ದೇಶದಲ್ಲಿ ಕೊರೊನಾ ಏರಿಳಿತ : 24,354 ಹೊಸ ಕೇಸ್ – 234 ಜನ ಬಲಿ!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಏರಿಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 24,354 ಹೊಸ ಪ್ರಕರಣಗಳು ದಾಖಲಾಗಿವೆ. ಕೊರೊನಾ ಮಹಾಮಾರಿಗೆ ಒಂದೇ ದಿನ 234 ಜನ ಬಲಿಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ 24,354 ಹೊಸ ಕೋವಿಡ್ -19 ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,37,91,061 ಕ್ಕೆ ಏರಿಕೆಯಾಗಿದೆ. 234 ಹೊಸ ಸಾವುಗಳೊಂದಿಗೆ ದೇಶದ ಒಟ್ಟು ಸಾವಿನ ಸಂಖ್ಯೆ 4,48,573 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನೂ ಒಟ್ಟು ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,30,68,599ರಷ್ಟಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,73,889 ರಷ್ಟಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಬಲಿಯಾದ 234 ಜನರ ಪೈಕಿ ಕೇರಳದಲ್ಲಿ 95 ಜನ ಬಲಿಯಾದರೆ ಮಹಾರಾಷ್ಟ್ರದಲ್ಲಿ 50 ಮಂದಿ ಅಸುನೀಗಿದ್ಧಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 1,39,117 ಜನ ಬಲಿಯಾದರೆ, ಕರ್ನಾಟಕದಲ್ಲಿ 37,807, ತಮಿಳುನಾಡಿನಲ್ಲಿ 35,603, ಕೇರಳದಲ್ಲಿ 25,182, ದೆಹಲಿಯಲ್ಲಿ 25,087, ಉತ್ತರ ಪ್ರದೇಶದಲ್ಲಿ 22,892, ಮತ್ತು ಪಶ್ಚಿಮ ಬಂಗಾಳದಲ್ಲಿ 18,806 ಸೇರಿದಂತೆ ಒಟ್ಟು 4,48,573 ಸಾವುಗಳು ಇಲ್ಲಿಯವರೆಗೆ ವರದಿಯಾಗಿವೆ.

ಇನ್ನೂ ಒಂದು ದಿನದಲ್ಲಿ ದಾಖಲಾದ 24,354 ಪ್ರಕರಣಗಳ ಪೈಕಿ ಕೇರಳದಲ್ಲಿ 13,834 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,105 ಪ್ರಕರಣಗಳು, ಮಿಜೋರಾಮ್ 1,626, ತಮಿಳುನಾಡಿನಲ್ಲಿ 1,597, ಆಂಧ್ರಪ್ರದೇಶದಲ್ಲಿ 809 ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 69,33,838 ಡೋಸ್ ಲಸಿಕೆ ಹಾಕಲಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 89,74,81,554 ಡೋಸ್ ಲಸಿಕೆ ನೀಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights