ಫ್ಯಾಕ್ಟ್‌ಚೆಕ್ : ಗಾಜಾದ ‘ಶಿಫಾ ಆಸ್ಪತ್ರೆಯಲ್ಲಿ’ ಶಸ್ತ್ರಾಸ್ತ್ರಗಳ ಶೇಕರಣೆ ಮಾಡಲಾಗಿತ್ತೆ?

ಗಾಜಾದ ‘ಆಲ್ ಶಿಫಾ’ ಆಸ್ಪತ್ರೆಯಲ್ಲಿ ದೊರೆತ ಅತ್ಯಂತ ನವೀನ ತಂತ್ರಜ್ಞಾನದ ಯುದ್ಧೋಪಕರಣಗಳು! ಇದೇನು ಆಸ್ಪತ್ರೆಯೋ ಅಥವಾ ಶಸ್ತ್ರಾಗಾರವೋ!? ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ದೊಡ್ಡ ಕೋಣೆಯೊಂದರಲ್ಲಿ ಹಲವು ರೀತಿಯ ಶಸ್ತ್ರಾಸ್ತ್ರಗಳು ಇರುವುದನ್ನು ನೋಡಬಹುದು. ಈ ವಿಡಿಯೋವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಮಾಸ್ ಸುರಂಗದಲ್ಲಿನ ಶಶ್ತ್ರಾಗಾರ ಎಂದು ಹಲವು ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ.

ಅನೇಕ ಭಾರತೀಯ ಪತ್ರಕರ್ತರು, ಸುರೇಶ್ ಚವ್ಹಾಂಕೆ ಮತ್ತು ಅಭಿಷೇಕ್ ಉಪಾಧ್ಯಾಯ ಅವರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುದರ್ಶನ್ ನ್ಯೂಸ್‌ನ ಸುರೇಶ್ ಚವ್ಹಾಂಕೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ಹಮಾಸ್ ಭಯೋತ್ಪಾದಕರು ಗಾಜಾದ ಅಲ್ ಶಿಫಾ ಆಸ್ಪತ್ರೆಯಲ್ಲಿ ಸುರಂಗವನ್ನು ನಿರ್ಮಿಸಿದ್ದಾರೆ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಸಂಗ್ರಹಿಸಿದ್ದಾರೆ. ಶಾಂತಿ ಮತ್ತು ಮಾನವೀಯತೆಗಾಗಿ ಕರೆ ನೀಡುವವರು ಈಗ ಆಸ್ಪತ್ರೆಯಂತಹ ಸ್ಥಳವನ್ನು ಭಯೋತ್ಪಾದನೆಗಾಗಿ ಬಳಸುತ್ತಾರೆಯೇ? ” ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ಶಸ್ತ್ರಾಸ್ತ್ರಗಳ ವಿಡಿಯೋ ಗಾಜಾ ಆಸ್ಪತ್ರೆಯೇ ಇರಿಸಲಾಗಿರುವ ಶಸ್ತ್ರಾಗಾರದ ದೃಶ್ಯವೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ವೀಡಿಯೊವನ್ನು ಹಮಾಸ್-ಇಸ್ರೇಲ್ ಯುದ್ಧ ಆರಂಭವಾಗುವ ಮುನ್ನವೇ ಟ್ವೀಟ್ ಮಾಡಿರುವುದು ಕಂಡುಬಂದಿದೆ.

ಅಕ್ಟೋಬರ್ 7 ರಂದು ಹಮಾಸ್-ಇಸ್ರೇಲ್ ಯುದ್ಧ ಆರಂಭವಾಗಿದೆ. ಆದರೆ ಈ ವಿಡಿಯೋವನ್ನು ಇಸ್ರೇಲಿ ಪತ್ರಕರ್ತ ಹನಾನ್ ಅಮಿಯುರ್ ಎಂಬುವವರು ಆಗಸ್ಟ್ 31 ರಂದು ಟ್ವೀಟ್ ಮಾಡಿದ್ದಾರೆ. ಇದು ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್ ನಗರದಲ್ಲಿ ಚಿತ್ರಿಸಲಾಗಿದೆ ಎಂದು ಬರೆದಿದ್ದಾರೆ. ವೆಸ್ಟ್ ಬ್ಯಾಂಕ್ ನಗರವು ಗಾಜಾದಂತೆ ಹಮಾಸ್‌ನಿಂದ ನಿಯಂತ್ರಿಸಲ್ಪಡುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಮೂಲ ವಿಡಿಯೋದಲ್ಲಿ ಪತ್ರಕರ್ತ ಹನಾನ್ ಅಮಿಯುರ್ “ಇಂದು ರಾಮಲ್ಲಾಹ್‌ದಲ್ಲಿ ಸಿಕ್ಕಿಬಿದ್ದಿದೆ,  ಓಸ್ಲೋದ 30 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸೂಕ್ತವಾದ ಔಪಚಾರಿಕ ನೀತಿಕಥೆ – ಜಿಯೋನಿಸ್ಟ್ ಉದ್ಯಮದ ಇತಿಹಾಸದಲ್ಲಿ ಅತ್ಯಂತ ಗಂಭೀರ ಮತ್ತು ಹಾನಿಕಾರಕ ತಪ್ಪು.” ಎಂದು ಬರೆದಿದ್ದಾರೆ. ಈ ಎಲ್ಲಾ ಆಧಾರಗಳಿಂದ ಈ ವಿಡಿಯೋ ಗಾಜಾದ ಆಸ್ಪತ್ರೆಯಲ್ಲ ಬದಲಿಗೆ ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್‌ ನಗರದ್ದು, ಆ ನಗರವನ್ನು ಹಮಾಸ್‌ಗಳು ನಿಯಂತ್ರಿಸುತ್ತಿಲ್ಲ ಮತ್ತು ಯುದ್ಧ ಆರಂಭವಾಗುವ ಮೊದಲೇ ಚಿತ್ರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ದೃಶ್ಯಾವಳಿಗಳು ಗಾಜಾದ ಆಸ್ಪತ್ರೆಯ ದೃಶ್ಯಗಳಲ್ಲ. ಆದರೆ ಇದನ್ನು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದುರಾದೃಷ್ಟವಶಾತ್‌ ‘ನಾನು ಹಿಂದೂ’ ಎಂದು ನೆಹರೂ ಹೇಳಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights