ಫ್ಯಾಕ್ಟ್ಚೆಕ್: ಅಮೆರಿಕಾದಲ್ಲಿ ವೆಂಕಟೇಶ್ ಪ್ರಸಾದ್ ಗೌರವಾರ್ಥ ‘ಯೂನಿಟಿ’ ಕಲಾಕೃತಿ ಮಾಡಲಾಗಿದೆಯೇ?
ಅಮೇರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಅವರಿಗೆ ಸಂದ ಗೌರವ ಎಂಬ ಹೇಳಿಕೆಯೊಂದಿಗೆ ಟ್ವಿಟರ್ನಲ್ಲಿ “ತನ್ನ ತೋರು ಬೆರಳಿನಿಂದ ಆಕಾಶದ ಕಡೆಗೆ ಚಾಚಿದ ತೋಳಿನ” ಶಿಲ್ಪದ ಆಕೃತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ. 90 ರ ದಶಕದಲ್ಲಿ ಭಾರತ ತಂಡವನ್ನು ತನ್ನ ಮದ್ಯಮ ವೇಗದ ಬೌಲಿಂಗ್ನಿಂದ ಗೆಲುವಿನ ದಡ ಸೇರಿಸುತ್ತಿದ್ದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ಕಲಾ ಕೃತಿಯನ್ನು ಸ್ತಾಪಿಸಲಾಗಿದೆ ಎನ್ನುವಂತೆ ಹಂಚಿಕೊಳ್ಳಲಾಗಿದೆ.
https://twitter.com/Sudhirsachinfan/status/1556907452200759296
ಪೋಸ್ಟ್ನ ಆಕ್ರೈವ್ ಮಾಡಿದ ಲಿಂಕ್ಅನ್ನು ಇಲ್ಲಿ ನೋಡಬಹುದು.
https://twitter.com/knittins/status/1556616951493005312
ಪೋಸ್ಟ್ನ ಆರ್ಕೈವ್ ಮಾಡಿದ ಲಿಂಕ್ಅನ್ನು ಇಲ್ಲಿ ನೋಡಬಹುದು. ಪೋಸ್ಟ್ನಲ್ಲಿ ಮಾಡಲಾದ ಪ್ರತಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ವೆಂಕಟೇಶ್ ಪ್ರಸಾದ್ ಅವರು ಕ್ರಿಕೆಟ್ನಲ್ಲಿ ಮಾಡಿರುವ ಜೀವಮಾನದ ಸಾಧನೆಗಾಗಿ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ “ಆಕಾಶದ ಕಡೆಗೆ ಚಾಚಿದ ತೋಳಿನ, ತೋರು ಬೆರಳಿನ” ಕಂಚಿನ ಕಲಾಕೃತಿಯನ್ನು ಗೌರವ ಸೂಚಕವಾಗಿ ನಿರ್ಮಿಸಲಾಗಿದೆ, ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಿದಾಗ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ತಿಳಿದುಬಂದಿದೆ.
ವಾಸ್ತವವಾಗಿ ಇದು NBA ಅಥ್ಲೀಟ್ ಜೋಯಲ್ ಎಂಬಿಡ್ ಅವರ ತೋಳು ಮತ್ತು ಕೈಯಿಂದ ಮಾದರಿಯಾಗಿದೆ “ಇದು ಏಕತೆ, ಭರವಸೆ, ಒಟ್ಟಿಗೆ ಬರುವುದರ ಬಗ್ಗೆ ನ್ಯೂಯಾರ್ಕ್ನಲ್ಲಿ ಜನರು ತಲೆ ಎತ್ತಿ ನೋಡುವುದಿಲ್ಲ, ಆದ್ದರಿಂದ ಇದು ಕ್ರಿಯೆಯ ಕರೆ” ಎಂದು ಕಲಾಕೃತಿ ರಚಿಸಿದ ಹ್ಯಾಂಕ್ ವಿಲ್ಲಿಸ್ ಥಾಮಸ್ ಹೇಳಿದ್ದಾರೆ. ಶಿಲ್ಪವು ತನ್ನ ತೋರು ಬೆರಳಿನಿಂದ ಆಕಾಶದ ಕಡೆಗೆ ಚಾಚಿದ ತೋಳನ್ನು ಹೊಂದಿದೆ. ಇದನ್ನು “ಯೂನಿಟಿ” (2019) ಎಂದು ಹೆಸರಿಸಲಾಗಿದೆ. “ಯೂನಿಟಿ” ರಚಿಸಲು ಸುಮಾರು ಐದು ವರ್ಷಗಳನ್ನು ತೆಗೆದುಕೊಂಡಿತು ಎಂದು ಕಲಾಕಾರ ತಿಳಿಸಿದ್ದಾರೆ.

ಡೌನ್ಟೌನ್ ಬ್ರೂಕ್ಲಿನ್ನ ಹೊಸ ನಿರ್ಮಾಣ ಮತ್ತು ಐತಿಹಾಸಿಕ ಕಟ್ಟಡಗಳ ನಡುವೆ ಪಾದಚಾರಿ ಮಾರ್ಗವನ್ನು ಭೇದಿಸಿ, ಒಂದು ದೈತ್ಯ, ಸ್ನಾಯುವಿನ ತೋಳು, ಮೇಲಕ್ಕೆ ತೋರಿಸುತ್ತಾ, ಆಕಾಶದ ಕಡೆಗೆ ಏರುತ್ತದೆ. ಟಿಲ್ಲರಿ ಮತ್ತು ಆಡಮ್ಸ್ ಸ್ಟ್ರೀಟ್ಗಳ ಛೇದಕದಲ್ಲಿರುವ ಈ ಹೊಸ ಸಾರ್ವಜನಿಕ ಕಲಾಕೃತಿಯು ಕಲಾವಿದ ಹ್ಯಾಂಕ್ ವಿಲ್ಲಿಸ್ ಥಾಮಸ್ ಅವರ ಶಿಲ್ಪವಾಗಿದೆ. 22.5-ಅಡಿ ಕಂಚಿನ ತೋಳು ಬ್ರೂಕ್ಲಿನ್ ಸೇತುವೆಯ ಬ್ರೂಕ್ಲಿನ್ ಪ್ರವೇಶದ್ವಾರದ ಬಳಿ ಜನರನ್ನು ಸ್ವಾಗತಿಸುತ್ತದೆ. ಯುನಿಟಿ ಎಂಬ ಶೀರ್ಷಿಕೆಯ ಈ ತುಣುಕು ಬ್ರೂಕ್ಲಿನ್ನ ಮಹತ್ವಾಕಾಂಕ್ಷೆಯ ಮನೋಭಾವವನ್ನು ಪ್ರತಿನಿಧಿಸುತ್ತದೆ.
ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ವೆಂಕಟೇಶ್ ಪ್ರಸಾದ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮಾಡಿರುವುದು ನಿಜ ಆದರೆ ಈ “ಯ್ಯೂನಿಟಿ” ಕಲಾಕೃತಿಯು ವೆಂಕಟೇಶ್ ಪ್ರಸಾದ್ ಅವರ ಸಾಧನೆಗಾಗಿ ನಿರ್ಮಿಸಲಾಗಿದೆ ಎಂಬುದು ಸುಳ್ಳು. ಎಲ್ಲಿಯೂ ಇದರ ಬಗ್ಗೆ ವರದಿಗಳಾಗಲಿ, ಉಲ್ಲೇಖಗಳಾಗಲಿ ಇಲ್ಲ.
The only time he didn't do his trademark celebration pic.twitter.com/MKVvRWYuVd
— Nitin Sundar (@knittins) August 9, 2022
1996ರ ಕ್ರಿಕೆಟ್ ವಿಶ್ವಕಪ್ನಲ್ಲಿ, ಪಾಕಿಸ್ತಾನದ ಬ್ಯಾಟ್ಸ್ಮನ್ ಅಮೀರ್ ಸೊಹೈಲ್ ಅವರು ಪ್ರಸಾದ್ರವರ ಬೌಲಿಂಗ್ನಲ್ಲಿ ಗಡಿರೇಖೆಯನ್ನು ದಾಟಿಸಿ ಬೌಂಡರಿಯನ್ನು ಹೊಡೆದ ನಂತರ ಪ್ರಸಾದ್ರವರು ಮುಂದಿನ ಎಸೆತದಲ್ಲಿ ಸೊಹೈಲ್ರನ್ನು ಔಟ್ ಮಾಡಿದರು. ಇದು ಪ್ರಸಾದ್ರವರ ಕ್ರಿಕೆಟ್ ವೃತ್ತಿಯ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ಆದರೆ ವೆಂಕಟೇಶ್ ಪ್ರಸಾದ್ ಅವರ ಕ್ರಿಕೆಟ್ ಸಾಧನೆಗೂ ನ್ಯೂಯಾರ್ಕ್ ನಗರದ ಡೌನ್ಟೌನ್ ಬ್ರೂಕ್ಲಿನ್ನ ‘ಯ್ಯೂನಿಟಿ’ ಸ್ಟಾಚ್ಯೂಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಬುರ್ಖಾ ಧರಿಸಿದ್ದ ವ್ಯಕ್ತಿಯಿಂದ ಮಗು ಅಪಹರಣ ವಿಡಿಯೊ ! ನಡೆದಿದ್ದೇನು ?

