ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದು ರಾಮಮಂದಿರದ ಭೂಮಿ ಪೂಜೆ ವಿರೋಧಿಸಿ ಅಲ್ಲ! ಮತ್ಯಾಕೆ? ಈ ಸ್ಟೋರಿ ಓದಿ
ಆಗಸ್ಟ್ 5 2020 ರಂದು ಇತ್ತ ರಾಮ ಜನ್ಮ ಭೂಮಿ ಅಯೋಧ್ಯಯಲ್ಲಿ ಭೂಮಿ ಪೂಜೆ ನಡೆಯುತ್ತಿದ್ದರೆ, ಕಾಂಗ್ರೆಸ್ ಎಂಪಿಗಳು ಕಪ್ಪು ಬಟ್ಟಿ ಧರಿಸಿ ಪಾರ್ಲಿಮೆಂಟ್‌ಗೆ ಹೋಗಿದ್ದನ್ನು ಎಂದೂ ಮರೆಯಬೇಡಿ ಹಿಂದೂಗಳೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
“ರಾಮಮಂದಿರದ ಅಡಿಗಲ್ಲು ಇಟ್ಟಾಗ ಅದನ್ನು ವಿರೋಧಿಸಲು ಕೆಲವೊಂದಿಷ್ಟು ಸಂಸದರು ಕಪ್ಪು ಬಟ್ಟೆ ಹಾಕಿ ಸಂಸತ್ತಿಗೆ ಹೋಗಿದ್ದರು ಯೋಚನೆ ಮಾಡಿ ಇವರಿಗೆ ಹಿಂದೂಗಳು ಬೇಡ ಅವರ ಓಟು ಮಾತ್ರ ಬೇಕು” ಎಂಬ ಪ್ರತಿಪಾದನೆಯೊಂದಿಗೆ ಫೇಸ್‌ಬುಕ್‌ನಲ್ಲಿ ಫೋಟೊಗಳೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, NDTV ಮಾಡಿದ ವರದಿಯೊಂದು ಲಭ್ಯವಾಗಿದೆ.
NDTV ಮಾಡಿದ ವರದಿ ಪ್ರಕಾರ ಆಗಸ್ಟ್ 05, 2022ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿದೆ ಎಂದು ಉಲ್ಲೇಖಿಸಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರು ಕಪ್ಪು ಬಟ್ಟೆ ಧರಿಸಿ ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ಕುರಿತು ಸ್ಕ್ರೋಲ್ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ.
ಇನ್ನುಈ ಪ್ರತಿಭಟನೆಯ ಬ್ಯಾನರ್‌ಗಳಲ್ಲಿ, ಪತ್ರಿಕಾ ಹೇಳಿಕೆಗಳಲ್ಲಿ, ಘೋಷಣೆಗಳಲ್ಲಿ ಎಲ್ಲಿಯೂ ರಾಮಮಂದಿರದ ವಿರುದ್ಧ ಪದಗಳು ಕಂಡುಬಂದಿಲ್ಲ. ಒಂದು ವೇಳೆ ಇಂತಹ ಪ್ರತಿಭಟನೆಯನ್ನು ರಾಹುಲ್ ಮಾಡಿರುತ್ತಿದ್ದರೆ ಅದನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡತ್ತಿದ್ದವು. ಆದರೆ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ಏರಿಕೆ ಸೇರಿದಂತೆ ಆಡಳಿತ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ದೇಶಾದ್ಯಂತ 5 ಅಗಸ್ಟ್ 2020ರಂದು ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು, ರಾಮ ಜನ್ಮ ಭೂಮಿ ಅಯೋಧ್ಯಯಲ್ಲಿ ನಡೆಯುತ್ತಿದ್ದ ಭೂಮಿ ಪೂಜೆಯನ್ನು ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : KYC ಸಲ್ಲಿಸುವಂತೆ BSNL ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಅಸಲಿಯೋ? ನಕಲಿಯೋ?