ಫ್ಯಾಕ್ಟ್‌ಚೆಕ್ : ಕುಂಭಮೇಳದಲ್ಲಿ 400 ಸಾಧುಗಳು ಅಗ್ನಿ ಪ್ರವೇಶ ಮಾಡಿದರೆ? ಅದನ್ನು BBC ಪ್ರಸಾರ ಮಾಡಿತ್ತೇ?
“ಕುಂಭಮೇಳವನ್ನು ಕವರ್ ಮಾಡುವಾಗ, ಕುಂಭ ಸ್ನಾನದ ಮೊದಲು ಸುಮಾರು 400 ಸಾಧುಗಳು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುವುದನ್ನು ಬಿಬಿಸಿ ತಂಡವು ನೋಡಿದೆ. ಈ ಸಂದರ್ಭದಲ್ಲಿ ಅವರು ವಿಡಿಯೋ ತೆಗೆದಿದ್ದಾರೆ. ಕಟ್ಟಿಗೆಯನ್ನು ಸುಡುವುದರಿಂದ ಉಂಟಾದ ತೀವ್ರತೆರೆನಾದ ಜ್ವಾಲೆಯಿಂದ BBC ಕ್ಯಾಮರಾ ಸಿಬ್ಬಂದಿ ದೂರ ಸರಿಯಬೇಕಾಯಿತು. ಉರಿಯುತ್ತಿರುವ ದಿಮ್ಮಿಗಳ ಮೇಲೆ ಮಲಗಿದ್ದ ಸಂತರಿಗೆ ಏನೂ ಆಗಲಿಲ್ಲ ಎಂದು ಅವರು ಆಘಾತಕ್ಕೊಳಗಾದರು. ಅವರು ತಮ್ಮ ಬಟ್ಟೆಗಳನ್ನು ಬೆಂಕಿ ನಂದಿಸುವ ರಾಸಾಯನಿಕಗಳ ಉಪಸ್ಥಿತಿಗಾಗಿ ಪರೀಕ್ಷಿಸಿದರು, ಆದರೆ ಅವುಗಳನ್ನು ಕಂಡುಹಿಡಿಯುವಲ್ಲಿ ವಿಫಲರಾದರು ಸಂತರು ಸಂಪೂರ್ಣವಾಗಿ ಜಪದಲ್ಲಿ ಮಗ್ನರಾಗಿದ್ದರು. ಈ ಸಂತರನ್ನು ಸಿದ್ಧ ಸಂತರೆಂದು ಕರೆಯುತ್ತಾರೆ. ನಂತರ BBC ತಂಡ ಅದನ್ನು ತಮ್ಮ ವಾಹಿನಿಗಳಲ್ಲಿ ಪ್ರಸಾರ ಮಾಡಿತು. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿರುವುದು ನಿಜಕ್ಕೂ ನಮ್ಮ ಜನ್ಮದ ಭಾಗ್ಯ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯೆತೆ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
400 ಸಾಧುಗಳು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುವುದನ್ನು BBC ತಂಡ ವರದಿ ಮಾಡಿದೆ ಎಂಬ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅದೇ ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.
ಈ YouTube ವೀಡಿಯೊವನ್ನು 23 ಮಾರ್ಚ್ 2011 ರಂದು ‘ದಿ ಫೈರ್ ಯೋಗಿ’ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ಯೂಟ್ಯೂಬ್ ವೀಡಿಯೊದ ವಿವರಣೆಯಲ್ಲಿ, ‘ದಿ ಫೈರ್ ಯೋಗಿ’ ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಇದನ್ನು ಮಾಡಲು ಸಾಧ್ಯವಾಗುವ ಯೋಗಿಯ ಪ್ರಯಾಣದ ಕುರಿತಾದ ಸಾಕ್ಷ್ಯಚಿತ್ರವಾಗಿದೆ.
‘ದಿ ಫೈರ್ ಯೋಗಿ’ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ ಈ ಸಾಕ್ಷ್ಯಚಿತ್ರ ತಂಜಾವೂರಿನಲ್ಲಿ ಯೋಗಿ ರಾಮಬಾಹು ಸ್ವಾಮಿ ನಡೆಸಿದ ಅಪರೂಪದ ಅಗ್ನಿ ಆಚರಣೆಗೆ ಸಂಬಂಧಿಸಿದೆ. 63 ವರ್ಷದ ಯೋಗಿ ಕಳೆದ 45 ವರ್ಷಗಳಲ್ಲಿ 1,000 ದಿನಗಳಿಗಿಂತ ಹೆಚ್ಚು ಕಾಲ ಈ ಅಗ್ನಿ ಆಚರಣೆಯನ್ನು ಮಾಡಿದ್ದಾರೆ ಮತ್ತು ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಇದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿರುವುದನ್ನು ಸಹ ಕೇಳಬಹುದು.
ಆಜ್ ತಕ್ ಕೂಡ ರಾಮಬಾಹು ಸ್ವಾಮಿಯ ಕುರಿತು ವಿಡಿಯೋ ವರದಿ ಮಾಡಿದೆ. ಆದರೆ ಕುಂಭಮೇಳದಲ್ಲಿ ಸುಮಾರು 400 ಸಿದ್ಧ ಸಾಧುಗಳು ತಮ್ಮ ದೇಹವನ್ನು ಅಗ್ನಿದೇವತೆಗೆ ಅರ್ಪಿಸುತ್ತಿರುವುದನ್ನು BBC ತಂಡವು ವೀಡಿಯೊ ತೆಗೆದುಕೊಂಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಕುಂಭಮೇಳದಲ್ಲಿ ಸಿದ್ಧ ಸಾಧುಗಳ ಕುರಿತು BBC ತಂಡವು ಚಿತ್ರೀಕರಿಸಿದ ವೀಡಿಯೊ ತಂಜಾವೂರಿನಲ್ಲಿ ಯೋಗಿಯ ಕುರಿತಾದ ‘ದಿ ಫೈರ್ ಯೋಗಿ’ ಸಾಕ್ಷ್ಯಚಿತ್ರದ ದೃಶ್ಯಗಳನ್ನು ಪ್ರಸಾರ ಮಾಡಿದೆ. ಆದರೆ ಅದನ್ನು 400 ಸಾಧುಗಳು ತಮ್ಮ ದೇಹವನ್ನು ಅಗ್ನಿದೇವತೆಗೆ ಅರ್ಪಿಸುತ್ತಿರುವ ದೃಶ್ಯಗಳು ಬಿಬಿಸಿ ಪ್ರಸಾರ ಮಾಡಿದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗಾಜಾದ ‘ಶಿಫಾ ಆಸ್ಪತ್ರೆಯಲ್ಲಿ’ ಶಸ್ತ್ರಾಸ್ತ್ರಗಳ ಶೇಕರಣೆ ಮಾಡಲಾಗಿತ್ತೆ?