ಮರ್ಯಾದಗೇಡು ಹತ್ಯೆ: ಯುವಕನ ಸಜೀವ ದಹನ; ರಾಜಕೀಯಕ್ಕೆ ಬಳಕೆಯಾಗುತ್ತಿದೆ ಅಮಾನುಷ ಘಟನೆ?

ಮಧ್ಯಪ್ರದೇಶ ಇತರ ಹಿಂದುಳಿದ ವರ್ಗ(ಓಬಿಸಿ)ಕ್ಕೆ ಸೇರಿದ್ದ ಯುವಕನೊಬ್ಬ, ಬ್ರಾಹ್ಮಣ ಸಮುದಾಯದ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ, ಈ ಇಬ್ಬರಿಗೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಘಟನೆ ಈಗ ಚುನಾವಣಾ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಅಲ್ಲಿನ ಉಪಚುನಾವಣೆಗೆ ಒಂದು ತಿಂಗಳ ಮುಂಚಿತವಾಗಿ ಜಾತಿ ರಾಜಕೀಯದ ಜ್ವಾಲೆಗೆ ಸಿಲುಕಿದೆ.

ಸೆಪ್ಟೆಂಬರ್ 16 ರಂದು ತಡರಾತ್ರಿ, ಸಾಗರ್ ಜಿಲ್ಲೆಯ ಸೆಮ್ರಾ ಲೆಹರಿಯಾ ಗ್ರಾಮದಲ್ಲಿ 25 ವರ್ಷದ ರಾಹುಲ್ ಯಾದವ್ ಮತ್ತು ಆತನ 23 ವರ್ಷದ ಪ್ರೇಯಸಿಗೆ ಬೆಂಕಿ ಹಚ್ಚಲಾಯಿತು. ಯುವಕ ಸಾವನ್ನಪ್ಪಿದ್ದು, ಯುವತಿಯ ಶೇ.60% ದೇಹ ಸುಟ್ಟುಹೋಗಿದೆ.

ಒಬಿಸಿ ಸಮುದಾಯಕ್ಕೆ ಸೇರಿದ ಯುವಕ ತಾನು ಸಾಯುವ ಮೊದಲು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ತನ್ನ ಪ್ರೇಯಸಿಯ ಬ್ರಾಹ್ಮಣ ಕುಟುಂಬದ ವಿರುದ್ದ ಆರೋಪಿಸಿದ್ದನು.

ಆತ ತಾವು ಪ್ರೀತಿಸಿದ್ದ ಹುಡುಗಿಯ ತಂದೆ, ಆಕೆಯ ಅಣ್ಣ ಮತ್ತು ಇತರ ಇಬ್ಬರನ್ನು ಒಳಗೊಂಡಂತೆ ನಾಲ್ಕು ಜನರನ್ನು ಹೆಸರಿಸಿದ್ದನು. ಆ ನಾಲ್ವರನ್ನೂ ಬಂಧಿಸಲಾಯಿತು ಮತ್ತು ಅವರ ಮನೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದರು.

ಆದರೆ ಈಗ, ಮಧ್ಯಪ್ರದೇಶ ಸರ್ಕಾರವು ಈ ಕ್ರಮವನ್ನು ಕೈಗೆತ್ತಿಕೊಂಡಿದೆ ಎಂದು ತೋರುತ್ತದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯನ್ನು ಸಿಬಿಐ ತನಿಖೆಗೆ ಆದೇಶಿಸಿದ್ದಾರೆ ಮತ್ತು ಯುವತಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸೂಚಿಸಿದ್ದಾರೆ.

“ಘಟನೆಯ ಕುರಿತು ಸಿಬಿಐ ತನಿಖೆಗೆ ಮುಖ್ಯಮಂತ್ರಿ ಕೇಳಿದ್ದಾರೆ. ಆಕೆಗೆ ಉತ್ತಮ ಚಿಕಿತ್ಸೆಯನ್ನು ವ್ಯವಸ್ಥೆ ಮಾಡುವಂತೆ ನಮಗೆ ನಿರ್ದೇಶನ ನೀಡಿದ್ದಾರೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು” ಎಂದು ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ ಹೇಳಿದ್ದಾರೆ.

ಆದರೆ, ಘಟನೆ ನಡೆದು ಕೆಲ ದಿನಗಳ ನಂತರ ಪ್ರಕರಣವು ಮೊದಲ ಟ್ವಿಸ್ಟ್‌ ಕಂಡಿದೆ. ತಮ್ಮ ಸ್ಥಳದಲ್ಲಿ ಆತ ಬೆಂಕಿ ಹಚ್ಚಲು ಪ್ರಯತ್ನಿಸುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಈ ವೇಳೆ, ತನ್ನ ಕುಟುಂಬ ಇಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿತು ಎಂದು ಆಕೆ ಹೇಳಿದ್ದಾರೆ.

ಆದರೆ, ಇದಕ್ಕೂ ಮುಂಚೆ, ಆಕೆ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ದಾಖಲಿಸುವ, “ತನ್ನ ಕುಟುಂಬದ ಸದಸ್ಯರು ತಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ” ಎಂದು ಹೇಳೀಕೆ ದಾಖಲಿಸಿದ್ದರು.

ಇದನ್ನೂ ಓದಿ: ಪತ್ನಿಯನ್ನು ಕಳೆದುಕೊಂಡ ದುಃಖ; ಪತ್ನಿಯ ಚಿತೆಗೆ ಹಾರಿ ಪತಿಯೂ ಸಜೀವ ದಹನ!

ಆದಾಗ್ಯೂ, ಆ ಹೊತ್ತಿಗೆ, ಗ್ರಾಮಸ್ಥರು ಆರೋಪಿಗಳ ಮನೆಯನ್ನು ನೆಲಸಮಗೊಳಿಸುವಂತೆ ಒತ್ತಾಯಿಸಿದ್ದರು. ಅವರ ಬೇಡಿಕೆಯಂತೆ ಹಿರಿಯ ಸಚಿವರು ಮತ್ತು ಸಾಗರ್‌ನ ಶಾಸಕರಾದ ಭೂಪೇಂದ್ರ ಸಿಂಗ್ ಅವರು ಮನೆಯನ್ನು ನೆಲಸಮಗೊಳಿಸಲು ಆದೇಶಿದರು.

ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರಾಹುಲ್ ಯಾದವ್ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದರು. ಒಬಿಸಿ ಸಮುದಾಯದ ಪ್ರತಿಭಟನೆಯ ನಂತರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಶಿಫಾರಸು ಮಾಡುವುದಾಗಿ ಹೇಳಿದ್ದರು.

ಯುವತಿಯ ಹೇಳಿಕೆಯ ನಂತರ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ ಮತ್ತು ಭೂಪೇಂದ್ರ ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿದೆ.

“ಒಂದು ಸಮುದಾಯದ ಬೇಡಿಕೆಯ ನಂತರ ಆಡಳಿತವು ಮನೆಯನ್ನು ಕೆಡವಿತು. ಈಗ, ಇನ್ನೊಂದು ಸಮುದಾಯದ ಮಾತನ್ನು ಕೇಳಿದ ನಂತರ, ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿದೆ. ಇವರು (ಮ.ಪ್ರ. ಸರ್ಕಾರ) ಆರೋಪಿಗಳ ಮನೆಯನ್ನು ನೆಲಸಮಗೊಳಿಸುವ ಯುಪಿ ಮಾದರಿಯನ್ನು ನಕಲು ಮಾಡುತ್ತಿದ್ಧಾರೆ. ಆದರೆ ಅದು ಕಾನೂನುಬಾಹಿರವಾಗಿದ್ದರೆ, ನೀವು ಯಾಕೆ ಮೌನವಾಗಿದ್ದೀರಿ? ಮೊದಲು ಅವರು (ಮ.ಪ್ರ. ಸರ್ಕಾರ) ನಟಿಸಿದರು ಮತ್ತು ಈಗ ತನಿಖೆಯ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಕಾಂಗ್ರೆಸ್‌ ವಕ್ತಾರ ನರೇಂದ್ರ ಸಲೂಜಾ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಒಂದು ಲೋಕಸಭಾ ಮತ್ತು ಮೂರು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಈ ವೇಳೆ ಒಂದು ಲಕ್ಷ ಜನರನ್ನು ಬಿಜೆಪಿ ವಿರುದ್ಧ ರ್ಯಾಲಿಯಲ್ಲಿ ಸಜ್ಜುಗೊಳಿಸುವುದಾಗಿ ಪ್ರಬಲ ಸಮುದಾಯ ಘೋಷಿಸಿದ ಬೆನ್ನಲ್ಲೇ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಘೋಷಿಸಲಾಗಿದೆ.

ಸಾಗರ್ ಜಿಲ್ಲೆಯು ಗರಿಷ್ಠ ಎಂಟು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಈ ಪೈಕಿ ಪೃಥ್ವಿಪುರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಅಲ್ಲಿ ಮೇಲ್ಜಾತಿ ಸಮುದಾಯಗಳು ಮತ್ತು ಒಬಿಸಿಗಳು ಗಣನೀಯ ಮತವನ್ನು ಹೊಂದಿವೆ. ಕಾಂಗ್ರೆಸ್ ನ ಮಾಜಿ ಸಚಿವ ಬ್ರಿಜೇಂದ್ರ ರಾಥೋಡ್ ಅವರ ಮರಣದ ನಂತರ ಈ ಸ್ಥಾನ ಖಾಲಿಯಾಗಿದೆ. ಯಾವುದೇ ಸಮುದಾಯದ ಅಸಮಾಧಾನವು ಆಡಳಿತಾರೂಢ ಬಿಜೆಪಿಯ ಭವಿಷ್ಯಕ್ಕೆ ಕುತ್ತುತರಲಿದೆ ಎಂದು ಹೇಳಲಾಗಿದೆ

ಇದನ್ನೂ ಓದಿ: ಉತ್ತರ ಪ್ರದೇಶ: ” ಒಂದು ಜಿಲ್ಲೆ-ಒಂದು ಉತ್ಪನ್ನ” ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್ ನೇಮಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights