ಪತ್ನಿಯನ್ನು ಕಳೆದುಕೊಂಡ ದುಃಖ; ಪತ್ನಿಯ ಚಿತೆಗೆ ಹಾರಿ ಪತಿಯೂ ಸಜೀವ ದಹನ!

ಪತ್ನಿಯನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ವೃದ್ಧರೊಬ್ಬರು ತಮ್ಮ ಪತ್ನಿಯ ಚಿತೆಗೆ ಹಾರಿ ಸಜೀವ ದಹನವಾಗಿರುವ ಘಟನೆ ಒಡಿಶಾದ ಕಾಲಹಂದಿ ಜಿಲ್ಲೆ ಗೋಲಮುಂಡ ತಾಲ್ಲೂಕಿನ ಸಿಯಾಲ್‌ಜೋಡಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ನೀಲಮಣಿ ಸಬರ್‌ ಎಂಬ ವೃದ್ದನ ಪತ್ನಿ ರಾಯಿಬರಿ ಎಂಬುವವರು ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ವೇಳೆ ವೃದ್ದ ನೀಲಮಣಿ ಕೂಡ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ದಂಪತಿಗಳ ನಾಲ್ವರು ಪುತ್ರರು ಮತ್ತು ಸಂಬಂಧಿಕರು ಅಂತ್ಯಕ್ರಿಯೆಯ ನಂತರ ಸಂಪ್ರದಾಯದಂತೆ ಸ್ನಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಲಮಣಿ ಅವರು ಗ್ರಾಮ ಪಂಚಾಯಿತಿ ಸಮಿತಿಯ ಮಾಜಿ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಅವರ ಕುಟುಂಬದವರು ಮಾಹಿತಿ ನೀಡಿಲ್ಲ. ಇತರ ಮೂಲಗಳಿಂದ ನಮಗೆ ಮಾಹಿತಿ ದೊರೆತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಕೆಗಾಂವ್‌ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ದಮು ಪರಜ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ಅಮರಿಂದರ್‌ರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲು ಶಾಸಕರ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights