳು ಇಂತಹ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ನೆಹರು ಅವರನ್ನು ಅಸಮರ್ಥ ಪ್ರಧಾನಿ ಎಂದು ಬಿಂಬಿಸಲು ಪ್ರಯತ್ನಿಸಿವೆ. ಹಾಗಾಗಿ ಇಂತಹ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದರೆ ಅವುಗಳನ್ನು ಪರಿಶೀಲಿಸದೆ ನಂಬಬೇಡಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕುಂಭಮೇಳದಲ್ಲಿ 400 ಸಾಧುಗಳು ಅಗ್ನಿ ಪ್ರವೇಶ ಮಾಡಿದರೆ? ಅದನ್ನು BBC ಪ್ರಸಾರ ಮಾಡಿತ್ತೇ?