ಸಿನಿಮಾ ಸೆಟ್‌ ದ್ವಂಸ; ಭಜರಂಗದಳದ ಜಿಲ್ಲಾಧ್ಯಕ್ಷ ಬಂಧನ!

ಮಲಯಾಳಂ ಭಾಷೆಯ ‘ವಿನ್ನಲ್ ಮುರಲಿ’ ಸಿನಿಮಾ ನಿರ್ಮಾಣಕ್ಕಾಗಿ ಚಿತ್ರತಂಡ ಕೇರಳದ ಪೆರಿಯಾರ್ ನದಿ ದಂಡೆಯಲ್ಲಿ ಶೂಟಿಂಗ್‌ ಶಾಟ್‌ಗಾಗಿ ಸೆಟ್‌ ಹಾಕಿತ್ತು. ಲಾಕ್‌ಡೌನ್ ಸಮಯಲ್ಲಿ ಕೆಲವು ದುಷ್ಕರ್ಮಿಗಳು ಶೂಟಿಂಗ್‌ ಸೆಟ್ಟನ್ನು ಹಾಳುಮಾಡಿದ್ದರು.

ಶೂಟಿಂಗ್‌ ಸೆಟ್‌ ಹಾಕಲಾಗಿದ್ದ ಸ್ಥಳದ ಹತ್ತಿರದಲ್ಲಿಯೇ ಹಿಂದೂ ದೇವಾಲಯವಿತ್ತು. ದೇವಾಲಯದ ಬಳಿ ಶೂಟಿಂಗ್‌ ಮಾಡುವುದು ಬೇಡ, ಅದು ಸರಿಯಲ್ಲ ಎಂದು ಮಹಾದೇವ ದೇವಾಲಯ ಮಂಡಳಿ ಮುನ್ನಚ್ಚರಿಕೆ ನೀಡಿತ್ತು. ದೇವಾಲಯದವರ ಬೆದರಿಕೆಗೆ ಬಗ್ಗದ ಚಿತ್ರತಂಡ ಚಿತ್ರೀಕರಣ ಮುಂದುವರೆಸಿತ್ತು. ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಈ ಆ ಸಮಯದಲ್ಲಿ ಚಭಜರಂಗದ ದಳದ ಪುಂಡ ಕಾರ್ಯಕರ್ತರು ಶೂಟಿಂಗ್‌ ಸೆಟ್‌ಅನ್ನು ದ್ವಂಸ ಮಾಡಿದ್ದಾರೆ.

ದೇವಾಲಯದ ಮಂಡಳಿ ಹಾಗೂ ಭಜರಂಗದಳದ ಕಾರ್ಯಕರ್ತರು ನಾಶ ಮಾಡಿದ್ದರ ವಿರುದ್ಧ ಚಿತ್ರತಂಡ ಪೊಲೀಸರಿಗೆ ದೂರು ನೀಡಿದ್ದರು. ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತನೊಬ್ಬ ಸೆಟ್‌ ಹಾಳು ಮಾಡುತ್ತಿರುವ ಫೋಟೋವನ್ನು ಶೇರ್‌ ಮಾಡಿದ್ದ ಭಜರಂಗದಳದ ಜಿಲ್ಲಾಧ್ಯಕ್ಷ ಆತನಿಗೆ ಧನ್ಯವಾದ ಹೇಳಿದ್ದನು.

ಅದನ್ನೇ ಆಧಾರವಾಗಿಟ್ಟುಕೊಂಡಿರುವ ಪೊಲೀಸರು ಆತನನ್ನು ಹಾಗೂ ಆತನ ಸಂಗಡಿಗರನ್ನು ಬಂಧಿಸಿದ್ದಾರೆ.

‘ಈ ರೀತಿಯ ಗಲಾಟೆಗಳಿಗೆ ಕೇರಳದಲ್ಲಿ ಜಾಗವಿಲ್ಲ. ಲಕ್ಷಾಂತರ ವೆಚ್ಚದಿಂದ ಸೆಟ್‌ ಹಾಕಲಾಗುತ್ತದೆ. ಲಾಕ್‌ಡೌನ್ ಇದ್ದ ಕಾರಣ ಶೂಟಿಂಗ್‌ ಮುಂದಾಡಲಾಗಿದೆ. ಇಲ್ಲವಾಗಿದ್ದರೆ ಚಿತ್ರೀಕರಣ ಮುಗಿಸುತ್ತಿದ್ದರು. ಈ ದುಷ್ಕೃತ್ಯವನ್ನು ಕೇರಳ ಸರ್ಕಾರ ಸಹಿಸುವುದಿಲ್ಲ. ಅವರಿಗೆ ಶಿಕ್ಷೆ ಆಗಲಿದೆ’ ಎಂದು ಕೇರಳ ಸಿಎಂ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights